ಜಾಗತಿಕ ಶ್ರೇಷ್ಠ ವಿಜ್ಞಾನಿಗಳ ಪಟ್ಟಿ: ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಈರಯ್ಯ ಅವರಿಗೆ ಸ್ಥಾನ

1 Min Read

 

ಬೆಂಗಳೂರು: ಅ, 10: 2023 ನೇ ವರ್ಷದ ವಿಶ್ವ ಅಗ್ರಮಾನ್ಯ ಶೇ. 2ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಈರಯ್ಯ ಅವರನ್ನು ಆಯ್ಕೆಮಾಡಲಾಗಿದೆ.

ಅಮೆರಿಕದ ಸ್ಟ್ಯಾನ್‌ ಫೋರ್ಡ್‌ ವಿಶ್ವವಿದ್ಯಾಲಯ ಮತ್ತು ನೆದರ್ ಲ್ಯಾಂಡಿನ ಎಲ್ಸೆ ವಿಯರ್ ಪ್ರಕಾಶನ ಸಂಸ್ಥೆಯ 2023 ನೇ ಜಾಗತಿಕ ಉನ್ನತ ಮಟ್ಟದ ಶೇ. 2ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ (Glass Science and Technology) ಗಾಜಿನ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ಬಿಡುಗಡೆ ಮಾಡಿರುವ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗುರುತಿಸಿ ಕೊಂಡಿದ್ದಾರೆ.

ಪ್ರತಿವರ್ಷ ಸೈಟೇಷನ್ ಇಂಡೆಕ್ಸ್‌ ಆಧಾರದ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ, ಶ್ರೇಷ್ಠ ಶೇ. 2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸುತ್ತದೆ.

ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಬಿ. ಈರಯ್ಯ ಅವರು ಅಂತರಾಷ್ಟ್ರೀಯವಾಗಿ ಪ್ರಕಟವಾದ 145 ಸಂಶೋಧನಾ ಪ್ರಕಟಣೆಗಳು,1653 ಸೈಟೇಷನ್, 24 ಹೆಚ್ ಇಂಡೆಕ್ಸ್), 37 ಐ 10 ಇಂಡೆಕ್ಸ್ (i 10-index), (Glass Science and Technology) ಗಾಜಿನ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇವರು 145 ಸಂಶೋಧನಾ ಲೇಖನಗಳನ್ನು
ಪರಿಶೀಲಿಸಿದ ನಂತರ ಜಾಗತಿಕ ಶ್ರೇಷ್ಠದ ಶೇ.2ರಷ್ಟು ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಟ್ಯಾನ್‌ ಫೋರ್ಡ್‌ ವಿಶ್ವವಿದ್ಯಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸೇರಿರುವುದು ವಿಶೇಷವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *