ಬೆಳಗಾವಿ: ಸಂತೀಷ್ ಸಾವಿನ ಬಗ್ಗೆ ಮಾತನಾಡಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ನಮ್ಮೆಲ್ಲರಿಗೂ ಒಂದೇ ಕಾಳಜಿ ನಾವೂ ಜಾತ್ಯಾತೀತವಾಗಿ ಒಂದೇ ಕೇಳುತ್ತಾ ಇರೋದು. ಅವನು ಬಿಜೆಪಿ ಕಾರ್ಯಕರ್ತ ರೀ.. ಅವನು ಸತ್ತಾಗ ಅವನ ಹೆಗಲಲ್ಲಿ ಏನು ಹಾಕೊಂಡಿದ್ದ ಅನ್ನೋದನ್ನು ನೋಡೊದ್ದೀರಾ..? ಅವನ ದೇಹದ ಮೇಲೆ ಕೇಸರಿ ಶಾಲು ಹಾಕೊಂಡಿದ್ದ. ಆತ ಬಿಜೆಪಿಯ ಕಟ್ಟರ್ ಅಭಿಮಾನಿ. ನಿಮ್ಗೆ ಸ್ವಲ್ಪವೂ ಮನಸ್ಸು ಕರಗಲಿಲ್ವಾ. ಬಿಡಿ ಈ ಹೊಲಸು ರಾಜಕಾರಣವನ್ನು ಬದಿಗಿಡಿ. ಅವನ ಕುಟುಂಬಕ್ಕೆ ಪರಿಹಾರ ಕೊಡಿ. ಈ ಸಂದರ್ಭದಲ್ಲಿ ನಾನು ಕೇಳೋದು ಇಷ್ಟೆ.
ಹೆಣ್ಣು ಮಕ್ಕಳಿಗೆ ತೊಂದರೆ ಆಗುತ್ತೆ. ಹೆಣ್ಣು ಮಕ್ಕಳಿಗೆ ತೋಮದರೆಯಾಗಬಾರದು ಎಂಬುದೆ ನಮ್ಮ ಉದ್ದೇಶ ಕೂಡ. ಈ ಸಂದರ್ಭದಲ್ಲಿ ರಾಜಕಾರಣ ಬೇಡ. ಹೆಣ್ಣು ಮಕ್ಕಳು ಎರಡು ದಿನದಿಂದ ಉಪವಾಸ ಇದ್ದಾರೆ. ನಾವೂ ಘೋಷಣೆ ಸಿಗುವುದು, ಪರಿಹಾರ ಸಿಗುವವರೆಗೂ ಹೋರಾಡುತ್ತೀವಿ. ಮಾಧ್ಯಮದವರು ಕೂಡ ಇದರಲ್ಲಕ ಸಹಕಾರ ಮಾಡಬೇಕು. ಆತನ ಕುಟುಂಬಕ್ಕೆ ಪರಿಹಾರ ತಂದುಕೊಡಲು ನಿಮ್ಮ ಸಹಾಯವೂ ಬೇಕು ಎಂದಿದ್ದಾರೆ.
ನಿನ್ನೆ ಪೋಸ್ಟ್ ಮಾರ್ಟಮ್ ಮಾಡಿದ್ದಾರೆ. ಮೊಬೈಲ್ ನಲ್ಲೆಲ್ಲಾ ಸಾಕ್ಷಿ ಇದೆ ಅಂತ ಹೇಳಿದ್ದಾರೆ ನಂಗೆ. ಮೂರು ಜನರ ಮೇಲೆ ಕೇಸ್ ಆಗಿದೆ. ಆದರೆ ಯಾಕೆ ಇನ್ನು ಅರೆಸ್ಟ್ ಆಗಿಲ್ಲ. ಅವರನ್ನಹ ಅರೆಸ್ಟ್ ಮಾಡಲು ಬೇಕಾದ ಪ್ರೂಫ್ ಇದೆ. ಯಾಕೆ ಅದನ್ನು ತಿರುಚೋದಕ್ಕೆ ನಿಂತಿದ್ದೀರಾ..? ಸತ್ತ ಸಂತೋಷ್ ಅಂತು ಬರಲ್ಲ ಸಾಕ್ಷಿ ಹೇಳುವುದಿಲ್ಲ. ನಾನು ಆಗ್ರಹ ಮಾಡ್ತೀನಿ ಬರೀ ಯಡಿಯೂರಪ್ಪ ಸಾಹೇಬರಾಗಲಿ, ಮೋದಿಯವರಾಗಲಿ, ಬೊಮ್ಮಾಯಿಯವರಾಗಲಿ ಅವರನ್ನ ಮಂತ್ರುಗಿರಿಯಿಂದ ವಜಾ ಮಾಡೋದು ಅಷ್ಟೆ ಅಲ್ಲ, ಅವರನ್ನು ಅರೆಸ್ಟ್ ಮಾಡಬೇಕು, ಅವರಿಗೆ ಶಿಕ್ಷೆಯಾಗಬೇಕು. ಸಿಬಿಐ ವಿಚಾರಣೆಯಾಗಬೇಕು. ಆಗ ಸಂತೋಷ ಪಾಟೀಲ್ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದಿದ್ದಾರೆ.