ಬೆಂಗಳೂರು: ಪರೀಕ್ಷೆಗಳು ಮುಗಿದಿದೆ. ಶಾಲೆಗೆ ರಜೆ ಸಿಕ್ಕಿದೆ. ಮೇ 29ರಿಂದ ಶಾಲೆ ಮತ್ತೆ ಆರಂಭವಾಗಲಿದೆ. ಶಾಲೆ ಆರಂಭವಾದ ಬಳಿಕ ಪಠ್ಯ ಪುಸ್ತಕದ ವಿಚಾರವೇ ಶಿಕ್ಷಕರು ಹಾಗೂ ಪೋಷಕರಿಗೆ ತಲೆ ನೋವಾದ ಕೆಲಸವಾಗಿದೆ. ಯಾಕಂದ್ರೆ ಕಳೆದ ವರ್ಷ ಶಾಲೆಗಳಲ್ಲಿ ಪಠ್ಯ ಪುಸ್ತಕದ್ದೇ ಸಮಸ್ಯೆ ಎದುರಾಗಿತ್ತು. ಶಾಲೆ ಆರಂಭವಾಗಿ ಮೂರ್ನಾಲ್ಕು ತಿಂಗಳಾದರೂ ಪಠ್ಯ ಪುಸ್ತಕ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಆ ಸಮಸ್ಯೆಯೇ ಇರುವುದಿಲ್ಲ.
ಈ ಬಾರಿ ಶಾಲೆಗಳು ಆರಂಭವಾದ ದಿನವೇ ಪಠ್ಯ ಪುಸ್ತಕಗಳು ಸಿಗಲಿದೆ. ಇದಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ. ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಶೇ. 86 ರಷ್ಟು ಪುಸ್ತಕಗಳು ಸರಬರಾಜಾಗಿದೆ. ಈ ಬಾರಿ ಶೈಕ್ಷಣಿಕ ವರ್ಷಕ್ಕೆ ಅಂದಾಜು 6.39 ಲಕ್ಷ ಪಠ್ಯ ಪುಸ್ತಕಗಳ ಅವಶ್ಯಕತೆ ಇದೆ. ಈಗಾಗಲೇ 5.91 ಲಕ್ಷ ಪಠ್ಯಪುಸ್ತಕ ಮುದ್ರಣ ಮಾಡಲಾಗಿದೆ.
ಈ ಪೈಕಿ ಬಿಇಒಗಳ ಹಂತದಲ್ಲಿ5.53 ಪುಸ್ತಕಗಳು ಸರಬರಾಜುಗೊಂಡಿದೆ. ಉಳಿದ ಶೇ.7.52ರಷ್ಟು ಪುಸ್ತಕ ಮುದ್ರಣದ ಹಂತದಲ್ಲಿದೆ. ಇದು ಕೂಡ ಆದಷ್ಟು ಬೇಗ ತಲುಪಲಿದೆ ಎನ್ನಲಾಗಿದೆ.