ಲಂಕೆ’ಗೀಗ ಸನಿಹವಾಗ್ತಿದೆ 75ದಿನದ ಯಶಸ್ವಿ ಪ್ರದರ್ಶನದ ಸಂಭ್ರಮ

1 Min Read

 

ಬೆಂಗಳೂರು : ಗಣೇಶ ಹಬ್ಬವನ್ನ ಸಂಭ್ರಮಿಸಲು ಚಿತ್ರಪ್ರೇಮಿಗಳಿಗಾಗಿ  ರಿಲೀಸ್ ಮಾಡಲಾದ ಚಿತ್ರವೇ ಯೋಗಿಯ ಲಂಕೆ. ರಾಮ್ ಪ್ರಸಾದ್ ನಿರ್ದೇಶನದ ಈ ನೈಜ ಕಥೆಯಾಧಾರಿತ , ಲೈಂಗಿಕ ಕಾರ್ಯಕರ್ತೆಯರ ಸಮುದಾಯದಿಂದ ಬಂದ ಹುಡುಗನ ಸುತ್ತ ಕಥೆ ಹೆಣೆಯಲಾದ ಈ ಸಿನಿಮಾದ ಮೂಲಕ ಯೋಗಿ ಬಹಳ ದಿನಗಳ ಬಳಿಕ ಗ್ರ್ಯಾಂಡ್ ಕಂ ಬ್ಯಾಕ್ ಮಾಡಿದ್ರು. ಯೋಗಿಗೆ ಜತೆಯಾಗಿ ಕೃಷಿ ತಾಪಂಡ ಕೂಡ ಮಿಂಚಿದ್ದಾರೆ.

ಔಟ್ ಅಂಡ್ ಔಟ್ ಕಮರ್ಶಿಯಲ್ ಚಿತ್ರವಾಗಿರೋ ‘ಲಂಕೆ’ ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದಂತೆಯೇ ಬಿಡುಗಡೆಯ ನಂತರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೌದು, ಚಿತ್ರದ ಕಥೆ, ಮೇಕಿಂಗ್, ಹಾಡುಗಳು, ನಾಯಕನ ಮಾಸ್ ಖದರ್ , ಕಮರ್ಶಿಯಲ್ ಎಳೆ  ಸೇರಿದಂತೆ  ಎಲ್ಲವನ್ನೂ  ಚಿತ್ರರಸಿಕರು ಒಪ್ಪಿ ಅಪ್ಪಿದ್ದಾಗಿದೆ. ಇದರ ಫಲವಾಗಿ ಲಂಕೆ 50 ನೇ ದಿನದ ಯಶಸ್ವಿ ಪ್ರದರ್ಶನ ಕಂಡು ಈಗ 75 ನೇ ದಿನದ ಸಂಭ್ರಮದತ್ತ ಮುಖ ಮಾಡಿ ಓಡುತ್ತಿದೆ. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನವನ್ನು ಕಾಣೋದ್ರ ಜೊತೆಗೆ ಅತ್ಯುತ್ತಮ ಪ್ರತಿಕ್ರಿಯೆ ಗಳು ಹರಿದು ಬರ್ತಿವೆ.

ತಾರಾಗಣದಲ್ಲಿ ಗಾಯತ್ರಿ ಜೈರಾಮ್, ಕಾವ್ಯ ಶೆಟ್ಟಿ, ಸಂಚಾರಿ ವಿಜಯ್, ಎಸ್ತರ್ ನೊರೊನ್ಹಾ, ಶರತ್ ಲೋಹಿತಾಶ್ವ, ಶೋಭರಾಜ್, ಸುಚೇಂದ್ರ ಪ್ರಸಾದ್, ಡ್ಯಾನಿ ಕುಟ್ಟಪ್ಪ ಒಳಗೊಂಡಂತೆ ಸ್ಟಾರ್ ಕಲಾವಿದರ ಬಳಗವಿದೆ.ಚಿತ್ರದ ಹಾಡುಗಳು ಸಹ ಮೋಡಿಮಾಡುವಂತಿದ್ದು,  ಕಾರ್ತಿಕ್‌ ಶರ್ಮ ಹಿನ್ನೆಲೆ ಸಂಗೀತ ನೀಡಿದ್ದಾರೆ. ಹಿರಿಯ ಛಾಯಾಗ್ರಾಹಕ ರಮೇಶ್‌ ಬಾಬು ಈ ಸಿನಿಮಾಗೆ ಅದ್ಭುತ ಕ್ಯಾಮೆರಾ ವರ್ಕ್ ಮಾಡಿದ್ದು, ನಿರ್ದೇಶಕರ ಜತೆ ಸೇರಿ ಗುರುರಾಜ ದೇಸಾಯಿ ಸಂಭಾಷಣೆ, ಪಟೇಲ್‌ ಶ್ರೀನಿವಾಸ್‌ ನಾಗವಾರ ಮತ್ತು ಸುರೇಖಾ ರಾಮ್‌ಪ್ರಸಾದ್‌ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಕೊರೋನಾ ದಿಂದ ಕಂಗೆಟ್ಟಿದ್ದ ಜನತೆ ಚಿತ್ರ ಮಂದಿರಗಳತ್ತ ಮುಖ ಮಾಡ್ತಾರೋ ಇಲ್ಲವೋ ಅಂದುಕೊಂಡಿದ್ದ ಲಂಕೆ ತಂಡಕ್ಕೆ ಸಿನೆಮಾ ಯಶಸ್ಸು ಕಾಣುತ್ತಿರೋದು ಖುಷಿ ತಂದಿದ್ದು ಸಧ್ಯದಲ್ಲೇ 75 ನೇ ದಿನದ ಸಂಭ್ರಮವನ್ನೂ ತಲುಪಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *