ಸಾಹಿತ್ಯ, ಸಂಗೀತ ಕಲೆಯ ಎರಡು ಶ್ರೇಷ್ಠ ಮುಖಗಳು: ಡಾ.ದೊಡ್ಡಮಲ್ಲಯ್ಯ

1 Min Read

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಡಿ.02): ಸಾಹಿತ್ಯ ಸಂಗೀತ ಕಲೆಯ ಎರಡು ಶ್ರೇಷ್ಟ ಮುಖಗಳಾಗಿ ಮಾನವನ ಬದುಕನ್ನು ಸುಂದರಗೊಳಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಅಭಿಪ್ರಾಯಪಟ್ಟರು.

ಮಾರುತಿ ಸಾಂಸ್ಕೃತಿಕ ಕಲಾ ಸಂಘ ಆಯಿತೋಳು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ತ.ರಾ.ಸು. ರಂಗಮಂದಿರದಲ್ಲಿ ಶುಕ್ರವಾರ ನಡೆದ ಜಾನಪದ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

ಸಂಗೀತ ದೈವೀಕ ಕಲೆ. ಮಾನವನ ಬದುಕಿನಲ್ಲಿ ಸಮಗ್ರತೆ ತಂದುಕೊಡುವ ನಿಟ್ಟಿನಲ್ಲಿ ಕಲೆಯಾಗಿ ಅನನ್ಯ ಸಾಧಿಸಿದೆ. ಶಿಷ್ಠ ಸಂಗೀತಕ್ಕೆ ಜಾನಪದ ಸಂಗೀತ ಮಾತೃ ಸ್ಥಾನ ಹೊಂದಿದೆ. ಜಾನಪದ ಹಾಡುಗಾರ ಆಯಿತೋಳು ವಿರುಪಾಕ್ಷಪ್ಪ ಸಂಗೀತದ ಎಲ್ಲಾ ಪ್ರಕಾರಗಳನ್ನು ಇಲ್ಲಿಯವರೆಗೂ ದಣಿವರಿಯದೆ ಹಾಡಿಕೊಂಡು ಬರುತ್ತಿರುವುದು ಅನುಪಮ ಸೇವೆ ಎಂದು ಗುಣಗಾನ ಮಾಡಿದರು.

ಜಾನಪದ ಸಂಭ್ರಮದ ಅಧ್ಯಕ್ಷತೆ ವಹಿಸಿದ್ದ ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಮಾತನಾಡಿ ಗ್ರಾಮೀಣ ಪ್ರದೇಶಗಳಿಂದ ಹುಟ್ಟಿಕೊಂಡಿರುವ ಜಾನಪದಕ್ಕೆ ಹಿರಿಯರ ಕೊಡುಗೆಯಿದೆ. ಅದನ್ನು ಇಂದಿನ ಯುವಪೀಳಿಗೆ ಉಳಿಸಿಕೊಂಡು ಹೋಗಬೇಕಿದೆ. ನಾಡಗೀತೆ, ರೈತ ಗೀತೆ, ರಾಷ್ಟ್ರಗೀತೆಯ ಸಾಂಸ್ಕøತಿಕ ನಂಟು ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಗಬೇಕು. ಹಿರಿಯರ ಅನುಭವದ ಮಾತುಗಳನ್ನು ಕಿವಿಗೊಟ್ಟು ಕೇಳಿಸಿಕೊಂಡು ಅದರಂತೆ ನಡೆಯಿರಿ ಎಂದು ತಿಳಿಸಿದರು.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಎನ್.ಎಸ್.ಎಸ್.ಅಧಿಕಾರಿ ದೇವೇಂದ್ರನಾಯ್ಕ, ಜಾನಪದ ಹಾಡುಗಾರ ಆಯಿತೋಳು ವಿರುಪಾಕ್ಷಪ್ಪ, ಮೂರ್ತಿ ವೇದಿಕೆಯಲ್ಲಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *