ಬೆಂಗಳೂರು: ಬಜೆಟ್ ಮೇಲಿನ ಅಧಿವೇಶನ ನಡೆಯುತ್ತಾ ಇದೆ. ಈ ಅಧಿವೇಶನದಲ್ಲಿ ಶಾಸಕ ಭೀಮಣ್ಣ ನಾಯಕ ಅವರು ಕೇಳಿದ ಪ್ರಶ್ನೆಗೆ ಸಚಿವರೇ ಶಾಕ್ ಆಗಿದ್ದಾರೆ. ಎಲೆ ಚುಕ್ಕೆ ರೋಗದ ಬಗ್ಗೆ ಪ್ರಶ್ನೆಯನ್ನ ಕೇಳಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಲೆಗೆ ಅಂಟಿರುವ ಎಲೆಚುಕ್ಕೆ ರೋಗದ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರ ಕೊಡೋದಕ್ಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ತಡಬಡಾಯಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಅನೇಕ ತೋಟಗಳು ಇದೆ. ಈಗಾಗಲೇ ರೋಗವೂ ಬಹಳ ಇದೆ. ಇಂತಹ ಸಂದರ್ಭದಲ್ಲಿ ತೋಟಗಳನ್ನು ನಿರ್ವಹಣೆ ಮಾಡೋದು ಬಹಳ ಕಷ್ಟ. ಸೈಂಟಿಸ್ಟ್ ಗಳು ಇದಕ್ಕೆ ಪರಿಹಾರವನ್ನು ಕೊಟ್ಟರು ಕೂಡ ಇದು ಹತೋಟಿಗೆ ಬರಲಿಲ್ಲ. ಶಿರಸಿ ಸಿದ್ಧಾಪುರ, ಧಾರವಾಡ ಜಿಲ್ಲೆಯಲ್ಲಿ ಸುಮಾರು 20 ಸಾವಿರ ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಈ ರೈತರಿಗಾಗಿ ಸರ್ಕಾರ ಮುಂದೆ ಬರಲಿಲ್ಲ ಅಂದ್ರೆ ಕೂಲಿನು ಮಾಡೋದಕ್ಕೆ ಆಗದೆ ಇರುವಷ್ಟು ಸಮಸ್ಯೆ ಆಗುತ್ತೆ. ಹೀಗಾಗಿ ಅವರಿಗೆ ಆರ್ಥಿಕ ಶಕ್ತಿಯನ್ನ ತುಂಬುವಂತ ಕೆಲಸವನ್ನು ಸರ್ಕಾರ ಮಾಡಬೇಕೆಂದು ಬಯಸುತ್ತೇನೆ ಎಂದಿ ಭೀಮಣ್ಣ ನಾಯ್ಕ ಅವರು ಹೇಳಿದ್ದಾರೆ.
ಇದಕ್ಕೆ ಎಸ್ ಎಸ್ ಮಲ್ಲಿಕಾರ್ಜುನ ಅವರು ಉತ್ತರ ಕೊಟ್ಟಿದ್ದು, ಸರ್ಕಾರ ಇದಕ್ಕೆ ಸಾಕಷ್ಟು ಅನುದಾನವನ್ನು ಬಜೆಟ್ ನಲ್ಲಿ ಕೊಟ್ಟಿದೆ. ಇನ್ಶೂರೆನ್ಸ್ ಪಾಲಿಸಿಯನ್ನು ಮಾಡಿಕೊಡುವ ವ್ಯವಸ್ಥೆಯನ್ನ ಮಾಡ್ತಾ ಇದ್ದೀವಿ. ಸಾಕಷ್ಟು ರೈತರು ಸಾಲ ಏನಾಗಿದೆ ಅದನ್ನ ತೀರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ನಮ್ಮ ಇಲಾಖೆಯಲ್ಲಿ ಅಷ್ಟಿಲ್ಲ. ಬ್ಯಾಂಕ್ ನಿಂದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಉತ್ತರ ನೀಡಿದ್ದಾರೆ.






