ಸರ್ವಜ್ಞನ ತಿಪದಿಗಳಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ : ಶಾಸಕ ಟಿ ರಘುಮೂರ್ತಿ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 20 : ಸರ್ವಜ್ಞ ರಚಿಸಿದ ಸಾವಿರಾರು ತ್ರಿಪದಿಗಳಲ್ಲಿ ಮೌಲ್ಯಗಳ ಆಧಾರಿತ ಅಮೂಲ್ಯ ಸಾಹಿತ್ಯವನ್ನು ನೀಡಿ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತ ಗೊಳಿಸಿದ ಮಹಾನ್ ಮಾನವತಾವಾದಿ ಎಂದು ಶಾಸಕ ಟಿ ರಘುಮೂರ್ತಿ ಬಣ್ಣಿಸಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಆಯೋಜಿಸಿದ್ದ 505ನೇ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ 16ನೇ ಶತಮಾನದಲ್ಲಿ ಜನಿಸಿ ಶುಭದತ್ತ ಎಂಬ ಹೆಸರಿನಿಂದ ಸರ್ವಜ್ಞ ಎಂಬ ಕಾವ್ಯನಾಮದಿಂದ ಅನೇಕ ತ್ರಿಪದಿಗಳನ್ನು ರಚಿಸಿ ತ್ರಿಪದಿ ಕವಿ ಎಂದು ಹೆಸರು ಗಳಿಸಿ ಯಾವುದೇ ಒಂದು ಜಾತಿಗೆ ಸೀಮಿತವಾಗದ ಸಾಹಿತ್ಯವನ್ನು ರಚಿಸಿ ಮನುಕುಲವನ್ನು ಎಚ್ಚರಗೊಳಿಸಿದ ಅದ್ಭುತ ಕವಿಯಾಗಿದ್ದಾರೆ ದಾರ್ಶನಿಕರು ಬೋಧಿಸಿರುವ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳದೆ ಅಡ್ಡ ದಾರಿಯಲ್ಲಿ ನಡೆಯುತ್ತಿದ್ದೇವೆ ಇದು ಮಾನವ ಕುಲಕ್ಕೆ ಇಂದು ಮಾರಕವಾಗುತ್ತಿದೆ ಕುಂಬಾರ ಸಮುದಾಯವು ಕುಂಬಾರಿಕೆ ವೃತ್ತಿಯನ್ನು ಮಾಡುತ್ತಿದ್ದು ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಜನಸಂಖ್ಯೆ ಕಂಡು ಬರುತ್ತದೆ ಆಧುನಿಕ ಭರಾಟೆಯಲ್ಲಿ ಅದು ನಶಿಸಿ ಹೋಗುತ್ತಿದೆ ಆದ್ದರಿಂದ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಹೊರಬೇಕಾಗಿದೆ ಶಿಕ್ಷಣವೇ ಎಲ್ಲಾ ಸಮಾಜದ ಏಳಿಗೆಗೆ ಮೂಲವಾಗಿದೆ ಸರ್ವಜ್ಞನ ತ್ರಿಪದಿಗಳಲ್ಲಿನ ಅಂಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಸಹಬಾಳ್ವೆಯಿಂದ ಬದುಕುವ ಆಶಯವನ್ನು ಹೊಂದಬೇಕಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್ ರೆಹಾನ್ ಪಾಷಾ ಮಾತನಾಡಿ ಸರ್ವಜ್ಞನು ಹೇಳಿರುವಂತೆ ಮೂಢನಂಬಿಕೆಗಳಿಂದ ನಾವು ಹೊರಬಂದು ಮುಂದಿನ ಪೀಳಿಗೆಗೆ ಸರ್ವಜ್ಞನ ವಚನಗಳನ್ನು ಬೋಧಿಸಿ ಅದರಲ್ಲಿನ ಮೌಲ್ಯವನ್ನು ಅಳವಡಿಸುವ ಕಾರ್ಯವಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಗೋವಿಂದರಾಜು ಸರ್ವಜ್ಞನ ಕುರಿತು ಉಪನ್ಯಾಸ ನೀಡಿದರು.ಕುಂಬಾರ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ ನಗರದಲ್ಲಿ ಸರ್ವಜ್ಞ ವೃತ್ತ ಹಾಗೂ ಸಮುದಾಯ ಭವನವನ್ನು ಪೂರ್ಣಗೊಳಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜೈತುನ್ ಬೀ ಉಪಾಧ್ಯಕ್ಷೆ ಸುಮಾ ಭರಮಯ್ಯ ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ನಗರಸಭೆ ಸದಸ್ಯರಾದ ರಮೇಶ್ ಗೌಕವಿತಾತಾ ಬೋರಯ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಜಿ ಟಿ ಶಶಿಧರ್ ಸೇರಿದಂತೆ ಕುಂಬಾರ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *