Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ಅತೀ ದೊಡ್ಡ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ಬಿಲ್ಡ್ ಟೆಕ್-2023″ ಗೆ ಚಾಲನೆ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, (ಆ.04) : ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಉತ್ಪಾದಕರಿಂದ ನಗರದಲ್ಲಿ ಅತೀ ದೊಡ್ಡ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ಬಿಲ್ಡ್ ಟೆಕ್-2023″ ಗೆ ಚಾಲನೆ ನೀಡಲಾಯಿತು.

ನಗರದ ಬಿ.ಡಿ. ರಸ್ತೆಯ ಶ್ರೀ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಚಿತ್ರದುರ್ಗ ಜಿಲ್ಲಾ ಪ್ರಾಕ್ಟಿಸಿಂಗ್ ಆರ್ಕಿಟೆಕ್ಟ್ ಮತ್ತು ಸಿವಿಲ್ ಇಂಜಿನಿಯರ್ ಅಸೋಸಿಯೇಷನ್‌ (CD PACE) ಮತ್ತು ಯು.ಎಸ್. ಕಮ್ಯೂನಿಕೇಷನ್ಸ್‌ರವರ ಸಹಯೋಗದೊಂದಿಗೆ, ಬಿಲ್ಡ್ ಟೆಕ್-2023 ಬೃಹತ್‌ ವಸ್ತು ಪ್ರದರ್ಶನವನ್ನು ಆಗಸ್ಟ್ 04, 05 ಮತ್ತು 05 ರಂದು ಹಮ್ಮಿಕೊಳ್ಳಲಾಗಿದೆ. ಈ ಪ್ರದರ್ಶನ ಸಂಪೂರ್ಣ ಉಚಿತವಾಗಿರುತ್ತದೆ.

ವಸ್ತು ಪ್ರದರ್ಶನವನ್ನು ದೀಪ ಬೆಳಗುವುದರ ಮೂಲಕ ಆರ್ಕಿಟೆಕ್ಟ್ ಡಿ.ಕೆ. ಶ್ರೀಮತಿ ಸುಜಾತ ರವರು ಉದ್ಘಾಟಿಸಿದರು. ಈ ವೇಳೆ CD PACEನ ಅಧ್ಯಕ್ಷರಾದ ಎಂ.ವಿ. ದಿವಾಕರ್ ನಿಕಟಪೂರ್ವ ಅಧ್ಯಕ್ಷ ಸುರೇಶ್ ರಾಜ್ ಪಿ.ಎಲ್, ಎಂ.ಕೆ. ರವೀಂದ್ರ,  ಉಪಾಧ್ಯಕ್ಷ ರವಿಕುಮಾರ್ ಸಿ. ಮತ್ತು ಮಂಜಯ್ಯ ಜಿ.ಎಸ್., ಕಾರ್ಯದರ್ಶಿ ಶ್ರೀಕಾಂತ್ ಆರ್.ಡಿ., ಖಜಾಂಚಿ ಸುರೇಶ್ ಬಾಬು ಎ.ವಿ. ಜಂಟಿ ಕಾರ್ಯದರ್ಶಿ ಅಭಿಜಿತ್ ಸಿ., ಸಂಘಟನಾ ಕಾರ್ಯದರ್ಶಿ ಶ್ರೀ ಹರ್ಷ ಜೆ. ಸಾರ್ವಜನಿಕ ಸಂಪರ್ಕ ಅಧಿಕಾರಿ ಶಶಿಧರ ಗುಪ್ತಾ ಎನ್, ನಿರ್ದೇಶಕರಾದ ಮಹಾವೀರ್ ಹೆಚ್, ಸುರೇಶ, ಹರ್ಷಾ, ರವಿಕುಮಾರ್ ರೆಡ್ಡಿ, ಮಾಧವ್, ಫಣಿರಾಜ್, ರಮೇಶ್, ಶ್ರೀನಿವಾಸ್, ವೀರಭದ್ರಪ್ಪ, ಸುಧಾಕರ, ಹಲಾಧರ್ ಆರ್ ಹರೀಶ್, ಮೇಘ ನಾಗರಾಜ್, ರಾಮ್ಕೋ ಸಿಮೆಂಟ್ ಕಂಪನಿಯವರು ಸೇರಿದಂತೆ ಅಪಾರ ಸಂಖ್ಯೆಯ ಸಾರ್ವಜನಿಕರು ಹಾಜರಿದ್ದರು.

ಸದೃಢ, ಸುಂದರ ಹಾಗೂ ಸುಸಜ್ಜಿತ ಮನೆ ಪ್ರತಿಯೊಬ್ಬರ ಕನಸು. ಅಗತ್ಯ ಪರಿಕರಗಳಷ್ಟೇ ಅಲ್ಲ, ಆಕರ್ಷಕ ಮನೆ ನಿರ್ಮಾಣಕ್ಕೆ ಅವಶ್ಯವಿರುವ ವಸ್ತುಗಳು ಒಂದೇ ಕಡೆ ದೊರೆತು ಮನೆ ಅಲಂಕಾರಕ್ಕೆ ತಂತ್ರಜ್ಞಾನದ ಮಾರ್ಗದರ್ಶನ ಸಿಕ್ಕರೆ ಸುಂದರ ಮನೆ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ. ಈ ಬಗ್ಗೆ ಮಾಹಿತಿ ಒದಗಿಸಲು ಚಿತ್ರದುರ್ಗದ ನಾಗರೀಕರಿಗೆ ಚಿತ್ರದುರ್ಗ ಜಿಲ್ಲಾ ಪ್ರಾಕ್ಟಿಸಿಂಗ್ ಆರ್ಕಿಟೆಕ್ಟ್ ಮತ್ತು ಸಿವಿಲ್ ಇಂಜಿನಿಯರ‌್ ಅಸೋಸಿಯೇಷನ್‌ (CD PACE) ಮತ್ತು ಯು.ಎಸ್. ಕಮ್ಯೂನಿಕೇಷನ್ಸ್‌ರವರು ರಾಮ್ಕೋ ಸಿಮೆಂಟ್ ಪ್ರಾಯೋಜಕತ್ವದಲ್ಲಿ ಬಿಲ್ಡ್ ಟೆಕ್-2023 ಬೃಹತ್‌ ವಸ್ತು ಪ್ರದರ್ಶನವನ್ನು ಆಗಸ್ಟ್ 04, 05 ಮತ್ತು 05 ರಂದು ಏರ್ಪಡಿಸುವ ಮೂಲಕ ಚಿತ್ರದುರ್ಗ ಸೇರಿದಂತೆ ಮಧ್ಯ ಕರ್ನಾಟಕದ ಜನತೆಗೆ ಒಂದು ಸುವರ್ಣ ಅವಕಾಶವನ್ನು ಒದಗಿಸಿದ್ದಾರೆ.

ಈ ವಸ್ತು ಪ್ರದರ್ಶನದಲ್ಲಿ ಕಟ್ಟಡ ಸಾಮಗ್ರಿಗಳು, ಇಂಟಿರಿಯರ್, ಎಕ್ಸ್‌ಟಿರಿಯರ್, ಫರ್ನಿಚರ್, ಹೋಮ್ ಲೋನ್ಸ್ ಮತ್ತು ಗೃಹಾಲಂಕಾರ ವಸ್ತುಗಳ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಉತ್ಪಾದಕರಿಂದ ಜನತೆಯನ್ನು ಆಕರ್ಷಿಸಲಿದೆ.

