Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಲ್ಲರೂ ಸಹಕರಿಸಿ, ನವ ಚಿತ್ರದುರ್ಗವನ್ನು ನಿರ್ಮಾಣ ಮಾಡೋಣ : ಶಾಸಕ ಕೆ.ಸಿ. ವಿರೇಂದ್ರ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ,(ಜು.08) :  30 ವರ್ಷದಿಂದ ಇರುವ ಸಮಸ್ಯೆಯನ್ನು ಸರಿಪಡಿಸುವ ಅದಕ್ಕೆ ತೇಪೇ ಹಚ್ಚುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಶಾಸಕ  ಕೆ.ಸಿ.ವಿರೇಂದ್ರ ತಿಳಿಸಿದರು.

ನಗರದ ಐಯ್ಯಣ್ಣ ಪೇಟೆಯ ವಾಸವಿ ಸೂಲ್ಕ್ ಮುಂಭಾಗದ ತ್ಯಾಗರಾಜ್ ಮಾರುಕಟ್ಟೆ ನಿರ್ಮಾಣದ ಶಂಕುಸ್ಥಾಪನೆಯನ್ನು ನೇರವೇರಿಸಿ ಮಾತನಾಡಿದ ಶಾಸಕರು, ನಾನು ಈಗ ಹೂಸದಾಗಿ ಶಾಸಕನಾಗಿದ್ದೇನೆ. ಹೋದ ಕಡೆಯಲ್ಲಿ ಎಲ್ಲಾ 30 ವರ್ಷದ ಸಮಸ್ಯೆಯನ್ನು ಜನತೆ ಹೇಳುತ್ತಾರೆ ಅವುಗಳನ್ನು ಸರಿಪಡಿಸುವ ಮತ್ತು ತೇಪೇ ಹಚ್ಚುವ ಕಾರ್ಯವನ್ನು ಮಾಡಲಾಗುತ್ತಿದೆ. ಅದಕ್ಕೆ ಎಲ್ಲರು ಸಹಕಾರವನ್ನು ನೀಡಬೇಕು, ಹಿರಿಯರು ಸಲಹೆಯನ್ನು ನೀಡಬೇಕು, ನಮ್ಮ ತಂದೆಯವರೊಂದಿಗೆ ಓಡಾಡಿದವರು ಸಹಾ ಇದ್ದಾರೆ. ಸಲಹೆಯನ್ನು ನೀಡಿ ಮಾಡಿಕೊಂಡು ಹೋಗುತ್ತೇನೆ ಎಂದರು.

ಈಗ ಚುನಾವಣೆ ಮುಗಿದಿದೆ, ನನಗೆ ಎಷ್ಟು ಮತ ಬಂದಿತ್ತು ಯಾರು ಮತವನ್ನು ಹಾಕಿದ್ದಾರೆ ಎಂಬುದು ನನ್ನ ಗಮನದಲ್ಲಿ ಇಲ್ಲ. ಇದರ ಬಗ್ಗೆ ಯೋಚನೆಯನ್ನು ಸಹಾ ಮಾಡುವುದಿಲ್ಲ.  ಚಿತ್ರದುರ್ಗದ ಸಮಸ್ತ ಜನತೆ ಹೆಚ್ಚಿನದಾಗಿ ನನ್ನನು ಆಯ್ಕೆ ಮಾಡಿದ್ದಾರೆ.  ಈಗ ನಾನು ಇಡೀ ಚಿತ್ರದುರ್ಗಕ್ಕೆ ಶಾಸಕ, ಆ ಭಾಗದಲ್ಲಿ ಮತಗಳು ಜಾಸ್ತಿ ಬಂದಿತ್ತು ಈ ಭಾಗದಲ್ಲಿ ಕಡಿಮೆ ಬಂದಿತ್ತು ಎಂಬ ಮಾತುಗಳು ನನ್ನ ಬಳಿ ಇಲ್ಲ. ಅದನ್ನು ಯಾರು ಸಹಾ ಮನಸ್ಸಿನಲ್ಲಿ ಇಟ್ಟುಕೊಳ್ಳ ಬೇಡಿ. ತ್ವರಿತಗತಿಯಲ್ಲಿ ಚಿತ್ರದುರ್ಗವನ್ನು ಅಭಿವೃದ್ದಿಯ ಕಡೆಗೆ ತೆಗೆದುಕೊಂಡು ಹೋಗೋಣ. ನಾವೆಲ್ಲಾ ಸೇರಿ ನವ ಚಿತ್ರದುರ್ಗವನ್ನು ನಿರ್ಮಾಣ ಮಾಡೋಣ ಎಂದು ಶಾಸಕ ವಿರೇಂದ್ರ ತಿಳಿಸಿದರು.

