ಮುರುಘಾಮಠದಲ್ಲಿ ಲಿಂಗಾಯತ ಮಹಾಸಭೆ : ವಿವಿಧ ಮಠಾಧೀಶರು, ಗಣ್ಯರು ಭಾಗಿ

4 Min Read

ಸುದ್ದಿಒನ್, ಚಿತ್ರದುರ್ಗ, ಜೂ.29 : ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಶನಿವಾರ ಬೆಳಗ್ಗೆ ಜಾಗತಿಕ ಲಿಂಗಾಯತ ಮಹಾಸಭಾದ 2025-26 ನೇ ಸಾಲಿನ ಮೊದಲನೇ ಕಾರ್ಯಕಾರಿ ಸಭೆಯು ನಡೆಯಿತು.

ಈ ಸಭೆಯು ನಿಯಮ 18 ಮತ್ತು 19ರ ಅನುಸಾರ ನಡೆದು, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಪದಾಧಿಕಾರಿಗಳು ವಿವಿಧ ವಿಭಾಗ ಹಾಗೂ ಸೆಲïಗಳ ಮುಖ್ಯಸ್ಥರು ಮತ್ತು ಸದಸ್ಯರು ಮಹಾಪೆÇೀಷಕರು, ಪೋಷಕರು, ಮಹಾದಾಸೋಹಿ, ದಾಸೋಹಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರಲ್ಲದೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿರುವ ಎಲ್ಲಾ ಘಟಕ, ಜಿಲ್ಲಾ ಮಹಿಳಾ ಘಟಕ ಹಾಗೂ ಜಿಲ್ಲಾ ಯುವಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿಗಳು ಆಗಮಿಸಿದ್ದರು.

ಸಭೆಯಲ್ಲಿ ಮುಖ್ಯವಾಗಿ 12 ರಿಂದ 13 ವಿಷಯಗಳು ಚರ್ಚಿತವಾದವು. ಅವುಗಳನ್ನು ಸಭೆಯಲ್ಲಿ ಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ್ ಜಾಮದಾರ್ ಮಂಡಿಸುತ್ತಾ, ಅವುಗಳಿಗೆ ಸಂಬಂಧಿಸಿದ ಚರ್ಚೆ, ಸಂವಾದಗಳ ಮೂಲಕ ವಿಷಯಗಳಲ್ಲಿ ಪ್ರಮುಖವಾದವುಗಳೆಂದರೆ, ವಚನ ದರ್ಶನ, ಮಿತ್ಯ ವರ್ಸಸ್ ಸತ್ಯ ಪುಸ್ತಕ ಬಿಡುಗಡೆ ಎಲ್ಲಾ ಜಿಲ್ಲೆಗಳಲ್ಲಿ ಆಗುತ್ತಿದೆ, ಆಗದೇ ಇರುವಂತಹ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಮಾಡುವ ತೀರ್ಮಾನ ತೆಗೆದುಕೊಳ್ಳುವುದರ ಜೊತೆಗೆ ಶರಣರ ಐತಿಹಾಸಿಕ ಸತ್ಯ ಮತ್ತು ನಿಲುವುಗಳು ಸಾರ್ವಜನಿಕರಿಗೆ, ಬಸವಾಭಿಮಾನಿಗಳಿಗೆ ಅರ್ಥೈಸುವ ಅನಿವಾರ್ಯತೆ ಇದೆ ಎಂದರು.

ಕರ್ನಾಟಕ ಸರ್ಕಾರ ಮುಂದೆ ನಡೆಸಲಿರುವ ಜಾತಿ ಮರು ಜನಗಣತಿಯ ಬಗ್ಗೆ ಚರ್ಚಿಸಿದ ಜಾಮದಾರ್, ಈ ನಡುವೆ ಸಭಿಕರಿಂದ ಬಂದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಜಾತಿ ಕಾಲಂನಲ್ಲಿ ಲಿಂಗಾಯತ ಅಂತಲೇ ಬರೆಸಿ. ಒಳಪಂಗಡ ಇರಲಿ ಅದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.

ಬರುವ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 1ರವರೆಗೆ ನಡೆಯಲಿರುವ ಬಸವ ಸಂಸ್ಕøತಿ ಅಭಿಯಾನದ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಅಭಿಯಾನ ಯಶಸ್ವಿಗೊಳಿಸಬೇಕೆಂದರು. ಇದಕ್ಕೆ ಬಹುತೇಕ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಒಪ್ಪಿಕೊಂಡರು.
ಎಲ್ಲ ಜಿಲ್ಲೆಗಳಲ್ಲಿ ಸಭಾದ ಜಮಾ ಖರ್ಚು ಆಡಿಟ್ ಮಾಡಿಸಿ ಕೇಂದ್ರ ಕಚೇರಿಗೆ ಆದಷ್ಟು ತುರ್ತಾಗಿ ಕಳುಹಿಸಬೇಕು. ಪ್ರಸಕ್ತÀ ಸಾಲಿನಲ್ಲಿ ವಾರ್ಷಿಕ ವಿಶೇಷ ಮಹಾ ಸಮ್ಮೇಳನ ಒಂದು ಕಡೆ ಏರ್ಪಡಿಸಬೇಕು. ಇದರೊಂದಿಗೆ ಎಲ್ಲ ಪಂಗಡಗಳ ಒಳಪಂಗಡಗಳ ವಧು ವರರ ಸಮ್ಮೇಳನ ಆದರೆ ಒಳಿತು. ಅಲ್ಲಿ ಬರುವ ಎಲ್ಲಾ ವಿಧಿ ವಿಧಾನಗಳು ನಿಜಾಚರಣೆಗಳ ಮೂಲಕ ನಡೆಯುವ ಮತ್ತು ತರಬೇತಿ ನೀಡುವ ಕ್ರಮವಾಗಬೇಕೆಂದರು.

ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗಳಲ್ಲಿ ವಧು ವರರ ಮಾಹಿತಿ ಕೇಂದ್ರವನ್ನು ಸ್ಥಾಪಿಸಿ ಆ ಮೂಲಕ ಕಲ್ಯಾಣವಾಗ ಬಯಸುವವರಿಗೆ ನೆರವಾಗಬಹುದಾಗಿದೆ ಎಂಬ ತೀರ್ಮಾನಕ್ಕೆ ಬರಲಾಯಿತು. ಜೊತೆಗೆ ಆನ್ಲೈನ್ ಮಾಸಿಕ ಪತ್ರಿಕೆಗೆ ಲೇಖನ ಮತ್ತು ಸಭಾದ ವತಿಯಿಂದ ನಡೆಯುವ ಕಾರ್ಯಕ್ರಮಗಳನ್ನು ನಡೆದ ಬಗೆಗಿನ ವರದಿಗಳನ್ನು ಪೂರೈಸಬೇಕೆಂದು ಹೀಗೆ ಹತ್ತು ಹಲವಾರು ವಿಷಯಗಳನ್ನು ಸಂಘಟನೆ ಹಿತದೃಷ್ಟಿಯಿಂದ ಹೇಳಿದ ಜಾಮದಾರ್ ಅವರು ಎಲ್ಲ ಬಸವ ಸಂಘಟನೆಗಳು ಒಟ್ಟಾಗಿ ಹೋದಾಗ ಮಾತ್ರ ನಾವು ನಮ್ಮ ಗುರಿಯನ್ನು ತಲುಪಬಹುದಾಗಿದೆ ಎಂದು ಸೂಚ್ಯವಾಗಿ ಹೇಳಿದರು.

 

