ಎಲ್ಐಸಿ ದೇಶದ ಮತ್ತು ವಿಶ್ವದ ಅತ್ಯುತ್ತಮ ವಿಮಾ ಸಂಸ್ಥೆ : ಮಂಜುನಾಥ್‍

1 Min Read

 

ವರದಿ ಮತ್ತು ಫೋಟೋ ಕೃಪೆ

ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಸೆ. 01 : ಚಿತ್ರದುರ್ಗ ಭಾರತೀಯ ಜೀವಾ ವಿಮಾ ನಿಗಮ ಶಾಖೆಯ ವತಿಯಿಂದ 67ನೇ ಎಲ್.ಐ.ಸಿ ವಾರ್ಷಿಕೋತ್ಸವ ಹಾಗೂ ವಿಮಾ ಸಪ್ತಾಹದ ದಿನಾಚರಣೆಯ ಉದ್ಘಾಟನೆಯನ್ನು ಶಾಖೆಯ ವ್ಯವಸ್ಥಾಪಕರಾದ ಮಂಜುನಾಥ್‍ ನೆರವೇರಿಸಿದರು.

ನಂತರ ಮಾತನಾಡಿ ಭಾರತೀಯ ಜೀವಾ ವಿಮಾ ನಿಗಮವು ಇಂದು ದೇಶದ ಮತ್ತು ವಿಶ್ವದ ಒಂದು ಅತ್ಯುತ್ತಮ ಏಕೈಕ ವಿಮಾ ಸಂಸ್ಥೆಯಾಗಿ ಜನರಲ್ಲಿ ವಿಶ್ವಾಸಗಳಿಸಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಇತರೆ ವಿಮಾ ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸುವ ಪ್ರಸಂಗ ಏರ್ಪಟ್ಟಿದೆ. ವಿಮಾ ಸಂಸ್ಥೆಯು ಉತ್ತಮ ಕಾರ್ಯಕಲಾಪಗಳನ್ನು ಮಾಡುವ ಮೂಲಕ ಸಾರ್ವಜನಿಕರಲ್ಲಿ ಉತ್ತಮ ವಿಶ್ವಾಸಗಳಿಸಬೇಕಾಗಿದೆ ಹಾಗಾಗಿ ನಾವುಗಳು ಈ ವಿಮಾ ಸಂಸ್ಥೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಶ್ರಮಿಸಬೇಕೆಂದರು.

ಈ ಸಂದರ್ಭದಲ್ಲಿ ಎಲ್ಲರಿಗೂ ಎಲ್.ಐ.ಸಿ 67ನೇ ವಾರ್ಷಿಕೋತ್ಸವ ಹಾಗೂ ವಿಮಾ ಸಪ್ತಾಹದ ಹಾರ್ಧಿಕ ಶುಭಾಶಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಶಾಖೆಯ ವ್ಯವಸ್ಥಾಪಕ ಲಕ್ಷ್ಮೀಕಾಂತ್, ಅಭಿವೃದ್ಧಿ ಅಧಿಕಾರಿಗಳಾದ ಸತೀಶ್, ರಾಮಕಿರಣ್, ಎಲ್.ಐ.ಸಿ ಸಂಘದ ಅಧ್ಯಕ್ಷ ವೆಂಕಟೇಶ್, ಕ್ರೀಡಾ ಸಾಂಸ್ಕøತಿಕ ಚಟುವಟಿಕೆಗಳ ಮಹಿಳಾ ಪ್ರತಿನಿಧಿ ಕೆ.ಸುಜಾತ, ಆಡಳಿತಾಧಿಕಾರಿಗಳಾದ ಸೀತಾಲಕ್ಷ್ಮೀ, ರೇಣುಕಾಂಭ, ರಾಜೇಶ್ವರಿ, ಶಾಮಣ್ಣ, ಹಿರಿಯ ದರ್ಜೆ ಸಹಾಯಕರಾದ ಗೀತಾ, ಇಂದಿರಾ, ಗಿರಿವಾಣಿ, ಮಮತ, ವೀಣಾ, ನಿರ್ಮಲ, ಸವಿತ, ಶ್ರೀನಿವಾಸ್, ಮಹಲಿಂಗಪ್ಪ, ದೇವರಾಜ್, ಇತರರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *