ಬೆಳಕು ಪ್ರಪಂಚದಲ್ಲಿ ಮಹತ್ವವಾದ ಬದಲಾವಣೆಯನ್ನು ತಂದಿದೆ : ಡಾ. ಪಾಲಾಕ್ಷಮೂರ್ತಿ

1 Min Read

ಸುದ್ದಿಒನ್, ಚಿತ್ರದುರ್ಗ, ಜುಲೈ.10 :  ಬೆಳಕು ಪ್ರಪಂಚದಲ್ಲಿ ಮಹತ್ವವಾದ ಬದಲಾವಣೆಯನ್ನು ತಂದಿದೆ ಎಂದು ತುಮಕೂರು ವಿ.ವಿ ಯ ಭೌತಶಾಸ್ತ್ರದ ಮುಖ್ಯಸ್ಥರಾದ ಡಾ. ಪಾಲಾಕ್ಷಮೂರ್ತಿ ತಿಳಿಸಿದರು.

ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಭೌತಶಾಸ್ತ್ರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಮಾರು 272 ವರ್ಷಗಳ ಹಿಂದೆ ಪ್ಯಾರಡೆ ಅವರು ಕಂಡುಹಿಡಿದ ವಿದ್ಯುತ್‌ಶಕ್ತಿಯಿಂದ ಜಗತ್ತಿನಲ್ಲಿ ಮಹತ್ವವಾದ ಬದಲಾವಣೆಯನ್ನು ಹೊಂದಲಾಯಿತು ಮತ್ತು ಮನುಷ್ಯನ ಜೀವನದಲ್ಲಿ ಬೆಳಕು ಅತ್ಯಂತ ಪ್ರಾಮುಖ್ಯತೆಯನ್ನ ವಹಿಸಿದೆ ಎಂದು ಹೇಳಿದರು.

ಥಾಮಸ್ ಅಲ್ವಾ ಎಡಿಸನ್ ಕಂಡುಹಿಡಿದ ಬಲ್ಪು ಸುಮಾರು 200 ವರ್ಷಗಳ ಕಾಲ ತನ್ನ ಕೆಲಸ ಮಾಡುತ್ತದೆ. ಈ ವಿಧಾನದಲ್ಲೇ ಸಿಎಫ್‌ಎಲ್ ಮತ್ತು ಎಲ್.ಇ.ಡಿ ಬಲ್ಪುಗಳು ಈಗ ಕಾರ್ಯನಿರ್ವಹಿಸುತ್ತಿವೆ. ಎಲೆಕ್ಟ್ರೋಮ್ಯಾಗ್ನೆಟಿಕ್ ರೇಡಿಯೆಷನ್ ತಾಯಿ ಗರ್ಭದಲ್ಲಿರುವ ಮಗುವಿಗೂ ಸಹ ರಕ್ಷಕನಾಗಿ ಹಾಗೂ ಪರಿವೀಕ್ಷಕನಾಗಿ ಕೆಲಸ ಮಾಡುವ ಸಾಧನಗಳು ಹಾಗೂ ಎಂ.ಆರ್.ಐ, ಸ್ಕ್ಯಾನಿಂಗ್, ಗಾಮರೇ ಸ್ಕ್ಯಾನಿಂಗ್, ಎಕ್ಸ್ ರೇ ಸೇರಿದಂತೆ ಭೌತಶಾಸ್ತ್ರ ಅಧ್ಯಯನದಿಂದ ಕಂಡುಹಿಡಿದ ಸಾಧನಗಳಾಗಿವೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಭೌತಶಾಸ್ತ್ರ ದಲ್ಲಿ ರ‍್ಯಾಂಕ್ ಪಡೆದ ಮತ್ತು ಭೌತಶಾಸ್ತ್ರ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವೆಂಕಟರೆಡ್ಡಿ, ಪ್ರಾಂಶುಪಾಲರಾದ ಸಿದ್ರಾಮ ಚನಗೊಂಡ ಹಾಗೂ ಅಧ್ಯಾಪಕರುಗಳಾದ ಡಾ. ಶಶಿಧರ್, ಡಾ. ಬೊಮ್ಮಲಿಂಗಯ್ಯ, ಡಾ. ವಿನೋದ್ ಕುಮಾರ್, ಮಿಸ್ ಫಿರ್ ದೋಸ್ ಮುಂತಾದವರ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *