ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಗೀತಾ ಶಿವರಾಜ್ ಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ನ ಮೊದಲ ಪಟ್ಟಿ ರಿಲೀಸ್ ಆಗಿದ್ದು, ಅದರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಗೀತಾ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಹಿಂದೆ ಯಡಿಯೂರಪ್ಪ ಅವರ ವಿರುದ್ಧ ನಿಂತಿದ್ದರು. ಬಹುಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಇದೀಗ ಈ ಬಾರಿಯೂ ಟಿಕೆಟ್ ಸಿಕ್ಕಿದ್ದು, ಬಿವೈ ರಾಘವೇಂದ್ರ ಅವರ ವಿರುದ್ಧ ಸ್ಪರ್ಧೆ ಮಾಡುತ್ತಿದ್ದಾರೆ.
ಪತ್ನಿಯ ಸ್ಪರ್ಧೆ ಬಗ್ಗೆ ಇಂದು ಶಿವಣ್ಣ ಮಾತನಾಡಿದ್ದು, ಕಳೆದ ಹತ್ತು ವರ್ಷದ ಹಿಂದೆ ಸ್ಪರ್ಧೆ ಮಾಡಿದ್ದರು ಎನ್ನುವುದಕ್ಕಿಂತ ಅನುಭವ ಬಹಳ ಮುಖ್ಯ. ಸೆಲ್ಫ್ ಕಾನ್ಫಿಡೆನ್ಸ್ ಬಹಳ ಮುಖ್ಯವಾಗುತ್ತದೆ. ಗೀತಾ ಅವರ ಪತಿಯಾಗಿ ಅವರಿಗೆ ಬೆಂಬಲವಾಗಿರಬೇಕಾದದ್ದು ನಮ್ಮ ಕರ್ತವ್ಯ. ನಾವೂ ಹೇಳುತ್ತೇವೆ ಹೆಣ್ಣು ಎತ್ತರವಾಗಿ ಬೆಳೆಯಬೇಕು ಅಂತ. ಎಲ್ಲಾ ರಂಗದಲ್ಲೂ ಹೆಣ್ಣು ಮಕ್ಕಳಿದ್ದಾರೆ. ನಮಗೆ ಜನ್ಮ ಕೊಡುವುದೇ ತಾಯಿ. ಅವರಿಗೆ ಗೌರವ ಕೊಡಬೇಕು. ಅವರ ಆಸೆಯನ್ನು ಈಡೇರಿಸಬೇಕಾಗಿರುವುದು ನಮ್ಮ ಕರ್ತವ್ಯ.
ನಾನು ಗೀತಾರ ಆಸೆ ಈಡೇರಿಸುತ್ತಾ, ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ. ನಾನು ಗೀತಾಗೆ ಹೇಳುವುದು ಒಂದೇ ಆತ್ಮವಿಶ್ವಾಸ ಇರಲಿ. ಆದರೆ ಅತಿಯಾದ ಆತ್ಮವಿಶ್ವಾಸ ಬೇಡ ಎಂದು. ಹತ್ತು ವರ್ಷ ಎಂಬುದು ಇಲ್ಲಿ ಗಣನೆಗೆ ಬರುವುದಿಲ್ಲ. ಅನುಭವ ಅಷ್ಟೇ ಇಲ್ಲಿ ವರ್ಕೌಟ್ ಆಗುವುದು. ಕಾಂಗ್ರೆಸ್ ನಿಂದ ಗೀತಾ ಶಿವರಾಜ್ ಕುಮಾರ್ ನಿಲ್ಲುತ್ತಿದ್ದಾರೆ. ಬಿಜೆಪಿಯಿಂದ ರಾಘವೇಂದ್ರ ಎನ್ನುತ್ತಿದ್ದಾರೆ. ಒಬ್ಬರಿಗೆ ಒಬ್ಬ ರು ಎದುರು ನಿಲ್ಲಲೇಬೇಕು ಅಲ್ವಾ. ಅದರಲ್ಲಿ ಏನಿದೆ ವಿಶೇಷತೆ. ನಾನು ಕೂಡ 100% ಜೊತೆಗೆ ಇರುತ್ತೇನೆ. ಪತಿಯಾಗಿ ಅದು ನನ್ನ ಕರ್ತವ್ಯ. ಸಿನಿಮಾ ಹಾಗೂ ಪತ್ನಿಗೆ ಬೆಂಬಲ ಎರಡನ್ನು ಸಮಾನಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ.