ಮುಂಬಯಿ : ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿಯ ಕುರಿತು ಅವರ ವಕ್ತಾರರು ಪ್ರಮುಖ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಅವರು ಕರೋನಾದಿಂದ ಬಳಲುತ್ತಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ದಿನಗಳಿಂದ ಲತಾ ಮಂಗೇಶ್ಕರ್ ಅವರ ಆರೋಗ್ಯ ಹದಗೆಟ್ಟಿದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಅವರ ವಕ್ತಾರರು ನಿರಾಕರಿಸಿದ್ದಾರೆ.

#LataMangeshkar health update: She's showing signs of improvement, still in ICUhttps://t.co/h5TekiPHOp
— India Today Showbiz (@Showbiz_IT) January 22, 2022
ಲತಾ ಮಂಗೇಶ್ಕರ್ ಇನ್ನೂ ಐಸಿಯುನಲ್ಲಿದ್ದಾರೆ. ಡಾ. ಪ್ರತೀತ್ ಸಂದಾನಿ ನೇತೃತ್ವದ ವೈದ್ಯರ ತಂಡ ಆಕೆಗೆ ಚಿಕಿತ್ಸೆ ನೀಡುತ್ತಿದೆ. ದಯವಿಟ್ಟು ವದಂತಿಗಳನ್ನು ಹಬ್ಬಿಸಬೇಡಿ. ಲತಾ ಮಂಗೇಶ್ಕರ್ ಅವರ ಕುಟುಂಬ ಮತ್ತು ವೈದ್ಯರಿಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಸುದ್ದಿ ಹಬ್ಬಿಸಬಾರದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದ್ದು, ಸುಳ್ಳು ಸುದ್ದಿ ಹಬ್ಬಿಸದಂತೆ ಮನವಿ ಮಾಡಿದ್ದಾರೆ.

