ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ಸಾಹಿತಿ, ಕವಿ, ನಾಟಕಕಾರರನ್ನು ಸಮಾಜದಲ್ಲಿ ಗೌರವದಿಂದ ಕಾಣವುದು ದೂರ ಸರಿಯುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ವಿಷಾಧಿಸಿದರು.
ಸಮತಾ ಸಾಹಿತ್ಯ ವೇದಿಕೆ ಚಿತ್ರದುರ್ಗ, ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ವೇದಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಉಷೆ ಕವನ ಸಂಕಲನ ಕೃತಿ ಬಿಡುಗಡೆ ಹಾಗೂ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಆಡಳಿತಗಾರರು ಅಧಿಕೃತ ಶಾಸನ ಕತೃಗಳಾದರೆ ಸಾಹಿತಿಗಳು ಸಮಾಜದ ಅನಧಿಕೃತ ಕತೃಗಳಾಗಿದ್ದಾರೆ. ಸಾಹಿತ್ಯ ಎಂದರೆ ಸ್ವಹಿತ ಮತ್ತು ಪರಹಿತ ಎರಡನ್ನು ಕಾಪಾಡುವ ಅಪೂರ್ವ ಕಲೆ ಸಮಾಜದ ಸ್ವಾಸ್ಥ್ಯ, ಆರೋಗ್ಯವನ್ನು ನಿರಂತರವಾಗಿ ಕಾಪಾಡುವ ಕೆಲಸ ಸಾಹಿತಿ, ಕವಿ, ನಾಟಕಕಾರರಿಂದ ಆಗುತ್ತಿದೆ ಎಂದು ಗುಣಗಾನ ಮಾಡಿದರು.
ಜಾನಪದ ಕಲಾವಿದ ಕಾಲ್ಕೆರೆ ಚಂದ್ರಪ್ಪ ಮಾತನಾಡಿ ಕಲಾವಿದರನ್ನು ಗೌರವಿಸುವಂತ ಕೆಲಸವಾಗಬೇಕು. ಸಾಹಿತಿ, ಕವಿ, ನಾಟಕಕಾರರಾಗಿ ದುಡಿದವರನ್ನು ಗುರುತಿಸಬೇಕಾಗಿದೆ. ಜಿಲ್ಲೆಯ ಕವಿಗಳಿಗೆ ಮಾನ್ಯತೆ ನೀಡಬೇಕು. ಆಗ ಮಾತ್ರ ಕಲೆ, ಸಾಹಿತ್ಯ, ಸಂಗೀತ ನಾಡಿನಾದ್ಯಂತ ಪಸರಿಸಲು ಸಾಧ್ಯವಾಗುತ್ತದೆ. ಸರ್ಕಾರದ ಜೊತೆ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಸಂತೋಷದ ಸಂಗತಿ. ಮೂಲೆಗುಂಪಾಗಿರುವ ಕಲಾವಿದರನ್ನು ಗುರುತಿಸಿ ಸನ್ಮಾನಿಸಿ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಬೇಕಾಗಿದೆ ಎಂದು ಸಲಹೆ ನೀಡಿದರು.
ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ವೇದಿಕೆ ಅಧ್ಯಕ್ಷ ಕೆ.ಪರಶುರಾಮ್‍ಗೊರಪ್ಪರ್ ಮಾತನಾಡುತ್ತ ಸಮಾಜದ ಕಳಕಳಿಯನ್ನು ಗಮದಲ್ಲಿಟ್ಟುಕೊಂಡು ಕವಿತೆಗಳನ್ನು ರಚಿಸಬೇಕು. ಸಮಾಜದಲ್ಲಿನ ನೋವು-ನಲಿವುಗಳ ಕಡೆ ಕವಿತೆಗಳು ಹೆಚ್ಚಿನ ಬೆಳಕು ಚೆಲ್ಲುವಂತಾಗಬೇಕು. ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿರುವುದು ನೋವಿನ ಸಂಗತಿ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಯುವ ಪೀಳಿಗೆಯನ್ನು ಗುರುತಿಸಿ ಹೊಸ ಹೊಸ ಸಾಹಿತ್ಯವನ್ನು ಬೆಳಕಿಗೆ ತರುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಅರಣ್ಯ ಮಹಾವಿದ್ಯಾಲಯ ಸಿರಸಿಯ ನಿವೃತ್ತ ಡೀನ್ ಡಾ.ಹೆಚ್.ಶಿವಣ್ಣ ಕೃತಿ ಬಿಡುಗಡೆಗೊಳಿಸಿದರು.
ಸಮತಾ ಸಾಹಿತ್ಯ ವೇದಿಕೆ ಅಧ್ಯಕ್ಷ ಓ.ವೆಂಕಟೇಶ್‍ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ವೇದಿಕೆ ಗೌರವಾಧ್ಯಕ್ಷ ಕೆ.ಬಿ.ಕೃಷ್ಣಪ್ಪ, ಸಮಾಜ ಸೇವಕ ಹೆಚ್.ಟಿ.ಶ್ರೀಪತಿ, ಕನಕ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ನಿರ್ದೇಶಕ ಕೆ.ಬಿ.ರಾಮಪ್ಪ, ಕವಿಯತ್ರಿ ಶ್ರೀಮತಿ ಷರಿಫಾಬಿ, ಉಷೆ ಕೃತಿಯ ಲೇಖಕಿ ವೈ.ಉಷಾದೇವಿ ವೇದಿಕೆಯಲ್ಲಿದ್ದರು.
ಕೊರೋನಾ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.