ಬೆಂಗಳೂರು: ವಿಧಾನಪರಿಷತ್ ಏಳು ಸದಸ್ಯರ ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ ಜೂನ್ 3 ರಂದು ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನವಾಗಿದೆ. ಆದರೆ ಈ ಮಧ್ಯೆ ಟಿಕೆಟ್ ವಿಚಾರದಲ್ಲಿ ಹಲವರಿಗೆ ಬೇಸರವಾಗಿದೆ.
ಈ ಬಾರಿ ಮಾಜಿ ಸಿಎಂ ಯಡಿಯೂರಪ್ಪ ಅವರ ಮಗ ಬಿ ವೈ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಬೆಂಬಲಿಗರು ಖುಷಿ ಪಟ್ಟಿದ್ದರು. ಆದರೆ ಕಡೆ ಗಳಿಗೆಯಲ್ಲಿ ಈ ನಿರ್ಧಾರ ಬದಲಾಗಿದೆ. ಬಿ ವೈ ವಿಜಯೇಂದ್ರ ಅವರಿಗೆ ಟಿಕೆಟ್ ಮಿಸ್ ಆಗಿದೆ. ಇದು ಬೆಂಬಲಿಗರನ್ನು ಕೆರಳಿಸಿದೆ.
ಒಟ್ಟು ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅದರಲ್ಲಿ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿಗೆ ನಾಲ್ಕು, ಕಾಂಗ್ರೆಸ್ 2 ಮತ್ತು ಜೆಡಿಎಸ್ ಗೆ 1 ಸ್ಥಾನವನ್ನು ನೀಡಿದೆ. ಬಿಜೆಪಿಯಿಂದ ಈಗಾಗಲೇ ಟಿಕೆಟ್ ಘೋಷಣೆ ಮಾಡಿದ್ದು, ಈಗಾಗಲೇ ಸದಸ್ಯರಾಗಿದ್ದ ಲಕ್ಷ್ಮಣ ಸವದಿಗೆ ಮತ್ತೊಮ್ಮೆ ಟಿಕೆಟ್ ಒಲಿದಿದೆ. ಅದರ ಜೊತೆಗೆ ಛಲವಾದಿ ನಾರಾಯಣಸ್ವಾಮಿ, ಹೇಮಲತಾ ನಾಯಕ್, ಕೇಶವಪ್ರಸಾದ್ ಗೆ ಟಿಕೆಟ್ ಸಿಕ್ಕಿದೆ.