ಸರ್ವಜ್ಞನ ತಿಪದಿಗಳಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ :ಶಾಸಕ ಟಿ ರಘುಮೂರ್ತಿ

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 9739875729

 

ಚಳ್ಳಕೆರೆ, (ಫೆ.26): ಸರ್ವಜ್ಞ ರಚಿಸಿದ ಸಾವಿರಾರು ತ್ರಿಪದಿಗಳಲ್ಲಿ ಮೌಲ್ಯಗಳ ಆಧಾರಿತ ಅಮೂಲ್ಯ ಸಾಹಿತ್ಯವನ್ನು ನೀಡಿ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತ ಗೊಳಿಸಿದ ಮಹಾನ್ ಮಾನವತಾವಾದಿ ಎಂದು ಶಾಸಕ ಟಿ ರಘುಮೂರ್ತಿ ಬಣ್ಣಿಸಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಆಯೋಜಿಸಿದ್ದ 503ನೇ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

16ನೇ ಶತಮಾನದಲ್ಲಿ ಜನಿಸಿ ಶುಭದತ್ತ ಎಂಬ ಹೆಸರಿನಿಂದ ಸರ್ವಜ್ಞ ಎಂಬ ಕಾವ್ಯನಾಮದಿಂದ ಅನೇಕ ತ್ರಿಪದಿಗಳನ್ನು ರಚಿಸಿ ತ್ರಿಪದಿ ಕವಿ ಎಂದು ಹೆಸರು ಗಳಿಸಿ ಯಾವುದೇ ಒಂದು ಜಾತಿಗೆ ಸೀಮಿತವಾಗದ ಸಾಹಿತ್ಯವನ್ನು ರಚಿಸಿ ಮನುಕುಲವನ್ನು ಎಚ್ಚರಗೊಳಿಸಿದ ಅದ್ಭುತ ಕವಿಯಾಗಿದ್ದಾರೆ. ದಾರ್ಶನಿಕರು ಬೋಧಿಸಿರುವ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳದೆ ಅಡ್ಡ ದಾರಿಯಲ್ಲಿ ನಡೆಯುತ್ತಿದ್ದೇವೆ ಇದು ಮಾನವ ಕುಲಕ್ಕೆ ಇಂದು ಮಾರಕವಾಗುತ್ತಿದೆ ಕುಂಬಾರ ಸಮುದಾಯವು ಕುಂಬಾರಿಕೆ ವೃತ್ತಿಯನ್ನು ಮಾಡುತ್ತಿದ್ದು ಆಧುನಿಕ ಭರಾಟೆಯಲ್ಲಿ ಅದು ನಶಿಸಿ ಹೋಗುತ್ತಿದೆ ಆದ್ದರಿಂದ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಹೊರಬೇಕಾಗಿದೆ ಶಿಕ್ಷಣವೇ ಎಲ್ಲಾ ಸಮಾಜದ ಏಳಿಗೆಗೆ ಮೂಲವಾಗಿದೆ ಸರ್ವಜ್ಞನ ತ್ರಿಪದಿಗಳಲ್ಲಿನ ಅಂಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಸಹಬಾಳ್ವೆಯಿಂದ ಬದುಕುವ ಆಶಯವನ್ನು ಹೊಂದಬೇಕಾಗಿದೆ ಎಂದು ತಿಳಿಸಿದರು.

ನಗರಸಭಾ ಸದಸ್ಯೆ ಕವಿತಾ ಬೋರಯ್ಯ ಮಾತನಾಡಿ ಸರ್ವಜ್ಞನು ಹೇಳಿರುವಂತೆ ಮೂಢನಂಬಿಕೆಗಳಿಂದ ನಾವು ಹೊರಬಂದು ಕಲ್ಲಿಗೆ ಹಾಲೆರೆಯುವ ಬದಲು ಹಸಿದವನಿಗೆ ನೀಡಿದಾಗ ಅದು ಸಾರ್ಥಕವಾಗುತ್ತದೆ ಮುಂದಿನ ಪೀಳಿಗೆಗೆ ಸರ್ವಜ್ಞನ ವಚನಗಳನ್ನು ಬೋಧಿಸಿ ಅದರಲ್ಲಿನ ಮೌಲ್ಯವನ್ನು ಅಳವಡಿಸುವ ಕಾರ್ಯವಾಗಬೇಕಿದೆ ಎಂದರು.

