ರಾಯಚೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಘಟನೆಯಂತೆ ಹುಬ್ಬಳ್ಳಿಯಲ್ಲೂ ಮಾಡುವ ಪ್ರಯತ್ನದಲ್ಲಿದ್ದರು. ನಾನು ಅವತ್ತು ಹೊಸಪೇಟೆಯಲ್ಲಿದ್ದೆ. ನೆಕ್ಸ್ಟ್ ಡೇ ನಾನು ಅಲ್ಲಿಗೆ ಹೋಗಿ ವಿಚಾರಿಸಿದೆ. ಈ ಮಾಹಿತಿಯನ್ನು ಪೊಲೀಸರು ನೀಡಿದ್ದರು. ಇದನ್ನು ನಾನು ಸಂಬಂಧಿಸಿದ ಹಿರಿಯ ಪೊಲೀಸ್ ಅಧಿಕಾರಿಗೆ ತಿಳಿಸಿದ್ದೇನೆ. ಇದನ್ನು ಅದೇ ಮಾದರಿಯಲ್ಲಿ ಮಾಡಬೇಕು ಎಂಬ ಪ್ರಯತ್ನ ನಡೀತಾ ಇತ್ತು. ಮುಂದೆ ಈ ರೀತಿಯ ಘಟನಾವಳಿಗಳು ನಡೆಯದ ರೀತಿಯಲ್ಲಿ ನಾವೂ ಕ್ರಮ ಗೈಗೊಳ್ಳುತ್ತೇವೆ. ಪೊಲೀಸರು ಸೇರಿದಂತೆ ಸಂಬಂಧ ಪಟ್ಟ ಇಲಾಖೆ ಈ ಕೇಸ್ ಯಾರಿಗೆ ವಹಿಸಬೇಕೆಂಬುದನ್ನು ತೀರ್ಮಾನಿಸುತ್ತೆ ಎಂದಿದ್ದಾರೆ.
ಇನ್ನು ಇದೇ ವೇಳೆ ಕಾಂಗ್ರೆಸ್ ಬಗ್ಗೆಯೂ ಮಾತನಾಡಿದ್ದು, ಗಲಭೆಯಲ್ಲಿ ಯಾರಿಗೆ ಲಾಭ ಆಗುತ್ತೆ, ಯಾರಿಗೆ ನಷ್ಟ ಆಗುತ್ತೆ ಅನ್ನೋದನ್ನು ಯಾರು ಕುಯಡ ಮಾತನಾಡಬಾರದು. ನಾವೂ ಗಲಭೆಯನ್ನು ಎಬ್ಬಿಸಿಲ್ಲ. ಗಲಭೆ ಎಬ್ಬಿಸಿದವರು ಸಮಾಜ ವಿದೃಷಿ ಸದಕ್ತಿಗಳು, ಕೆಲವು ಮತಾಂಧ ಮುಸಲ್ಮಾನರು ಮಾಡಿದ್ದಾರೆ. ಹೀಗಾಗಿ ಅವರನ್ನು ಬಂಧಿಸಲಾಗಿದೆ. ಬಂಧಿಸಿದ ಮೇಲೆ ನೀವ್ಯಾಕೆ ಅವರ ಸಪೋರ್ಟ್ ಗೆ ಹೋಗುತ್ತೀರಿ. ಸಪೋರ್ಟ್ ಗೆ ಹೋದ ಮೇಲೆ ಉಳಿದ ಹಿಂದುಗಳು ನಿಮ್ಮ ವಿರುದ್ಧವಾಗುತ್ತಾರೆ ಎಂಬ ಭಯವಿರಬಹುದು. ನಾನು ಇದನ್ನು ಹೇಳುತ್ತಿಲ್ಲ, ನೀವು ಹೇಳುವ ಆಧಾರದ ಮೇಲೆ. ನಾನು ಯಾರ ಮೇಲೂ ಲಾಭ ನಷ್ಟದ ಆರೋಪ ಮಾಡುತ್ತಿಲ್ಲ.
ಸಮಾಜದಲ್ಲಿ ಶಾಂತಿ ಇರಬೇಕು, ನೆಮ್ಮದಿ ಇರಬೇಕು. ಹುಬ್ವಳ್ಳಿ ಧಾರಾವಾಡದ ಮಟ್ಟಿಗದ ಹೇಳಬೇಕು ಅಂದರೆ ಕಳೆದ 20 ವರ್ಷದಿಂದ ಶಾಂತವಾಗಿದೆ. ಮೊದಲು ಸೆನ್ಸಿಟೀವ್ ಇತ್ತು. ಈಗ ಅತ್ಯಂತ ಶಾಂತವಾಗಿದೆ. ಈ ಸಂದರ್ಭದಲ್ಲಿ ನಾನು ಒಂದು ಮಾತನ್ನು ಹೆರಳುತ್ತೇನೆ ಲಾಭ ನಷ್ಟದ ಲೆಕ್ಕಚಾರ ಹಾಕುವುದನ್ನು ಕಾಂಗ್ರೆಸ್ ಪಾರ್ಟಿ ಬಂದ್ ಮಾಡಬೇಕು. ನಿಮ್ಮ ತುಷ್ಟಿಕರಣದ ಪಾಲಿಯಿಂದ ಇವತ್ತು ದೇಶ, ರಾಜ್ಯ ಈ ಸ್ಥಿತಿಯಲ್ಲಿದೆ. ಇನ್ನಾದರೂ ಇದನ್ನು ಬಿಡಬೇಕು ಎಂದಿದ್ದಾರೆ.