ಚುನಾವಣೆ ಮುಗಿಯುವ ತನಕ ಇಬ್ಬರ ಮಾತು ಮುಳುವಾಗದಿರಲಿ : ಸಿದ್ದರಾಮಯ್ಯ, ಡಿಕೆಶಿಗೆ ಕಿವಿ ಮಾತು ಹೇಳಿದರಾ ವೇಣುಗೋಪಾಲ್..?

1 Min Read

ನವದೆಹಲಿ: ಕರ್ನಾಟಕದ ರಾಜ್ಯದ ಚುನಾವಣೆ ಸನಿಹವಾಗುತ್ತಿದ್ದಂತೆ ಮೂರು ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಅಧಿಕಾರ ಹಿಡಿಯಲು ನಾನಾ ಕಸರತ್ತುಗಳನ್ನು ನಡೆಸುತ್ತಿವೆ. ಇದರ ನಡುವೆ ಕಾಂಗ್ರೆಸ್ ನಲ್ಲಿರುವ ಒಳ ಮುನಿಸು ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಆ ಮುನಿಸಿನಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಎಂದು ವೇಣುಗೋಪಾಲ್ ಅವರು ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಜೊತೆಗೆ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಭಾಗಿಯಾಗಿದ್ದರು.

ಈ ವೇಳೆ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ವೇಣುಗೋಪಾಲ್ ಅವರು ಕಿವಿ ಮಾತು ಹೇಳಿದ್ದಾರೆ. ನಿಮ್ಮಿಬ್ಬರ ಮಾತು, ಹೇಳಿಕೆಗಳು ವಿಭಿನ್ನವಾಗಿರುತ್ತದೆ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಕರ್ನಾಟಕದಲ್ಲಿನ ಕಾಂಗ್ರೆಸ್ ಗೆಲುವು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಉಳಿಸುವ ಗೆಲುವಾಗಲಿದೆ. ಮೊದಲು ಪಕ್ಷ ಆಮೇಲೆ ವ್ಯಕ್ತಿ. ಪಕ್ಷವೇ ಸೋತರೆ ಆಮೇಲೆ ಯಾರು ಏನು ಮಾಡುವುದಕ್ಕಲೆ ಆಗುವುದಿಲ್ಲ.

ಅನಗತ್ಯ ಹೇಳಿಕೆಗಳು ಬೇಡ. ಕರ್ನಾಟಕದಲ್ಲಿ ಪಕ್ಷದ ಸ್ಥಿತಿ ಉತ್ತಮವಾಗಿದೆ. ಪಕ್ಷಕ್ಕೆ ಹಿನ್ನಡೆಯಾದರೆ ಅದಕ್ಕೆ ನೀವಿಬ್ಬರೇ ಕಾರಣವಾಗಿರುತ್ತೀರಿ, ಬೇರೆ ಯಾರು ಆಗಿರುವುದಿಲ್ಲ. ಈ ನಾಲ್ಕು ತಿಂಗಳಲ್ಲಿ ನಿಮ್ಮಬ್ಬರ ಪ್ರತಿಷ್ಠೆಯ ಹೇಳಿಕೆ ಪಕ್ಷಕ್ಕೆ ಮುಳುವಾಗಬಾರದು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *