ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅದರಲ್ಲೂ ಎರಡು ಕಿಡ್ನಿಗಳು ಫೇಲ್ ಆಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಇದೀಗ ತಂದೆಯನ್ನು ಉಳಿಸಿಕೊಳ್ಳುವುದಕ್ಕೆ ಮಗಳೇ ಮುಂದೆ ಬಂದಿದ್ದಾರೆ. ತಂದೆಗೆ ತಮ್ಮ ಕಿಡ್ನಿ ಕೊಟ್ಟು ಕಾಪಾಡಲು ಸಿದ್ಧವಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದಾನು ಲಾಲು ಪ್ರಸಾದ್ ಯಾದವ್ ಹಾಸಿಗೆ ಹಿಡಿದಿದ್ದಾರೆ. ಈಗ ಸ್ಥಿತಿ ಗಂಭೀರವಾಗಿದ್ದು, ಕಿಡ್ನಿ ನೀಡಬೇಕಾದ ಅನಿವಾರ್ಯತೆ ಇದೆ. ಮಗಳೇ ಮುಂದೆ ಬಂದು ಕಿಡ್ನಿಯನ್ನು ನೀಡುತ್ತೇನೆ ಎಂದು ಹೇಳಿದಾಗ ಲಾಲೂ ಪ್ರಸಾದ್ ಯಾದವ್ ಒಪ್ಪಿಲ್ಲ. ಆದ್ರೆ ಮನೆಯವರೆಲ್ಲ ಸಲಹೆಯಿಂದ, ಬಲವಂತದಿಂದ ನಂತರ ಒಪ್ಪಿಗೆ ಸೂಚಿಸಿದ್ದಾರೆ.
ಇದೇ ತಿಂಗಳ 20-24 ರ ನಡುವೆ ಲಾಲು ಪ್ರಸಾದ್ ಯಾದವ್ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಗೆ ಸಿಂಗಾಪುರಕ್ಕೆ ತೆರಳಲಿದ್ದಾರೆ. ತಂದೆಗೆ ಕಿಡ್ನಿ ದಾನ ಮಾಡಲು ಮಗಳು ಈಗಾಗಲೇ ವೈದ್ಯರ ಸಲಹೆಯನ್ನು ಪಡೆದುಕೊಂಡಿದ್ದಾರಂತೆ. ಅದರಂತೆ ಸಿಂಗಾಪುರದಲ್ಲಿ ಮಗಳಿಂದ ಒಂದು ಕಿಡ್ನಿ ಪಡೆದು ಲಾಲೂ ಪ್ರಸಾದ್ ಯಾದವ್ ಗೆ ಜೋಡಿಸಲಿದ್ದಾರಂತೆ.