ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಕಿಡ್ನಿ ಕಸಿ ಮಾಡಲೇಬೇಕಾದಂತ ಸಂದರ್ಭದಲ್ಲಿ ಅವರಿಗೆ ಮ್ಯಾಚ್ ಆಗುವಂತ ಕಿಡ್ನಿ ವ್ಯವಸ್ಥೆ ಆಗಿರಲಿಲ್ಲ. ಮಗಳೇ ಕಿಡ್ನಿಯನ್ನು ನೀಡುವುದಾಗಿ ತಿಳಿಸಿದ್ದರು. ಇದೀಗ ಕಿಡ್ನಿ ಕಸಿ ಚಿಕಿತ್ಸೆ ಯಶಸ್ವಿಯಾಗಿದೆ. ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಆರೋಗ್ಯದಿಂದ ಇದ್ದಾರೆ.
ನೀಡಿದ ಮಾತಿನಂತೆ ರೋಹಿಣಿ ಆಚಾರ್ಯವ ಅವರು ಕಿಡ್ನಿ ದಾನ ಮಾಡಿದ್ದಾರೆ. ಬಳಿಕ ಕಿಡ್ನಿ ಕಸಿ ಚಿಕಿತ್ಸೆಯೂ ಯಶಸ್ವಿಯಾಗಿದೆ. ಈ ಸಂಬಂಧ ರೋಹಿಣಿ ಆಚಾರ್ಯ ಟ್ವೀಟ್ ಮಾಡಿದ್ದು, ತಂದೆಯ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬೆಡ್ ಮೇಲೆ ಮಲಗಿ ವಿಕ್ಟರಿ ಸಿಂಬಲ್ ತೋರಿಸಿದ್ದಾರೆ. ನಮ್ಮ ತಂದೆ ಮತ್ತೆ ಜೀವನ ಆರಂಭಿಸಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ರೋಹಿಣಿ ಆಚಾರ್ಯ ಅವರ ಈ ಕೆಲಸಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಂದೆಯ ಇಳಿ ವಯಸ್ಸಿನಲ್ಲೂ ಕಿಡ್ನಿ ದಾನ ಮಾಡಿರುವುದಕ್ಕೆ ಎಲ್ಲರೂ ಶುಭ ಹಾರೈಕೆಗಳನ್ನು ನೀಡಿದ್ದಾರೆ. ತಂದೆ ಮತ್ತು ಮಗಳು ಇಬ್ಬರಿಗೂ ಒಳ್ಳೆಯದಾಗಲಿ, ದೇವರು ಆರೋಗ್ಯ ನೀಡಲಿ ಏಂದು ಹಾರೈಸಿದ್ದಾರೆ.