ಈಶ್ವರಪ್ಪ ವಿರುದ್ದ ಕಾನೂನು ಕ್ರಮ : ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

2 Min Read

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.09 : ಸಂಸದ ಡಿಕೆ ಸುರೆಶ್ ಅವರನ್ನು ಕೊಲ್ಲಬೇಕು ಎಂದು ಹೇಳಿಕೆ ನೀಡಿರುವ ಈಶ್ವರಪ್ಪ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಒಬ್ಬ ರಾಜಕೀಯ ಪಕ್ಷದ ಮುಖಂಡರಾಗಿ ಹೇಳುವ ಭಾಷೆನಾ ? ಇದು. ಇವರಿಗೆಲ್ಲ RSS ಟ್ರೈನಿಂಗ್ ಕೊಟ್ಟಿರುವುದು ಇದೇನಾ ಎಂದು ಪ್ರಶ್ನೆ ಮಾಡಿದ್ದಾರೆ.

ಜಿಲ್ಲೆಯ ಹೊಸದುರ್ಗದ  ಭಗೀರಥ ಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶ ವಿಭಜನೆ ಹೇಳಿಕೆ ನೀಡುವವರನ್ನ ಕೊಲ್ಲುವ ಕಾನೂನು ತರ್ಬೇಕು ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಕಿಡಿಕಾರಿದರು.

ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರಿಗೆ ಹೊಡಿ, ಕಡಿ, ಬಡಿ,  ಬಿಟ್ರೆ ಬೇರೆ ಭಾಷೆ ಗೊತ್ತಿಲ್ಲ.  ನನಗೆ RSS ಟ್ರೈನಿಂಗ್ ಆಗಿದೆ ಎನ್ನುತ್ತಾರೆ ಇದೇನಾ ಟ್ರೈನಿಂಗ್ ಆಗಿರುವುದು ಎಂದು ಪ್ರಶ್ನಿಸಿದರು.

ಇನ್ನು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ 40 % ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ನಾಗಮೋಹನ್ ದಾಸ್ ಕಮಿಷನ್ ಮಾಡಿದ್ದೇವೆ. ಅವರ ಬಳಿ ಭ್ರಷ್ಟಾಚಾರ ನಡೆದ ಬಗ್ಗೆ ದಾಖಲೆಗಳು ಇದ್ದರೆ ನೀಡಲಿ ಎಂದರು. ಅಲ್ಲದೆ
ಅಧಿಕಾರಿಗಳು ಕೇಳುತ್ತಾರೆ ಎಂದಿದ್ದಾರೆ, ಅಂಥವರ ವಿರುದ್ದ ದೂರು ನೀಡಲಿ ಎಂದು ಕೆಂಪಣ್ಣ ಹೇಳಿಕೆಗೆ ತಿರುಗೇಟು ನೀಡಿದರು.

ಅನುದಾನದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವ ಯಾವುದೇ ಆಲೋಚನೆ ಇಲ್ಲ. ನಮಗೆ ಅನ್ಯಾಯ ಆಗಿರುವುದು ನಿಜ, ನಾವು 100 ರೂ.ತೆರಿಗೆ ಕೊಟ್ಟರೆ 12 ರೂ ಮಾತ್ರ. ಇನ್ನುಳಿದ 88 ರೂ. ಕೇಂದ್ರಕ್ಕೆ ಹೋಗುತ್ತದೆ. ಗುಜರಾತ್ ಸಿಎಂ ಆದಾಗ ತೆರಿಗೆ ನಮ್ಮ ರಾಜ್ಯದ್ದು ನಾವೇ ವಸೂಲಿ ಮಾಡುತ್ತೇವೆ ಎಂದರು. ಇದನ್ನ ಹೇಳಿದ್ದು ಮಿಸ್ಟರ್ ಮೋದಿ. ಈಗ ದೇಶ ವಿಭಜನೆ ಎಂದು ಹೇಳುತ್ತಿದ್ದಾರೆ, ಆಗ ಏನೂ ಹೇಳುತ್ತಿದ್ದರು.

ನಮ್ಮ ಪಾಲು ನಾವು ಕೇಳಿದ್ರೆ, ದೇಶ ವಿಭಜನೆ ಎನ್ನುತ್ತಾರೆ.
ದೇಶ ವಿಭಜನೆ ಮಾಡಲು ಹೊರಟವರ್ಯಾರು ಮೋದಿ ಅಲ್ವ? ನಿಮಗೆ ಕನ್ನಡಿಗರಾಗಿ ಕೋಪ ಬರಲ್ವಾ ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು. ನೀವೆಲ್ಲ ಸತ್ಯ ಬರೆಯದೇ ಹೋದರೆ ಏನೂ ಮಾಡೋದು ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಅಪ್ಪರ್ ಭದ್ರ ವಿಚಾರದಲ್ಲಿ ಮೇಡಂ ಇವಳು, ಎಂಥ ನಿರ್ಮಲ ಸೀತಾರಾಮ ಬಜೆಟ್ ನಲ್ಲಿ ಹೇಳಿದ್ದಾರೆ. 23-24 ಬಜೆಟ್ ನಲ್ಲಿ ಅಪ್ಪರ್ ಭದ್ರಾ ಯೋಜನೆಗೆ 5300 ಕೋಟಿ ಹೇಳಿದ್ದಾರೆ. ಬಜೆಟ್ ನಲ್ಲಿ ಹೇಳಿ ಒಂದು ರೂಪಾಯಿ ಕೂಡಾ ಕೊಟ್ಟಿಲ್ಲ.8 ಸಾವಿರ ಕೋಟಿಯಲ್ಲಿ 6 ಸಾವಿರ ಕೋಟಿ ನೀಡಿದ್ದೇವೆ. ಅಪ್ಪರ್ ಭದ್ರಾ ವಿಚಾರದಲ್ಲಿ ಡಿಕೆಶಿ ಕೇಳಿದ್ದಾರೆ.
ನಾನು ಕೂಡಾ ನೀರಾವರಿ ಮಂತ್ರಿಗಳನ್ನ ಕೇಳಿದ್ದೇನೆ.
ಕೇಳಿದ್ರೆ ಕೊಡ್ಬೇಕು ಅಂತ ಎಲ್ಲಿದೆ, ಬಜೆಟ್ ನಲ್ಲಿ ಹೇಳಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ನಿರ್ಮಲ ಸೀತಾರಾಮನ್ ರಾಜ್ಯದಿಂದ ಆಯ್ಕೆಯಾಗಿದ್ದಾರೆ. ನಮ್ಮ ರಾಜ್ಯ ಪ್ರತಿನಿಧಿಸಿದ್ದಾರೆ, ಜವಬ್ದಾರಿ ಇಲ್ವಾ ಎಂದರು.

ಮಿಸಸ್ ನಿರ್ಮಲ ಸೀತರಾಮನ್ ರಿಜೆಕ್ಟ್ ಮಾಡಿದ್ದಾರೆ. ಬಸವರಾಜ್ ಬೊಮ್ಮಾಯಿ ಕೇಂದ್ರದಿಂದ 5300 ಕೋಟಿ ಬರುತ್ತದೆ ಎಂದು ಹೇಳಿದ್ದರು. ರಾಷ್ಟ್ರೀಯ ಯೋಜನೆ ಘೋಷಣೆ ಮಾಡಿದ್ದಾರೆ, ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರದ ಮೇಲೆ ನಿಮಗೆಲ್ಲಾ ಕೋಪ ಬರ್ಬೇಕು ಎಂದರು.

Share This Article
Leave a Comment

Leave a Reply

Your email address will not be published. Required fields are marked *