ಚಿತ್ರದುರ್ಗ,(ಜುಲೈ 15) : ಮತದಾನ ಎಂಬುವುದು ಸಂವಿಧಾನ ನಮಗೆ ನೀಡಿರುವ ಹಕ್ಕು ಅದನ್ನ ತಪ್ಪದೆ ಚಲಾಯಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಪ್ರಾಂಶುಪಾಲ ರಮೇಶ್ ಆರ್ ರವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅವರು ಭೊಮ್ಮೇನಹಳ್ಳಿ ಸಮೀಪದ ಕಡ್ಲೇಗುದ್ದುವಿನಲ್ಲಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚುನಾವಣಾ ಸಾಕ್ಷರತೆಯನ್ನು ತಿಳಿಯಪಡಿಸಲು ಶಾಲಾ ಸಂಸತ್ತು ಚುನಾವಣೆಯನ್ನು ಅಣುಕು ಮಾದರಿಯಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಚುನಾವಣೆ ಎಂಬುವುದು ಭಾರತದಲ್ಲಿ ಹಬ್ಬವಾಗಿ ಸಂಭ್ರಮಿಸಲ್ಪಡುವ ವ್ಯವಸ್ಥೆ ಯಾಗಿದೆ ರಾಜಾರಾಳ್ವಿಕೆಯಲ್ಲಿ ಅವರ ನಂತರ ಮಗ ಮತ್ತೆ ರಾಜ್ಯವನ್ನ ಆಳುವ ಪದ್ದತಿ ಜಾರಿಯಲ್ಲಿತ್ತು ಆದರೆ ಸಂವಿಧಾನ ಜಾರಿಯಾದ ನಂತರ ಯಾರು ಬೇಕಾದರು ಚುನಾವಣೆಯಲ್ಲಿ ಸ್ಪರ್ಧಿಸಬಹುದು.
ಹಾಗೂ ದೇಶದ ಪ್ರತಿಯೊಬ್ಬ ಪ್ರಜೆಗೆ18 ವರ್ಷ ತುಂಬಿದ ಮೇಲೆ ಮತದಾನದ ಹಕ್ಕುನ್ನು ಸಂವಿಧಾನ ಬದ್ದವಾಗಿ ಪಡೆದಿದ್ದು ಅದನ್ನು ತಪ್ಪದೆಯೆ ಚಲಾಯಿಸಲು ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ನೀವುಗಳು ಕೂಡ 18 ವರ್ಷ ತುಂಬಿದ ನಂತರ ಕಡ್ಡಾಯವಾಗಿ ಮತ ಚಲಾಯಿಸಬೇಕು. ಅದಕ್ಕಾಗಿ ಈ ದಿನ ಚುನಾವಣಾ ಪ್ರಕ್ರಿಯೆಗಳು ಈಗಿನಿಂದಲೇ ನಿಮಗೆ ತಿಳಿಯಪಡಿಸಲೆಂದು ನಮ್ಮ ಶಾಲಾ ಸಂಸತ್ತು ಚುನಾವಣೆಯನ್ನು ಹಮ್ಮಿಕೊಂಡಿದ್ದು ಇದರಲ್ಲಿ ಭಾಗವಹಿಸಿ ಮತ್ತು ಸಂಭ್ರಮಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿದರು. ಹಾಗೂ ಶಾಲೆಯಲ್ಲಿ ಚುನಾವಣಾ ಪದ್ದತಿಯನ್ನು ಮುಖ್ಯ ಚುನಾವಣಾ ರೀತಿಯಲ್ಲಿಯೆ ಪಿ ಆರ್ ಓ , ಎ ಪಿ ಆರ್ ಓ , ಪಿಒ೧ , ಪಿಒ ೨ ಗಳಿಗೆ ಶಿಕ್ಷಕರನ್ನ ನೇಮಿಸಿ ಚುನಾವಣಾ ಕಾರ್ಯವನ್ನು ಶಿಸ್ತುಬದ್ಧ ವಾಗಿ ನಡೆಸಲಾಯಿತು.
ನಂತರ ಚುನಾವಣಾ ಫಲಿತಾಂಶ ಘೋಷಿಸಿ ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣ ವಚನ ಭೋದಿಸಿ ಅವರ ಕಾರ್ಯ ಚಟುವಟಿಕೆಗಳಗ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ವಸತಿ ಶಾಲೆಯ ನಿಲಯ ಪಾಲಕರಾದ ಮನೋಜ್ ಹರನಾಳ್ ಹಾಗೂ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.