ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕದನ ಜೋರಾಗಿಯೇ ಇದೆ. ಸರ್ಕಾರ ರಚನೆಯಾಗಿ ಎರಡೂವರೆ ವರ್ಷವಾಗ್ತಿದೆ. ಅತ್ತ ಸಿದ್ದರಾಮಯ್ಯ ಅವರು ದಾಖಲೆಯನ್ನು ಇತಿಹಾಸದ ಪುಟದಲ್ಲಿ ಬರೆದಾಗಿದೆ. ಇದಾದ ಮೇಲಾದ್ರು ಮುಖ್ಯಮಂತ್ರಿಯಾಗುವ ಅವಕಾಶ ನನಗೆ ಸಿಗಬಹುದಾ ಅಂತ ಡಿಕೆ ಶಿವಕುಮಾರ್ ಕಾಯ್ತಿದ್ದಾರೆ. ಅದಕ್ಕಾಗಿಯೇ ವರಿಷ್ಠರ ಭೇಟಿಗೆ ದೆಹಲಿಗೂ ತೆರಳಿದ್ದಾರೆ. ಈ ರೀತಿ ಬಡೆಯುತ್ತಿರುವ ಕುರ್ಚಿ ಕದನದ ವಿಚಾರ ನಡುವೆ ಸತೀಶ್ ಜಾರಕಿಹೊಳಿ ಅವರ ಹೆಸರು ಮುನ್ನಲೆಗೆ ಬಂದಿದೆ.
ಚಿತ್ರದುರ್ಗದಲ್ಲಿ ಮಾತನ್ನಾಡಿರುವ ಮಾಜಿ ಸಚಿವ ಹೆಚ್ ಆಂಜನೇಯ, ದೊರೆಯಾಗುವ ಅವಕಾಶ ಸತೀಶ್ ಜಾರಕಿಹೊಳಿಗೆ ಸಿಗಲಿ ಎಂದಿದ್ದಾರೆ. ಅವರು ಎಲ್ಲಿಯೆ ಹೋದ್ರು ಮುಂದಿನ ಸಿಎಂ ಅಂತ ಜನ ಕೂಗ್ತಾರೆ. ಸಿದ್ದರಾಮಯ್ಯ ಅವರು ಸಿಎಂ ಆಗೋದಕ್ಕೆ ಜಾರಕಿಹೊಳಿ ಸಂಘಟಿಸಿದ್ದರು. ಸಿದ್ದರಾಮಯ್ಯ ಅವರದ್ದು ಮುಖ್ಯಮಂತ್ರಿಯಾಗಿ ಈ ಅವಧಿ ಪೂರ್ಣವಾಗಲಿ. ಆದೃ ಸಿದ್ದರಾಮಯ್ಯ ನಂತರದಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಫೋಕಸ್ ಮಾಡಲಿ ಎಂದು ಜಾರಕಿಹೊಳಿ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಸಾಹುಕಾರಿಕೆ ಜೊತೆಗೆ ಹೃದಯ ಶ್ರೀಮಂತಿಕೆ ಬಹಳ ಮುಖ್ಯ. ಅದೆಲ್ಲವೂ ಇರುವ ಸತೀಶ್ ಜಾರಕಿಹೊಳಿ ಅವರು ಈ ಕಾರ್ಯಕ್ರಮಕ್ಕೆ ಬಂದಿರೋದು ದೊಡ್ಡ ಶಕ್ತಿ. ಸಮುದಾಯವನ್ನ ಮುಂದಿನ ದಿನಗಳಲ್ಲಿ ಇನ್ನಷ್ಟು ಗಟ್ಟಿಗೊಳಿಸಿ, ರಾಜಕೀಯವಾಗಿ, ಸಾಮಾಜಿಕವಾಗಿ ಇನ್ನಷ್ಟು ಸೌಲಭ್ಯಗಳನ್ನು ನೀಡುವ ಮೂಲಕ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಶ್ರಮಿಸಿದ್ದಾರೆ. ಮುಂದೆ ಇನ್ನು ಶ್ರಮಿಸಬೇಕು ಎಂದು ಸತೀಶ್ ಜಾರಕಿಹೊಳಿ ಅವರನ್ನ ಹಾಡಿ ಹೊಗಳಿದ್ದಾರೆ. ಸದ್ಯಕ್ಕೆ ಸಿಎಂ ಕುರ್ಚಿ ಕದನದಲ್ಲಿ ನಾ ಕೊಡೆ ನೀ ಬಿಡೆ ಅನ್ನೋ ಯುದ್ಧ ನಡೆಯುತ್ತಿದೆ. ಇದರ ನಡುವೆ ಸತೀಶ್ ಜಾರಕಿಹೊಳಿ ಅವರ ಹೆಸರನ್ನ ಮುನ್ನಲೆಗೆ ತಂದಿದ್ದಾರೆ.

