ಚಿತ್ರದುರ್ಗ, (ಜು.01) : ನಮ್ಮ ದೇಶ ಸಂಸ್ಕೃತಿಯ ತವರು ವಿವಿಧ ಧಾರ್ಮಿಕ ಆಚರಣೆಗಳನ್ನು ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತದೆ. ಇಂತಹ ಆಚರಣೆಗಳು ಮಕ್ಕಳಲ್ಲಿ ಮೌಲ್ಯವನ್ನು ತುಂಬುತ್ತವೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ವೀರೇಶ್ ಅಭಿಪ್ರಾಯಪಟ್ಟರು.
ನಗರದ ಬಾಪೂಜಿ ಸಮೂಹ ಸಂಸ್ಥೆಯಲ್ಲಿ
ನರ್ಸರಿ, ಎಲ್.ಕೆ.ಜಿ ಹಾಗೂ ಯು.ಕೆ.ಜಿ ಮಕ್ಯಕಳಿಗೆ ಆಯೋಜಿಸಿದ್ದ “ಅಕ್ಷರಭ್ಯಾಸ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಸ್ಥೆಯ ನಿರ್ದೇಶಕ ಕೆ ಎಂ ಚೇತನ್ ಮಾತನಾಡಿ, ಬಹಳಷ್ಟು ಪೋಷಕರಿಗೆ ಅಕ್ಷರಾಭ್ಯಾಸ ಮಾಡಿಸುವ ಆಸೆ ಇರುತ್ತದೆ. ಆದರೆ ಅನಿವಾರ್ಯ ಕಾರಣಗಳಿಂದ ದೂರದ ಸ್ಥಳಗಳಿಗೆ ಹೋಗಲು ಸಾಧ್ಯವಾಗುವದಿಲ್ಲ. ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಈ ಅವಕಾಶ ಕಲ್ಪಿಸಿಕೊಟ್ಟ ಸೌಭಾಗ್ಯ ಎನ್ನುವ ಅಭಿಮಾನದ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಸಂಯೋಜಕರಾದ ಶ್ರೀ ಶಿವಕುಮಾರ ಹಾಗೂ ಶಿಕ್ಷಕ ರೆಲ್ಲ ಉತ್ಸಾಹದಿಂದ ಭಾಗವಹಿಸಿದ್ದರು.
ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕರಾದ ಶ್ರೀ ಮಲ್ಲಿಕಾರ್ಜುನ ಅವರು ತುಂಬಾ ಶ್ರದ್ಧಪೂರ್ವಕವಾಗಿ ನೆರವೇರಿಸಿ ಕೊಟ್ಟರು.