ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗುವುದಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಅದಕ್ಕೆಂದೆ ಸೇವಾ ಸಿಂಧು ಅಪ್ಲಿಕೇಷನ್ ನಲ್ಲಿ ಅವಕಾಶ ನೀಡಿದೆ. ಆದರೆ ಎಲ್ಲರು ಒಟ್ಟಿಗೆ ಅಪ್ಲಿಕೇಷನ್ ಹಾಕುವುದಕ್ಕೆ ಪ್ರಯತ್ನಿಸಿದಾಗ ಸರ್ವರ್ ಸಪೋರ್ಟ್ ಮಾಡುತ್ತಿಲ್ಲ. ಈ ಬಗ್ಗೆ ಸತೀಶ್ ಜಾರಕಿಹೊಳಿ, ನಮ್ಮ ಯೋಜನೆಗಳಿಗೆ ಅಡ್ಡಗಾಲು ಹಾಕಲು ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿದ್ದು, ಆ ಹೇಳಿಕೆಯನ್ನು ಇಲ್ಲಿಗೆ ಬಿಟ್ಟು ಬಿಡಿ. ನನ್ನ ಹೇಳಿಕೆಯನ್ನು ಹಿಂಪಡೆಯಲ್ಲ. ಅದು ರಾಜಕೀಯ ಹೇಳಿಕೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಸರ್ವರ್ ಹ್ಯಾಕ್ ಮಾಡಿಲ್ಲ ಎಂದರೆಮುಗಿಯಿತು. ಕೇಂದ್ರ ಸರ್ಕಾರದ ವಿರುದ್ಧ ಫೋನ್ ಟ್ಯಾಪ್, ವಿದ್ಯುನ್ಮಾನ ಮಾಧ್ಯಮದ ಹ್ಯಾಕ್ ನಂತಹ ಆರೋಪಗಳು ಕೇಳಿ ಬಂದಿದೆ. ಅದೇ ರೀತಿ ನಮ್ಮ ಸರ್ಕಾರದ ಸರ್ವರ್ ಹ್ಯಾಕ್ ಆಗಿರಬಹುದು ಎನ್ನುವುದು ನನ್ನ ಸಂಶಯವಾಗಿತ್ತು. ಬೇರೆ ವಿಷಯವನ್ನು ಚರ್ಚಿಸೋಣಾ. ಈ ವಿಷಯವನ್ನು ಇಲ್ಲಿಗೆ ಬಿಡೋಣಾ ಎಂದಿದ್ದಾರೆ.
ಬಿಜೆಪಿ ನಾಯಕರು ಸಹ ಇಂತಹ ಬಹಳಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ರಾಜಕೀಯದಲ್ಲಿ ಇಂತಹ ಹೇಳಿಕೆಗಳು ಇದ್ದೇ ಇರುತ್ತದೆ. ನನ್ನದು ರಾಜಕೀಯ ಸ್ಟೇಟ್ಮೆಂಟ್ ಅಷ್ಟೇ. ಬಿಜೆಪಿ ನಾಯಕರು ಇಂಥಹ ಬಹಳಷ್ಟು ಹೇಳಿಕೆಯನ್ನು ನೀಡಿದ್ದಾರೆ ಎಂದು ತಮ್ಮ ಹೇಳಿಕೆ ಸಮರ್ಥನೆ ನೀಡಿದ್ದಾರೆ.