ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ನ.18 : ಈ ಹಿಂದೆ ನ್ಯಾಯವಾದಿಗಳಾದವರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರುತ್ತಿದ್ದರು, ಅವರು ಕಾನೂನು ತಿಳಿದುಕೊಂಡಿರುವುದರಿಂದ ಉತ್ತಮವಾದ ಆಡಳಿತವನ್ನು ನೀಡಲು ಸಹಕಾರಿಯಾಗುತ್ತಿತ್ತು. ಆದರೆ ಇತ್ತಿಚಿನ ದಿನಮಾನದಲ್ಲಿ ನ್ಯಾಯವಾದಿಗಳು ರಾಜಕೀಯಕ್ಕೆ ಬರುವ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ, 2024ರ ಲೋಕಸಭೆ ಚುನಾವಣೆ ಟಿಕೇಟ್ ಆಕಾಂಕ್ಷಿ ಡಾ.ಬಿ. ತಿಪ್ಪೇಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ವಕೀಲರ ಸಂಘದ ಆಶ್ರಯದಲ್ಲಿ ನಡೆದ ಶಾರದ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಕಾನೂನನ್ನು ತಿಳಿದಿರುವ ನ್ಯಾಯವಾದಿಗಳು ರಾಜಕೀಯದಲ್ಲಿ ಆಸಕ್ತಿಯನ್ನು ಹೊಂದುವುದರ ಮೂಲಕ ರಾಜಕೀಯವನ್ನು ಪ್ರವೇಶ ಮಾಡುತ್ತಿದ್ದರು. ಇದರಿಂದ ಅಧಿಕಾರಿಗಳಿಗೆ ಕಾನೂನಿನ ಬಗ್ಗೆ ತಿಳಿಸಿ ಜನತೆ ಸರಿಯಾದ ರೀತಿಯಲ್ಲಿ ಸಹಾಯವನ್ನು ಮಾಡುತ್ತಿದ್ದರು ಈಗಲೂ ಸಹಾ ರಾಜಕೀಯದಲ್ಲಿ ಹಲವಾರು ಜನ ನ್ಯಾಯವಾದಿಗಳು ಇದ್ದಾರೆ ಆದರೆ ಕಡಿಮೆ ಸಂಖ್ಯೆಯಲ್ಲಿದ್ದಾರೆ ಇದರ ಪ್ರಮಾಣ ಹೆಚ್ಚಾಗಬೇಕಿದೆ. ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಸ್ಪರ್ದೆ ಮಾಡುವುದರ ಮೂಲಕ ಜನ ಸೇವೆಯನ್ನು ಮಾಡಬೇಕಿದೆ.
ಇದಲ್ಲದೆ ವಿಧಾನಸಭೆ, ಮತ್ತು ಲೋಕಸಭೆಗಳಲ್ಲಿಯೂ ಸಹಾ ಚುನಾವಣೆಯಲ್ಲಿ ಸ್ಫರ್ದೆಯನ್ನು ಮಾಡಬೇಕಿದೆ ಎಂದ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ದೆ ಮಾಡುತ್ತೇನೆ. ಈ ಹಿನ್ನಲೆಯಲ್ಲಿ ನಿಮ್ಮ ಬೆಂಬಲ ನನಗೆ ಇರಬೇಕೆಂದು ಮನವಿ ಮಾಡಿದರು.
ವಕೀಲರ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಮಾತನಾಡಿ, ಚಿತ್ರದುರ್ಗ ಲೋಕಸಭೆಗೆ ಇದುವರೆವಿಗೂ ಹೂರಗಿನಿಂದ ಬಂದವರು ಆಯ್ಕೆಯಾಗುವುದರ ಮೂಲಕ ರಾಜಕೀಯವನ್ನು ಮಾಡುತ್ತಿದ್ದಾರೆ. ಇವರಿಂದ ಚಿತ್ರದುರ್ಗ ಜಿಲ್ಲೆ ಯಾವ ಅಭಿವೃದ್ದಿಯನ್ನು ಕಂಡಿಲ್ಲ, ಅಯ್ಕೆಯಾದಾಗ ಮಾತ್ರ ಮತದಾರರ ಕೈಗೆ ಸಿಗುವ ಸಂಸತ್ ಸದಸ್ಯರು ಮತ್ತೇ ಇತ್ತ ಕಡೆ ಬರುವುದೇಲ್ಲಾ, ಈ ರೀತಿಯಾದರೆ ಅಭೀವೃದ್ದಿ ಯಾವ ರೀತಿ ಆಗುತ್ತದೆ ಎಂದು ಪೃಶ್ನಿಸಿದ ಅವರು, ಈ ಭಾರಿ ನಮ್ಮಮ ಚಿತ್ರದುರ್ಗದವರೆ ಆದ ಡಾ.ಬಿ.ತಿಪ್ಪೇಸ್ವಾಮಿಯವರು ಲೋಕಸಭಾ ಚುನಾವಣೆಯಲ್ಲಿ ಸ್ಫರ್ದಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದು ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ತರುವ ಪ್ರಯತ್ನದಲ್ಲಿದ್ದಾರೆ. ಅವರೇನಾದರೂ ಕಾಂಗ್ರಸ್ ಪಕ್ಷದಿಂದ ಟಿಕೇಟ್ ತಂದರೆ ಅವರಿಗೆ ವಕೀಲರ ಸಂಘ ಪೂರ್ಣ ಪ್ರಮಾಣದಲ್ಲಿ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನ್ಯಾಯವಾದಿಗಳಾದ ಮಾಲತೇಶ್ ಆರಸ್, ದಯಾನಂದ, ಪ್ರತಾಪ್ ಜೋಗಿ, ಆಶೋಕ ಬೆಳಗಟ್ಟ ಸೇರಿದಂತೆ ಇತರರು ಮಾತನಾಡಿದರು.
ವಕೀಲರ ಸಂಘದ ಉಪಾಧ್ಯಕ್ಷರಾದ ಅನಿಲ್‍ಕುಮಾರ್, ಖಂಜಾಚಿ ಪ್ರದೀಪ್ ಸಹಕಾರ್ಯದರ್ಶಿ ಗೀರೀಶ್ ಉಪಸ್ಥಿತರಿದ್ದರು.