ಸುದ್ದಿಒನ್ ವೆಬ್ ಡೆಸ್ಕ್
ಮಾಸ್ಕೋ: ಉಕ್ರೇನ್ ಮೇಲೆ ಸಂಪೂರ್ಣ ಮೇಲುಗೈ ಸಾಧಿಸುವ ಉದ್ದೇಶದಿಂದ ರಷ್ಯಾದ ಅಧ್ಯಕ್ಷ ಪುಟಿನ್ ತಮ್ಮ ಕಾರ್ಯತಂತ್ರವನ್ನು ಚುರುಕುಗೊಳಿಸುತ್ತಿದ್ದಾರೆ. ಪುಟಿನ್ ಅವರೇ ಖುದ್ದಾಗಿ ತೆರಳಿ ಬುಧವಾರ ಯುದ್ದಭೂಮಿಗೆ ತೆರಳಿ ತಮ್ಮ ಸೈನಿಕರ ಯುದ್ಧ ಸನ್ನದ್ಧತೆಯನ್ನು ಪರಿಶೀಲಿಸಿದರು.
https://twitter.com/TpyxaNews/status/1585245545719042052?t=Qf1ibaAilO5MiVxr3fJFzA&s=19
ರಷ್ಯಾ ಸೇನೆಯ ಪರಮಾಣು ಪಡೆಗಳು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳೊಂದಿಗೆ ಬುಧವಾರ ಪರೀಕ್ಷೆ ನಡೆಸಿದವು. ರಷ್ಯಾದ ಪಡೆಗಳು ಉಕ್ರೇನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಉಡಾಯಿಸಲು ತಯಾರಿ ನಡೆಸುತ್ತಿವೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ರಷ್ಯಾದ ಈ ನಡೆ ಮಹತ್ವ ಪಡೆದಿವೆ.
ಒಂದು ವೇಳೆ ತಮ್ಮ ದೇಶದ ಮೇಲೆ ಪರಮಾಣು ದಾಳಿ ನಡೆಸಿದರೆ ಅದಕ್ಕೆ ಬಲಿಷ್ಠವಾಗಿ ಪ್ರತ್ಯುತ್ತರ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಹೇಳಿದ್ದಾರೆ.
ಇತ್ತೀಚಿಗೆ, ಉತ್ತರ ಪ್ಲೆಸೆಟ್ಸ್ಕ್ ಉಡಾವಣಾ ಸ್ಥಳದಿಂದ ಖಂಡಾಂತರ ಕ್ಷಿಪಣಿಯನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಯಿತು.
ಎಲ್ಲಾ ಕ್ಷಿಪಣಿಗಳು ತಮ್ಮ ಉದ್ದೇಶಿತ ಗುರಿಗಳನ್ನು ತಲುಪಿವೆ ಎಂದು ರಷ್ಯಾ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಮತ್ತೊಂದೆಡೆ, ನ್ಯಾಟೋ ಒಕ್ಕೂಟವು ಕೂಡಾ ಉತ್ತರ ಯುರೋಪ್ ಪ್ರದೇಶದಲ್ಲಿ ವಾರ್ಷಿಕ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ಮತ್ತು ಅಕ್ಟೋಬರ್ 30 ರವರೆಗೆ ನಡೆಯಲಿದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ವಿಮಾನಗಳು ಮತ್ತು ಅಮೆರಿಕದ ದೀರ್ಘ-ಶ್ರೇಣಿಯ ಬಿ-52 ಬಾಂಬರ್‌ಗಳು ಸಹ ಇದರಲ್ಲಿ ಭಾಗವಹಿಸುತ್ತಿವೆ. ಪರಿಸ್ಥಿತಿ ಕೈ ಮೀರಿದರೆ ಪರಮಾಣು ಅಸ್ತ್ರ ಪ್ರಯೋಗಿಸಲು ಹಿಂಜರಿಯುವುದಿಲ್ಲ ಎಂದು ಪುಟಿನ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
40 ಹಳ್ಳಿಗಳ ಮೇಲೆ ರಷ್ಯಾದ ದಾಳಿ
ಕೀವ್ : ಉಕ್ರೇನ್ ಮೇಲೆ ರಷ್ಯಾದ ದಾಳಿ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಉಕ್ರೇನ್‌ನ 40 ಹಳ್ಳಿಗಳ ಮೇಲೆ ದಾಳಿ ಮಾಡಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ಭೀತಿಯಿಂದ ಜನತೆ ಭಯಭೀತರಾಗಿ ರಾತ್ರಿ ಕಳೆಯುವಂತಾಗಿದೆ ಎಂದರು. ರಷ್ಯಾದ ಸೈನ್ಯವು ಐದು ರಾಕೆಟ್‌ಗಳು, 30 ವಾಯುದಾಳಿಗಳು ಮತ್ತು 100 ಕ್ಕೂ ಹೆಚ್ಚು ಬಹು-ಉಡಾವಣಾ ರಾಕೆಟ್ ಸಿಸ್ಟಮ್ ದಾಳಿ ಮಾಡಿದೆ ಎಂದು ಉಕ್ರೇನ್ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಹೇಳಿದ್ದಾರೆ.