ಬೆಂಗಳೂರು: ಇಂದು ಕಾಂಗ್ರೆಸ್ ಸರ್ಕಾರ ತಮ್ಮ ಐದು ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಎರಡನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆ ಬಗ್ಗೆ ಮಾತನಾಡಿದ್ದಾರೆ.

ಗ್ಯಾರಂಟಿ ನಂಬರ್2 ಜಾರಿ ಮಾಡುವುದಕ್ಕೆ. ಆಧಾರ್ ಕಾರ್ಡ್, ಬ್ಯಾಂಕ್ ಡಿಟೈಲ್ ಕಲೆಕ್ಟ್ ಮಾಡಬೇಕಾಗುತ್ತದೆ. ನಾವೂ ಹೇಳಿರುವುದು ಮನೆಯ ಯಜಮಾನಿಗೆ. ಅವರ ಅಕೌಂಟಿಗೆ ತಿಂಗಳಿಗೆ 2 ಸಾವಿರ ಜಮಾ ಮಾಡ್ತೀವಿ. ಅವರು ಆಧಾರ್ ಕಾರ್ಡ್, ಬ್ಯಾಂಕ್ ಡಿಟೈಲ್ ಜೂನ್ 15 ರಿಂದ ಜುಲೈ 15ರ ತನಕ ಅರ್ಜಿ ಕೊಡಬೇಕು. ಆಗಸ್ಟ್ 15ಕ್ಕೆ ಈ ಯೋಜನೆ ಲಾಂಚ್ ಮಾಡ್ತೀವಿ. ಅವರ ಅಕೌಂಟ್ ಗೆ ಅಮೌಂಟ್ ಮಾಡ್ತೀವಿ.

ಮನೆಯ ಯಜಮಾನಿ ಯಾರೆಂದು ಅವರೇ ನಿರ್ಧಾರ ಮಾಡಬೇಕು. ಪಿಂಚಣಿ ಹೊರತುಪಡಿಸಿ ಎರಡು ಸಾವಿರ ಹಣ ಜಮಾವಣೆ. ಬಿಪಿಎಲ್, ಎಪಿಎಲ್ ಕಾರ್ಡ್ ದಾರರಿಗೆ ಎರಡು ಸಾವಿರ ಜಮಾವಣೆ ಮಾಡ್ತೀವಿ.

