ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಈ ಬಾರಿಯ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಆದ್ರೆ ಈ ಅಧಿವೇಶನದ ನಡುವೆಯೇ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ ತಾಗಿದೆ. ರೈತರು ಸೇರಿದಂತೆ ಇತರೆ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಧಿವೇಶನದ ಮೂರನೆ ದಿನವಾದ ಇಂದು ಹಲವಾರು ಸಂಘಟನೆಗಳು ಸದನದ ಹೊರಗೆ ಪ್ರತಿಭಟನೆ ನಡೆಸುತ್ತಿವೆ. ಇದೆ ವೇಳೆ ಎಸಿಬಿ ಸಂಸ್ಥೆ ರದ್ದುಗೊಳಿಸಿ ಲೋಕಾಯುಕ್ತ ಬಲಗೊಳಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಒತ್ತಾಯಿಸಿದೆ.
ಅಕಾಲಿಕ ಮಳೆಯಿಂದಾ ಬೆಳೆ ನಾಶವಾಗಿದ್ದು, ಮಳೆಯಿಂದ ಮನೆಗಳು ಕುಸಿದಿವೆ. ಹೀಗಾಗಿ ಪರಿಹಾರ ನೀಡಲು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಹೊರವಲಯದಲ್ಲಿ ಜಮಾವಣೆಗೊಂಡು ಪ್ರತಿಭಟನೆ ಮಾಡಿದ್ದಾರೆ. ಜೊತೆಗರ ಬಾಕಿ ಉಳಿದಿರುವ ವೇತನ ಹಾಗೂ ಕೆಲಸ ಖಾಯಂಗೊಳಿಸಲು ಶಿಕ್ಷಕರು ಕೂಡ ಪ್ರತಿಭಟನರ ನಡೆಸುತ್ತಿದ್ದಾರೆ.