ಕುಂಬಾರ ಸಮಾಜದ ಬಸವ ಕುಂಬಾರ ಸ್ವಾಮೀಜಿ ಮಾತನಾಡಿ  ಕುಂಬಾರ ಸಮುದಾಯವು ಹಿಂದುಳಿದ ಸಮುದಾಯ ವಾಗಿದ್ದು ನಮ್ಮ ಸಮುದಾಯಕ್ಕೆ ಸರ್ಕಾರ ನಿಗಮ ಮಂಡಳಿ ಸ್ಥಾಪಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಆಗ ಮಾತ್ರ ನಮ್ಮ ಸಮುದಾಯವು ಏಳಿಗೆ ಕಾಣಲು ಸಾಧ್ಯವಾಗುತ್ತದೆ ನಿಗಮ ಮಂಡಳಿ ಸ್ಥಾಪಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ವೈ ಮೃತ್ಯುಂಜಯ ಉಪನ್ಯಾಸ ನೀಡಿದರು ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೆಹಾನ್ ಪಾಷಾ, ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ ಸದಸ್ಯರಾದ ಜೈತುಂಬಿ ಸುಮಾ ಭರಮಣ್ಣ ತಿಪ್ಪೇಸ್ವಾಮಿ ಗೋವಿಂದರಾಜು ಜಯಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೇಕದಾಟು ಅಣೆಕಟ್ಟು ನಿರ್ಮಾಣ ಕಾವೇರಿ ನದಿ ನೀರು ಸಮಸ್ಯೆಗೆ ಪರಿಹಾರ : ಸಚಿವ ಕೆ.ಹೆಚ್.ಮುನಿಯಪ್ಪ

  ಚಿತ್ರದುರ್ಗ, ಸೆಪ್ಟೆಂಬರ್, 23 : ರಾಜ್ಯ ಸರ್ಕಾರ ಕಾವೇರಿ ಪ್ರಾಧಿಕಾರದ ಆದೇಶದಂತೆ ಪ್ರತಿ ವರ್ಷ 177  ಟಿಎಂಸಿ ನೀರು ತಮಿಳುನಾಡಿಗೆ ನೀಡಬೇಕು. ಆದರೆ ಕಳೆದ ವರ್ಷ 600 ಟಿಎಂಸಿ ನೀರು ವೃಥಾ ಹರಿದು

ಕಾವೇರಿ ಕಿಚ್ಚು : ಚಿತ್ರದುರ್ಗದಲ್ಲಿ ಕರವೇ ಪ್ರವೀಣ್‍ಕುಮಾರ್ ಶೆಟ್ಟಿ ಬಣ ಪ್ರತಿಭಟನೆ

  ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.23  : ತಮಿಳುನಾಡಿಗೆ ಕಾವೇರಿ ನೀರು ಬಿಡುವ ಹಾಗೂ ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯದ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‍ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ಶನಿವಾರ

ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಶ್ರೀಮತಿ ಸಿ.ಕೆ. ಸಂಧ್ಯಾರವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಧಾನ

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.23 : ಉತ್ತಮ ಸೇವೆಗಾಗಿ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಸಿ.ಕೆ ಸಂದ್ಯಾರವರಿಗೆ ಬೆಂಗಳೂರಿನ ಜಯನಗರದ  ಮುಂಢ್ಕರ್ ಅಗ್ನಿಶಾಮಕ  ಅಕಾಡೆಮಿ ಸಂಭಾಗಣದಲ್ಲಿ ಗೃಹ ಸಚಿವರಾದ ಪರಮೇಶ್ವರ್‍ರವರು ಮುಖ್ಯ ಮಂತ್ರಿಗಳ ಚಿನ್ನದ

error: Content is protected !!