ಬೆಂಗಳೂರು: ನೆಲ, ಜಲ, ಭಾಷೆ ಎಂದು ಬಂದರೆ ನಾವೂ ರಾಜೀಯಾಗುವ ಪ್ರಶ್ನೆಯೇ ಇಲ್ಲ. ಕನ್ನಡ ಭಾಷೆಗೆ ಇದೆ ಮೊದಲ ಬಾರಿಗೆ ಕಾನೂನು ತರಲಾಗುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ವಿಧಾನಸಭಾ ಕಲಾಪದಲ್ಲಿ ಈ ಸಂಬಂಧ ಮಾತನಾಡಿರುವ ಸಿಎಂ ಬೊಮ್ಮಾಯಿ, ಎಲ್ಲಾ ಮಾತೃ ಭಾಷೆಯೂ ರಾಷ್ಟ್ರೀಯ ಭಾಷೆಯೇ. ಇದನ್ನೇ ನಮ್ಮ ಪ್ರಧಾನಿಯವರು ಹೇಳಿದ್ದಾರೆ. ಕನ್ನಡ ಕಡ್ಡಾಯವಾಗಿ ಮಾಡಲು ಕಾನೂನನ್ನು ತರುತ್ತೇವೆ. ಕನ್ನಡ ಬೆಳೆಸುವುದಕ್ಕೆ ನಮ್ಮ ಸರ್ಕಾರ ಸದಾ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಭಾರತ ಒಂದು ಒಕ್ಕೂಟ ದೇಶ. ವಿವಿಧ ಭಾಷೆ, ವಿವಿಧ ಸಂಸ್ಖೃತಿ ಇರುವಂರ ರಾಜ್ಯಗಳಿರುವಂತ ಒಕ್ಕೂಟ. ಯಾವುದೇ ಒಂದು ಭಾಷೆಯನ್ನು ಏರುವುದಕ್ಕೆ ಅವಕಾಶವಿಲ್ಲ. ಕನ್ನಡವನ್ನು ಸಂಪೂರ್ಣವಾಗಿ ರಕ್ಷಣೆ ಮಾಡುವುದು ಅಷ್ಟೇ ಅಲ್ಲ, ಅದನ್ನು ಬೆಳೆಸುವುದಕ್ಕೆ ನಮ್ಮ ಸರ್ಕಾರ, ರಾಜ್ಯ, ನಮ್ಮ ಜನತೆ ಕೂಡ ಬದ್ಧರಾಗಿದ್ದಾರೆ. ಯಾವುದೇ ಕಾರಣಕ್ಕೂ ಇಲ್ಲಿ ರಾಜೀ ಇಲ್ಲ. ನಮ್ಮ ನೆಲ, ಭಾಷೆ ಅಂತ ಬಂದಾಗ ರಾಜಕೀಯ ಬಿಟ್ಟು ರಕ್ಷಿಸುತ್ತೇವೆ. ಕನ್ನಡ ಬಳಕೆ ಹೆಚ್ಚು ಮಾಡುವುದಕ್ಕೆ ಒಂದು ಕಾನೂನನ್ನೇ ತರುತ್ತಿದ್ದೀವಿ.
ಇದೇ ಸೆಷನ್ನಲ್ಲಿ ಕನ್ನಡವನ್ನ ಕಾನೂನಾತ್ಮಕವಾಗಿ ಕಡ್ಡಾಯ ಮಾಡುವಂತದ್ದು, ಪ್ರಥಮ ಬಾರಿಗೆ ಈ ರಾಜ್ಯದಲ್ಲಿ ತರುತ್ತಾ ಇದ್ದೀವಿ. ಕನ್ನಡ ಕಡ್ಡಾಯ ಕನ್ನಡ ಕಡ್ಡಾಯ ಅಂತ ಅಷ್ಟೇ ಇಷ್ಟು ದಿನ ಹೇಳುತ್ತಾ ಇದ್ದೆವು. ಪ್ರಾಧಿಕಾರವಿದೆ, ಹಲವಾರು ಸಮಿತಿ ಇದೆ. ಆದರೆ ಕಾನೂನು ಸ್ವರೂಪ ಇರಲಿಲ್ಲ. ಆ ರಕ್ಷಣೆ ಕಾನೂನು ಭಾಷೆಗೆ ಇರುತ್ತೆ, ಮಾತನಾಡುವವರಿಗೆ ಇರುತ್ತೆ. ಇಲ್ಲಿ ಯಾರು ಅನ್ಯ ಭಾಷಿಗರು ಇದ್ದಾರೆ ಅವರಿಗೂ ಕನ್ನಡವನ್ನು ಕಲಿಯಲು ಒತ್ತಾಯ ಮಾಡಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ.
ಇನ್ನು ಇದೇ ಮೊದಲ ಬಾರಿಗೆ ಕನ್ನಡದಲ್ಲಿಯೇ ಇಂಜಿನಿಯರಿಂಗ್ ಮಾಡುವ ಅವಕಾಶವನ್ನು ನೀಡಲಾಗಿದೆ. ಈಗಾಗಲೇ ಒಂದು ಸೆಮಿಸ್ಟರ್ ಪರೀಕ್ಷೆ ಕನ್ನಡದಲ್ಲಿಯೇ ಮುಗಿದು ಹೋಗಿದೆ. ಇದು ಕೂಡ ಇಲ್ಲಿವರೆಗೆ ಯಾರು ಮಾಡಿರಲಿಲ್ಲ. ನಮ್ಮ ಸರ್ಕಾರ ಮೊದಲ ಬಾರಿಗೆ ಮಾಡಿದೆ ಎಂದು ಸಿಎಂ ತಿಳಿಸಿದ್ದಾರೆ.