ಮೈಸೂರು: ಸದ್ಯ ಪಠ್ಯಪುಸ್ತಕದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಈ ವರ್ಷದ ಪಠ್ಯ ಪುಸ್ತಕಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ ಇದೀಗ ಸಾಹಿತಿ ದೇವನೂರು ಮಹಾದೇವ ತಮ್ಮ ಪಠ್ಯ ಪುಸ್ತಕವನ್ನು ಕೈಬಿಡುವಂತೆ ತ್ರದ ಮೂಲಕ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಈ ಸಂಬಂಧ ಬರೆದಿರುವ ಅವರು, ರಾಜ್ಯದಲ್ಲಿ ಪಠ್ಯ ಪರಿಷ್ಕರಣೆಯ ಕುರಿತಾದ ವಾದ ವಿವಾದಗಳು ನಡೆಯುತ್ತಿವೆ. 10ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ನನ್ನದು ಒಂದು ಕಥನ ಭಾಗವಿದೆ. ಈ ಹಿಂದೆ ಹಳೆ ಪಠ್ಯಕ್ಕೆ ನೀಡಿದ ಅನುಮತಿಯನ್ನು ಈ ಬಾರಿ ವಾಪಸ್ಸು ಪಡೆಯುತ್ತಿದ್ದೇನೆ. ಈ ಬಾರಿಯ ಪಠ್ಯದಲ್ಲಿ ನನ್ನ ಪಠ್ಯವನ್ನು ತೆಗೆಯಿರಿ ಎಂದಿದ್ದಾರೆ.