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಡಿಯಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಲ್ಲಿ ಬರುವ ಸೆಪ್ಟೆಂಬರ್ ಒಂದರಿಂದ ಅಕ್ಟೋಬರ್ ಒಂದರವರೆಗೆ ಬಸವ ಸಂಸ್ಕøತಿ ಅಭಿಯಾನ, ಅದರಲ್ಲಿ ಸಾಂಸ್ಕøತಿಕ ನಾಯಕ ಬಸವಣ್ಣನವರ ಬಗ್ಗೆ, ಅವರು ನೀಡಿದ ವಚನ ಸಂವಿಧಾನ, ಸಂಸ್ಕøತಿಯ ಅಭಿಯಾನದ ಉz್ದÉೀಶ, ಅಭಿಯಾನದಲ್ಲಿ ಏನಿರುತ್ತದೆ ಎಂಬಿತ್ಯಾದಿ ವಿಚಾಗಳನ್ನು ಮಂಡಿಸಲಾಯಿತು.
ಬಸವ ಸಂಸ್ಕøತಿಯ ಅಭಿಯಾನದಲ್ಲಿ ಜಿಲ್ಲಾ ಸಮಿತಿಯ ಜವಾಬ್ದಾರಿಗಳೇನು? ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಜವಾಬ್ದಾರಿ ಮತ್ತು ಅಭಿಯಾನ ಯಾವ ದಿನಾಂಕ ಎಲ್ಲಿ ನಡೆಯುತ್ತದೆಂಬ ವಿವರ ಪಟ್ಟಿಯಲ್ಲಿ ಪ್ರಕಟಗೊಂಡಿದೆ. ಇದರೊಂದಿಗೆ ಅಭಿಯಾನದ ಆಶಯಗಳೇನು ಎಂದು ನೋಡುವುದಾದರೆ ಸಮ ಸಮಾಜದ ನಿರ್ಮಾಣ, ವ್ಯಸನ ಮುಕ್ತ ಸಮಾಜದ ನಿರ್ಮಾಣ, ಅಂದರಂತೆ ಅಂಧಶ್ರದ್ಧೆ ಅಳಿಸಿ ಸುe್ಞÁನ ಬೆಳೆಸುವುದು, ಸದೃಢ ಸಮಾಜ ಕಟ್ಟುವುದು, ಮಕ್ಕಳಲ್ಲಿ ಆಧ್ಯಾತ್ಮಿಕ ಅರಿವು ಮೂಡಿಸುವುದು, ಮಹಿಳೆಯರ ಘನತೆಯನ್ನು ಕಾಪಾಡುವುದು ಹಾಗೂ ವ್ಯಕ್ತಿತ್ವ ವಿಕಸನ ಇತ್ಯಾದಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಚಿತ್ರದುರ್ಗ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ದಾವಣಗೆರೆ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿ, ಮರುಳಶಂಕರ ಪೀಠದ ಸಿದ್ಧಬಸವ ಕಬೀರ ಸ್ವಾಮಿಗಳು, ಗುರುಮಠಕಲï ಖಾಸಾಮಠದ ಶಾಂತವೀರ ಗುರು ಮುರುುುುಘರಾಜೇಂದ್ರ ಸ್ವಾಮಿಗಳು, ಹೊಳಲ್ಕೆರೆ ತಿಪ್ಪೇರುದ್ರ ಸ್ವಾಮಿಗಳು, ಮುರುಘಾಮಠದ ಮುರುಘೇಂದ್ರ ಸ್ವಾಮಿಗಳು ಸೇರಿದಂತೆ ಅನೇಕ ಪೀಠಾಧಿಪತಿಗಳು ಭಾಗವಹಿಸಿದ್ದರು.
ಎನ್. ಕೆಂಪೇಗೌಡರವರು ನಿ. ನ್ಯಾಯಾಧೀಶರು, ಇವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಸವರಾಜï ರೊಟ್ಟಿ, ಉಪಾಧ್ಯಕ್ಷ ಮಾದೇವಪ್ಪ, ಬಸವರಾಜ ಧನ್ನೂರ್, ಮಹಾರಾಷ್ಟ್ರದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಕಣಜೆ, ಕೊಂಗವಾಡ್, ಪರಮೇಶ್ವರ ಕಾಗಿನೆಲೆ, ಡಾ. ಜೆ.ಎಸ್. ಪಾಟೀಲï, ಸವಿತಾ ನಡಕಟ್ಟಿ, ನಳಿನಿ ಮಹಾಗಾವಕರ್, ಶೈಲಜಾ ಬಾಬು, ಅಶೋಕ ಮಳಗಲಿ, ಮುರಿಗೆಪ್ಪ ಬಾಳಿ, ಚಂದ್ರಶೇಖರ್ ಗುಡಸಿ, ಬಸನಗೌಡ ಹರನಾಳ ಹಾಗೂ ವಿವಿಧ ಜಿ¯್ಲÉಗಳಿಂದ ಆಗಮಿಸಿದ ಜಿಲ್ಲಾಧ್ಯಕ್ಷ ಪ್ರಧಾನ ಕಾರ್ಯದರ್ಶಿಗಳು ಖಜಾಂಚಿಗಳು, ಮಹಿಳಾ ಘಟಕ, ಯುವ ಘಟಕಗಳ ಪದಾಧಿಕಾರಿಗಳು, ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks