ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ವಿಚಾರ ಇತ್ತಿಚೆಗೆ ಬಯಲಾಗಿತ್ತು. ಸಲ್ಮಾನ್ ಖಾನ್ ಅವರ ತಂದೆ ವಾಯುವಿಹಾರಕ್ಕೆ ಹೋದ ಜಾಗದಲ್ಲಿ ಪತ್ರ ಒಂದು ಸಿಕ್ಕಿತ್ತು. ಆ ಪತ್ರದಲ್ಲಿ ನಿಮ್ಮ ಮಗನನ್ನು ಕೊಲೆ ಮಾಡುತ್ತೇವೆ. ಅವನ ಕಥೆ ಮುಗಿಯಿತು ಎಂದು ಬರೆದಿದ್ದರು. ಆ ಪತ್ರದಿಂದ ಸಲ್ಮಾನ್ ಖಾನ್ ಅವರ ತಂದೆ ಗಾಬರಿಯಾಗಿದ್ದರು.
ಬಳಿಕ ಈ ಸಂಬಂಧ ಸಲ್ಮಾನ್ ಖಾನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪಂಜಾಬ್ ಪೊಲೀಸರು ಆ ಪತ್ರದ ಹಿಂದೆ ಬಿದ್ದಿದ್ದರು. ಅದರ ತನಿಖೆ ಶುರು ಮಾಡಿದರು. ಮುಂಬೈ ಜೈಲಿನಲ್ಲಿಯೇ ಕುಳಿತು ಬಿಷ್ಣೋಯ್ ಸಲ್ಮಾನ್ ಖಾನ್ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದ. ಆ ಸ್ಕೆಚ್ ನ ಮಾಹಿತಿ ಇದೀಗ ಪಂಜಾಬ್ ಪೊಲೀಸರಿಗೆ ಸಿಕ್ಕಿದೆ.
ಬಿಷ್ಣೋಯ್ ಗ್ಯಾಂಗ್ ನ ಸದಸ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತನ ವಿಚಾರಣೆ ನಡೆಸಿದ್ದಾರೆ. ಆಗ ಸ್ಕೆಚ್ ಎಲ್ಲಿ ಹಾಕಿದ್ದು, ಹೇಗೆ ಹಾಕಿದ್ದು ಎಂಬುದನ್ನು ಬಾಯಿ ಬಿಟ್ಟಿದ್ದಾನೆ. ಕಪಿಲ್ ಪಂಡಿತ್ ಎಂಬಾತ ವಿಚಾರ ಬಾಯ್ಬಿಟ್ಟಿದ್ದು, ಸಲ್ಮಾನ್ ಖಾನ್ ಅವರ ಮುಂಬೈನಲ್ಲಿರುವ ಫಾರ್ಮ್ ಹೌಸ್ ನಲ್ಲಿಯೇ ಕೊಲ್ಲಲು ಸ್ಕೆಚ್ ಹಾಕಿದ್ದರು ಎಂಬ ವಿಚಾರವನ್ನು ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.