ಬೆಂಗಳೂರು: ಕುರ್ಚಿ ಕದನದ ಈಗಂತೂ ಜೋರಾಗಿನೇ ನಡೀತಾ ಇದೆ. ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹೋಗಿ ಬಂದ ಮೇಲಂತು ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳು ಎದುರಾಗುತ್ತಲೆ ಇದೆ. ಇದೀಗ ಸಿದ್ದರಾಮಯ್ಯ ಅವರು ಅದೇ ಅದೇ ಪ್ರಶ್ನೆಗೆ ಗರಂ ಆಗಿದ್ದಾರೆ.
ನಾವೂ ಏನು ಮಾತು ಕೊಟ್ಟಿದ್ದೀವಿ ಅದರಂತೆ ನಡೆದಿದ್ದೀವಿ. ಸಾವಿರ ದಿನ ಆಚರಣೆ ಮಾಡ್ತಾ ಇರುವುದು ಮೈಲಿಗಲ್ಲಲ್ಲ. ನಾವೂ ಈ ದೇಶದ ಬಡವರಿಗೆ, ದಲಿತರಿಗೆ ಇವರಿಗೆಲ್ಲಾ ಆರ್ಥಿಕವಾಗಿ, ಸಾಮಾಜಿಕವಾಗಿ ಬಲಪಡಿಸಬೇಕು. ಇದನ್ನ ಮುಂದುವರೆಸುವ ಕೆಲಸ ಮಾಡುತ್ತೇವೆ. ಇಲ್ಲಿಯವರೆಗೆ ಏನು ಮಾತು ಕೊಟ್ಟಿದ್ದೀವಿ ಅದನ್ನ ಮಾಡಿದ್ದೀವಿ ಎಂದಿದ್ದಾರೆ. ಸರ್ಕಾರದ ಸಾಧನಾ ಸಮಾವೇಶದ ಬಗ್ಗೆ ಬಿಜೆಪಿಯವರು ವಿರೋಧ ಮಾಡ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಬಿಜೆಪಿಯವರಿಗೆ ಹೊಟ್ಟೆಕಿಚ್ಚಿದೆ. ಅದಕ್ಕೆ ವಿರೋಧ ಮಾಡ್ತಾರೆ. ಯಾಕಂದ್ರೆ ಅವ್ರು ಏನು ಮಾಡ್ಲಿಲ್ವಲ್ಲ ಅದಕ್ಕೆ. ಅವರು ಏನು ಮಾಡಿದ್ದಾರೆ. 2018ರಲ್ಲಿ 600 ಭರವಸೆಗಳನ್ನ ಕೊಟ್ಟಿದ್ದರು. ಅದರಲ್ಲಿ 10% ಈಡೇರಿಸಿದ್ದಾರಾ..? ನಮ್ಮನ್ನ ವಿರೋಧಿಸುವುದಕ್ಕೆ ಯಾವ ಅಧಿಕಾರ ಇದೆ ಎಂಬ ಪ್ರಶ್ನೆ ಕೇಳಿದ್ದಾರೆ.
ಇದೇ ವೇಳೆ ಅಧಿಕಾರ ಹಂಚಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ಹೈಕಮಾಂಡ್ ಏನು ಹೇಳ್ತಾರೋ ಅದೇ ರೀತಿ ನಡೆದುಕೊಳ್ತೀನಿ ಅಂದಿದ್ದೀನಿ. ಆ ಬಗ್ಗೆ ಏನು ಕೇಳ್ಬೇಡಿ ಅಂತ ಹೇಳಿದ್ದೀನಿ. ಪುನಃ ಪುನಃ ನೀವ್ಯಾಕೆ ಅದನ್ನೇ ಕೇಳ್ತೀರಿ. ಹೈಕಮಾಂಡ್ ಏನು ಹೇಳುತ್ತೆ ಅದನ್ನೇ ನಮ್ಮ ಪಕ್ಷದವರೆಲ್ಲ ಕೇಳಬೇಕು. ಟ್ವೀಟ್ ಹೈಕಮಾಂಡ್ ಅವರೇನಾದರೂ ಮಾಡ್ತಾರಾ ಎಂಬ ಪ್ರಶ್ನೆಯನ್ನ ಕೇಳಿದ್ದಾರೆ. ಡಿಕೆ ಶಿವಕುಮಾರ್ ಅವರು ಕೂಡ ಹೈಕಮಾಂಡ್ ನಾಯಕರ ಸ್ಪಷ್ಟ ಉತ್ತರಕ್ಕಾಗಿಕಾಯ್ತಿದ್ದಾರೆ.


