Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪರಿಸರ ಸ್ನೇಹಿ ಜೀವನ ಮಾಡಿ, ಓಝೋನ್ ಪದರ ರಕ್ಷಣೆಮಾಡಿ : ಡಾ. ಎಚ್. ಕೆ. ಎಸ್. ಸ್ವಾಮಿ

Facebook
Twitter
Telegram
WhatsApp

 

ಚಿತ್ರದುರ್ಗ, (ಸೆ.16) : ಮನುಷ್ಯರು ಪರಿಸರವನ್ನ ಯಥೇಚ್ಚವಾಗಿ ದುರ್ಬಳಕೆ ಮಾಡಿಕೊಂಡಿದ್ದರಿಂದ ಇಂದು ವಿಶ್ವಾದ್ಯಂತ ಓಝೋನ್ ಪದರವು ತೆಳುವಾಗುತ್ತಾ ಬರುತ್ತಿದೆ, ಅದರ ಮೂಲಕ ಬರುವ ವಿಕಿರಣಗಳು ಮಾನವ ಸಂಕುಲವನ್ನು ನಾಶ ಮಾಡುವ ಸಂಭವವಿದೆ, ಜೀವಸಂಕುಲವನ್ನು, ಜೀವವೈವಿಧ್ಯತೆಯನ್ನು ಸಂರಕ್ಷಿಸಿ ಇಟ್ಟುಕೊಳ್ಳಲು ಪರಿಸರ ನಿರ್ಮಿಸಿಕೊಂಡಿದ್ದ ಹೊರಕವಚವನ್ನ, ನಾವು ಗೊತ್ತಿದ್ದೂ ಸಹ ನಾಶ ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮತಿ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ವಿಷಾದಿಸಿದರು.

ನಗರದ ಚಿನ್ಮೂಲಾದ್ರಿ ರಾಷ್ಟ್ರೀಯ  ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವ ಓಝೋನ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮುಂದುವರಿದ ರಾಷ್ಟ್ರಗಳಂತೂ ಯಥೇಚ್ಚವಾಗಿ ರಾಸಾಯನಿಕಗಳನ್ನು ಬಳಕೆ ಮಾಡಿ, ಓಜೋನ್ ಪದರವನ್ನು ರಂಧ್ರ ಮಾಡುವುದರ ಮುಖಾಂತರ ಮನುಕುಲಕ್ಕೆ ಗಂಡಾಂತರವನ್ನು ತಂದೊಡ್ಡಿವೆ, ವಿಶ್ವದಲ್ಲಿರುವ ಯಾವ ಮುಂದುವರಿದ ರಾಷ್ಟ್ರಗಳೂ ಸಹ, ತಮ್ಮಲ್ಲಿರುವ ರಾಸಾಯನಿಕಗಳ ಸಂಖ್ಯೆಯನ್ನು ಕಡಿಮೆ ಬಳಕೆ ಮಾಡುವುದರ ಬಗ್ಗೆ ಮುಂದಾಳತ್ವ ವಹಿಸುತ್ತಿಲ್ಲ. ಮುಂದುವರಿಯುತ್ತಿರುವ ರಾಷ್ಟ್ರಗಳು ಸಹ ಓಝೋನ್ ಪದರದ ಬಗ್ಗೆ ಗಮನಹರಿಸುತ್ತಿಲ್ಲ ಎಂದರು.

ಮಾನವನ ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚು ರಾಸಾಯನಿಕಗಳನ್ನು ಬಳಕೆ ಮಾಡಿದ್ದರ ದುಷ್ಪರಿಣಾಮವಾಗಿ ಇಂದು, ಓಝೋನ್ ಪದರವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ, ಕೈಗಾರೀಕರಣ, ಪೆಟ್ರೋಲ್ ಡೀಸೆಲ್‌ಗಳ ದುರ್ಬಳಕೆ, ರಾಸಾಯನಿಕ ಕೃಷಿ ಪದ್ಧತಿ, ಅಂತರಿಕ್ಷಯಾನದಲ್ಲಿ ಆಗುತ್ತಿರುವ ಸಂಶೋಧನೆಗಳು, ಯುದ್ಧಕ್ಕಾಗಿ ಬಳಸುತ್ತಿರುವ ಸ್ಫೋಟಕಗಳು,  ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಅವುಗಳನ್ನು ಅಧ್ಯಯನ ಮಾಡಿ ನಿಯಂತ್ರಣದಲ್ಲಿಟ್ಟು ಇಟ್ಟುಕೊಳ್ಳಬೇಕಾಗಿದೆ ಎಂದರು.

ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಯಂತ್ರಣ ಸಾಧಿಸಿ, ಮನುಷ್ಯ ಆದಷ್ಟು ಪರಿಸರಸ್ನೇಹಿ ಜೀವನವನ್ನ ಮಾಡಿ, ಮುಂದಿನ ಜನಾಂಗಕ್ಕಾದರೂ ನಾವು ಓಝೋನ್ ಪದರವನ್ನು ರಕ್ಷಿಸಿ ಬಿಟ್ಟು ಹೋಗಬೇಕಾಗಿದೆ. ಇಲ್ದಿದ್ದರೆ  ಮುಂದಿನ ಜನಾಂಗ ನಮ್ಮನ್ನು ಶಪಿಸದೇ ಬಿಡದು. ಬಹಳಷ್ಟು ವಸ್ತುಗಳನ್ನ ಗ್ರಾಮೀಣ ಮಟ್ಟದಲ್ಲೇ, ಗೃಹ ಕೈಗಾರಿಕೆಗಳಲ್ಲಿ ತಯಾರು ಮಾಡಿ, ಜೀವನವನ್ನು ಸರಳವಾಗಿಸಿಕೊಂಡರೇ, ಪರಿಸರ ಸಹ ನಮ್ಮೊಂದಿಗೆ ಸಹಕರಿಸುತ್ತದೆ. ನಗರೀಕರಣ, ಕೈಗಾರೀಕರಣದ ದುಷ್ಪರಿಣಾಮವನ್ನು ನಾವು ಎದುರಿಸಬೇಕಾಗಿದೆ, ಮಕ್ಕಳಲ್ಲಿ ನಾವು ಪರಿಸರ ಪ್ರಜ್ಞೆ ಮೂಡಿಸಿ, ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕು. ಶಿಕ್ಷಿತರಿಂದಲೂ ಸಹ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು, ಪರಿಸರ ಪ್ರಜ್ಞೆಯನ್ನು ಕಾರ್ಯರೂಪಕ್ಕೆ ತರಬೇಕಾಗಿದೆ, ಮಾತಿಗಿಂತ ಕೃತಿಯಲ್ಲಿ ಬದಲಾವಣೆ ತರಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಕಾರ್ಯದರ್ಶಿಗಳಾದ ಎಂ.ಆರ್. ನಾರಾಯಣಪ್ಪರವರು ಮಾತನಾಡುತ್ತಾ ಗಾಂಧೀಜಿಯವರ ಸಿದ್ಧಾಂತಗಳನ್ನು ಇಂದಿನ ಜನಾಂಗಕ್ಕೆ ತಿಳಿಸಿಕೊಟ್ಟು, ಪರಿಸರ ಸಂರಕ್ಷಣೆ ಬಗ್ಗೆ ಮನ ಪರಿವರ್ತಿಸಬೇಕು, ಬಹಳಷ್ಟು ಗ್ರಾಮೀಣ ಹುದ್ದೆಗಳನ್ನು ನಾಶಮಾಡಿಕೊಂಡಿದ್ದರ ದುಷ್ಪರಿಣಾಮವಾಗಿ ಇಂದು ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ ಎಂದರು.

ವಿಜ್ಞಾನ ಶಿಕ್ಷಕರಾದ ಟಿ. ಶ್ರೀನಿವಾಸ್‌ರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಓಝೋನ್ ಪದರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು, ಚಿತ್ರಕಲೆ, ಭಾಷಣ ಸ್ಪರ್ಧೆ, ಚಟುವಟಿಕೆಗಳ ಮುಖಾಂತರ, ತಿಂಗಳಿಗೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಓಜೋನ್ ಪದರದ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಓಝೋನ್ ಬಗ್ಗೆ ಬರೆದ ವರ್ಣಚಿತ್ರಗಳಿಗೆ ಬಹುಮಾನವನ್ನು ವಿತರಿಸಲಾಯಿತು, ಪ್ಲಾಸ್ಟಿಕ್ ಮರುಬಳಕೆ ಬಗ್ಗೆ ಮಾದರಿಗಳನ್ನು ಮಾಡಿ ಮಕ್ಕಳಿಗೆ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳೆಲ್ಲರೂ ಛತ್ರಿಗಳನ್ನು ತೆಗೆದುಕೊಂಡು, ಸಭಾಂಗಣದಲ್ಲಿ ನೆರೆದು ವಿಶ್ವ ಓಝೋನ್  ದಿನಾಚರಣೆಯನ್ನು ವಿಜೃಂಭಣೆಂದ ಆಚರಿಸಿ, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಪಿ. ಕೃಷ್ಣಪ್ಪ ಸ್ವಾಗತಿಸಿದರು, ಕನ್ನಡ ಶಿಕ್ಷಕರಾದ ಹೆಚ್. ಮುರಳಿ ವಂದಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!