ಮನೆ ಒಳಗೆ, ಹೊರಗಡೆ ಅಂದವಾಗಿ ಕಾಣಬೇಕು.ಬರೀ ತಂತ್ರಜ್ಞಾನವಿದ್ದರೆ ಸಾಲದು ಆಧುನಿಕ ತಂತ್ರಜ್ಞಾನ ಒಳಗೊಂಡ ಮನೆ ಭಿನ್ನ ಹಾಗೂ ಹೊಸತನದಿಂದ ಕೂಡಿರಬೇಕು. ಬೃಹತ್ ವಸ್ತು ಪ್ರದರ್ಶನದಲ್ಲಿ ಇದೆಲ್ಲವುದರ ಬಗ್ಗೆ ಮಾಹಿತಿ ಸಿಗುತ್ತದೆ. ಕಟ್ಟಡ ಹಾಗೂ ಗೃಹಾಲಂಕಾರ ಸಾಮಗ್ರಿ, ಸಿಮೆಂಟ್, ಗಾನೈಟ್, ಎಲೆಕ್ಟ್ರಿಕಲ್, ಫಿಟ್ಟಿಂಗ್, ಕಿಟಕಿ, ಗ್ಲಾಸ್, ಸೋಲಾರ್, ಪೀಠೋಪಕರಣಗಳು, ಮಾಡ್ಯೂಲ‌ರ್ ಕಿಚನ್, ಗೃಹ ನಿರ್ಮಾಣ ಸಾಲ ಸೌಲಭ್ಯಗಳು ಮುಂತಾದುವುಗಳು ವಸ್ತು ಪ್ರದರ್ಶನದಲ್ಲಿ ಲಭ್ಯವಿದೆ. ಕಟ್ಟಡದ ಸಧೃಡ ನಿರ್ಮಾಣಕ್ಕೆ ಹಾಗೂ ದೀರ್ಘ ಬಾಳಿಕೆಗೆ ಸಿಮೆಂಟ್ ಎಷ್ಟು ಮುಖ್ಯವಿದೆಯೋ ಹಾಗೆಯೇ ಕಟ್ಟಡದ ಒಳಗೆ ಹಾಗೂ ಹೊರಗಿನ ಅಂದಕ್ಕೆ ಗೃಹಾಲಂಕಾರ ಸಾಮಗ್ರಿಗಳು ಅಷ್ಟೇ ಅನಿವಾರ್ಯ. ಒಳಗೆ ಹೊರಗೆ ಗೃಹಾಲಂಕಾರ ಹೇಗಿರಬೇಕು? ಯಾವ ವಿನ್ಯಾಸ ಇರಬೇಕು, ಆಕಾರ, ಅಳತೆ ಇತ್ಯಾದಿ ವಸ್ತುಗಳ ಬಗ್ಗೆ ಮಾರ್ಗದರ್ಶನ ಸಿಗುತ್ತದೆ. ಒಮ್ಮೆ ಈ ಪ್ರದರ್ಶನ ವೀಕ್ಷಿಸಿದರೆ ಸಾಕು ಕನಸಿನ ಮನೆ ನಿರ್ಮಾಣಕ್ಕೆ ತಡವಾಗುವುದಿಲ್ಲ. ಇಷ್ಟೆಲ್ಲಾ ವಿಸ್ಮಯ ಈ ಪ್ರದರ್ಶನದಲ್ಲಿ ಗ್ರಾಹಕರಿಗೆ ಮಾಹಿತಿ ಸೊಗಲಿದೆ.

ಚಿತ್ರದುರ್ಗ ನಗರದಲ್ಲಿ ಸುಮಾರು 30ಕ್ಕೂ ಅಧಿಕ ವಿವಿಧ ಕಂಪನಿಗಳು ತಮ್ಮ ಹೊಸ ತಂತ್ರಜ್ಞಾನವನ್ನೊಳಗೊಂಡ ವಸ್ತುಗಳನ್ನು  ಪ್ರದರ್ಶಿಸಲಿದ್ದಾರೆ. ಈ ವಸ್ತು ಪ್ರದರ್ಶನವನ್ನು ವೀಕ್ಷಿಸಿ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೂರನೇ ಬಾರಿಗೆ ಸೋತ ನಿಖಿಲ್ ಕುಮಾರಸ್ವಾಮಿ…!

ಸುದ್ದಿಒನ್ | ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಜೊತೆಗೆ ದೇಶಾದ್ಯಂತ ವಿವಿಧ ರಾಜ್ಯಗಳ 48 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಿತು. ಕರ್ನಾಟಕದಲ್ಲಿ ಮೂರು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಂಡೂರು ಕ್ಷೇತ್ರದಿಂದ ಅನ್ನಪೂರ್ಣ

ಮಹಾರಾಷ್ಟ್ರದಲ್ಲಿ ಯಾರಾಗಲಿದ್ದಾರೆ ನೂತನ ಸಿಎಂ ?

ಸುದ್ದಿಒನ್ | ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗಾದರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಪ್ರತಿಕ್ರಿಯಿಸಿದ್ದಾರೆ. ದೇವೇಂದ್ರ ಫಡ್ನವೀಸ್

ಸಿಎಂ ಸಿದ್ದರಾಮಯ್ಯ ಅವರ ಪ್ರಚಾರದಿಂದ ಗೆಲುವು : ಬಿಜೆಪಿ ಸೋಲಿನ ಬಗ್ಗೆ ಜನಾರ್ದನ ರೆಡ್ಡಿ ಫಸ್ಟ್ ರಿಯಾಕ್ಷನ್

ಬಳ್ಳಾರಿ: ಇಂದು ಸಂಡೂರು ವಿಧಾನಸಭಾ ಕ್ಷೇತ್ರದಲ್ಲೂ ಫಲಿತಾಂಶ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪುರ್ಣ ತುಕರಾಂ ಗೆಲುವು ಸಾಧಿಸಿದ್ದಾರೆ. ಸಂಜೆ ವೇಳೆಗೆ ಅಧಿಕೃತ ಅನೌನ್ಸ್ ಆಗಲಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಾಗಿ ಜನಾರ್ದನ ರೆಡ್ಡಿ ಅವರು ಸಾಕಷ್ಟು

error: Content is protected !!