ನಾನು ಇಲ್ಲಿಗೆ ಬರುವಾಗ ಹಲವಾರು ಜನತೆ ಈ ಮಾರುಕಟ್ಟೆ ನಿರ್ಮಾಣದ ಬಗ್ಗೆ ವಿಧ ವಿಧವಾದ ಮಾತುಗಳನ್ನು ಹೇಳಿದರು. ಅವರಿಗೆ ಮಾತನ್ನು ನೀಡಿದ್ದೇನೆ. ತ್ವರಿತಗತಿಯಲ್ಲಿ ಮಾರುಕಟ್ಟೆಯನ್ನು ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಿದ ಶಾಸಕ  ಕೆ.ಸಿ.ವಿರೇಂದ್ರ ಈ ಜಾಗದ ಕೂನೆಯಲ್ಲಿ ಮರವೊಂದು ಇದನ್ನು ಶಾಲೆಯ ಮಕ್ಕಳು ಬಳಕೆ ಮಾಡುತ್ತಾರೆ. ಈ ಹಿನ್ನಲೆಯಲ್ಲಿ ಗುತ್ತಿಗೆದಾರರು ಅದನ್ನು ಉಳಿಸಿಕೊಂಡು ಮಾರುಕಟ್ಟೆಯನ್ನು ನಿರ್ಮಾಣ ಮಾಡುವಂತೆ ತಿಳಿಸಿದರು.

ನಗರಸಭೆಯ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ, ಈ ಮಾರುಕಟ್ಟೆ ಪುರಾತನವಾಗಿದ್ದು ತನ್ನದೇ ಆದ ಇತಿಹಾಸವನ್ನು ಹೊಂದಿದೆ.  ಈ ಮಾರುಕಟ್ಟೆ ಈ ಹಿಂದೆ ಚಿತ್ರದುರ್ಗಕ್ಕೆ ಒಂದೇ ಆಗಿತ್ತು.
ಇದನ್ನು ಉತ್ತಮವಾಗಿ ನಿರ್ಮಾಣ ಮಾಡಬೇಕಿದೆ. ಶಾಸಕರ ಬಗ್ಗೆ ಈ ಹಿಂದೆ ಹಲವಾರು ಜನತೆ ವಿವಿಧ ರೀತಿಯಲ್ಲಿ ಮಾತನಾಡಿದ್ದರು. ಈಗ ಅವರ ಕಾರ್ಯು ವೈಖರಿ ಏನು ಎಂಬುದು ಗೊತ್ತಾಗುತ್ತಿದೆ.

ಚಿತ್ರದುರ್ಗಕ್ಕೆ ಅತಿ ಅಗತ್ಯವಾದ ಮೆಡಿಕಲ್ ಕಾಲೇಜು, ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಬಳಿ ಹೋಗಿ ಅನುಮತಿಯನ್ನು ತಂದಿದ್ದಾರೆ. ಇವುಗಳು ತ್ವರಿತಗತಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಯುವ ಜನತೆ ಬದಲಾಗಬೇಕಿದೆ. ಒಂದೇ ಪಕ್ಷಕ್ಕೆ ನಿಷ್ಠೆಯಾಗಬಾರದು, ವಿರೇಂದ್ರರವರಿಗೆ ಶೇ.75 ರಷ್ಟು ಮತಗಳು ಬಂದಿದೆ. ಚಿತ್ರದುರ್ಗದಲ್ಲಿ ಇನ್ನೂ ಮುಂದೆ ತ್ವರಿತಗತಿಯಲ್ಲಿ ಕಾಮಗಾರಿಗಳು ನಡೆಯಲಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಾಗರಾಜ್, ನಗರಸಭಾ ಸದಸ್ಯರಾದ ಹರೀಶ್, ವೆಂಕಟೇಶ್, ಮಾಜಿ ಸದಸ್ಯ ಡಿ.ಸಿ.ಸುರೇಶ್, ರಾಜೇಶ್, ಕಾಂಗ್ರೆಸ್ ಮುಖಂಡ ಎನ್.ಡಿ.ಕುಮಾರ್, ನಿತಿನ್, ಇಫಾಲ್, ಗುತ್ತಿಗೆದಾರರಾದ ಕುಮಾರ್, ಹೇಮಂತ್ ವಸಂತ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೇಸಿಗೆಯಲ್ಲಿ ಕೂದಲಿಗೆ ಎಣ್ಣೆ ಹಚ್ಚಿದರೆ ಏನಾಗುತ್ತೆ ಗೊತ್ತಾ ?

ಸುದ್ದಿಒನ್ : ಹವಾಮಾನದ ಬದಲಾವಣೆಗೆ ಅನುಗುಣವಾಗಿ ಚರ್ಮ ಮತ್ತು ಕೂದಲಿಗೆ ಸರಿಯಾದ ಪೋಷಣೆ ನೀಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಅನೇಕ ಜನರು ತಮ್ಮ ಕೂದಲಿಗೆ ಎಣ್ಣೆಯನ್ನು ಹಾಕುವುದಿಲ್ಲ ಏಕೆಂದರೆ ಅದು ಬೇಸಿಗೆಯಲ್ಲಿ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

error: Content is protected !!