in ,

ಟ್ಯಾಬ್ಲೆಟ್, ಸ್ಮಾರ್ಟ್ ಫೋನ್ ಮೂಲಕವೂ ಕಲಿಕೆಗೆ ಅವಕಾಶ: ಅಶ್ವಥ್ ನಾರಾಯಣ

suddione whatsapp group join

 

ಬೆಂಗಳೂರು: ಒಡಂಬಡಿಕೆಯು ರಾಜ್ಯದ ಎಲ್ಲ ಸರಕಾರಿ ಮತ್ತು ಖಾಸಗಿ ಕಾಲೇಜು/ ವಿಶ್ವವಿದ್ಯಾಲಯಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ಇದರಿಂದ ಪ್ರತೀವರ್ಷ 5 ಲಕ್ಷ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಲಾಭವಾಗಲಿದೆ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದರು.

ಈ ವೇಳೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಉಪಕ್ರಮದಿಂದಾಗಿ ನಾಸ್ಕಾಂನ ಫ್ಯೂಚರ್ ಸ್ಕಿಲ್ಸ್ ಪ್ರೈಮ್’ ವೇದಿಕೆಯಲ್ಲಿರುವ ಕೌಶಲ್ಯಾಭಿವೃದ್ಧಿ ಕೋರ್ಸುಗಳು ರಾಜ್ಯದ ಪದವಿ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಆನ್-ಲೈನ್ ಮೂಲಕ ಸುಲಭವಾಗಿ ಲಭ್ಯವಾಗಲಿವೆ ಎಂದರು.

ಈ ಒಡಂಬಡಿಕೆಯಲ್ಲಿ ಗುಣಮಟ್ಟದಿಂದ ಕೂಡಿರುವ ಕೋರ್ಸುಗಳು, ಬೋಧಕ ಸಿಬ್ಬಂದಿಗೆ ತರಬೇತಿ ಮತ್ತು ಮೂಲಸೌಲಭ್ಯ ಸಂಪನ್ಮೂಲಗಳ ಅಭಿವೃದ್ಧಿಗೆ ಆದ್ಯ ಗಮನ ಕೊಡಲಾಗಿದೆ. ಈ ಒಡಂಬಡಿಕೆಯ ಫಲವಾಗಿ, ಕಂಪ್ಯೂಟರ್ ವಿಜ್ಞಾನವನ್ನು ಹೊರತುಪಡಿಸಿ ಬೇರೆ ವಿಭಾಗಗಳಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಪದವಿಯ ಮೊದಲನೇ ವರ್ಷದಲ್ಲಿ ಡಿಜಿಟಲ್ ಫ್ಲೂಯೆನ್ಸಿ, ಎರಡನೇ ವರ್ಷದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೂರನೇ ವರ್ಷದಲ್ಲಿ ಸೈಬರ್ ಸೆಕ್ಯುರಿಟಿ ಕೋರ್ಸುಗಳು ಲಭ್ಯವಾಗಲಿದ್ದು, ಇವುಗಳ ಕಲಿಕೆ ಕಡ್ಡಾಯವಾಗಿದೆ.

ಈ ಕೋರ್ಸುಗಳನ್ನು ಮೈಕ್ರೋಸಾಫ್ಟ್ ಮತ್ತು ಸಿಸ್ಕೋ ಕಂಪನಿಗಳು ರೂಪಿಸಿದ್ದು, ಇವುಗಳ ಮೂಲಕ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಕಲಿಸಲಾಗುವುದು. ಇದನ್ನು ಕಲಿಯಲು ಯಾವುದೇ ಶುಲ್ಕದ ಹೊರೆ ಇರುವುದಿಲ್ಲ ಎಂದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ವಯೋಸಹಜ ಕಾಯಿಲೆ : ಮಾಜಿ ಸಚಿವ ಅಗಡಿ ನಿಧನ..!

ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುವ ವಿಚಾರ ಡಿ ಕೆ ಶಿವಕುಮಾರ್ ಹೇಳಿದ್ದೇನು ?