ಲಿಂಖಿಪುರ ಕೇರಿ ಗ್ರಾಮದ ರೈತರ ಸಾವು ಪ್ರಕರಣ : ಮೋದಿ ವಿರುದ್ಧ ಮತ್ತೊಮ್ಮೆ ಹರಿಹಾಯ್ದ ಪ್ರಿಯಾಂಕ ಗಾಂಧಿ..!

ನವದೆಹಲಿ: ಲಿಂಕಿಪುರ ಕೇರಿ ಗ್ರಾಮದಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕೇಂದ್ರ ಸಚಿವರ ಬೆಂಗಾವಲು ಪಡೆ ವಾಹನಗಳಿದ್ದ ಸಾಲಿನಿಂದ ಮಹೇಂದ್ರ ಗಾಡಿಯೊಂದು ರೈತರ ಮೇಲೆ ನುಗ್ಗಿತ್ತು. ಇದರಿಂದ ರೈತರ ಸಾವಾಗಿತ್ತು. ಮಹೇಂದ್ರ ವಾಹನದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ಇದ್ದರು ಎನ್ನಲಾಗಿದೆ.

ಈ ಸಂಬಂಧ ಎಸ್ಐಟಿ ತಂಡ ತನಿಖೆ ನಡೆಸುತ್ತಿದೆ. ಪ್ರತಿಭಟನಾ ರೈತರ ಹತ್ಯೆಗೆ ಯೋಜಿತಾ ಸಂಚು ನಡೆದಿದೆ ಎಂದು ತಿಳಿಸಲಾಗಿದೆ ಎನ್ನಲಾಗಿದೆ. ಆದರೂ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನ ಸಂಪುಟದಿಂದ ಕೈಬಿಟ್ಟಿಲ್ಲ. ಅವರ ಪುತ್ರ ಆಶಿಶ್ ಮಿಶ್ರಾಗೆ ಶಿಕ್ಷೆ ವಿಧಿಸಿಲ್ಲ ಎಂಬ ಟೀಕೆಗಳು ಕೇಳಿ ಬರ್ತಿವೆ. ಇದೀಗ ಇದೆ ವಿಚಾರಕ್ಕೆ ಪ್ರಿಯಾಂಕ ಗಾಂಧಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

 

ನರೇಂದ್ರ ಮೋದಿ ಅವರೇ ಧರ್ಮನಿಷ್ಠೆಯ ಕನ್ನಡಕ ಮತ್ತು ಧಾರ್ಮಿಕ ಉಡುಪನ್ನು ಧರಿಸುವುದರಿಂದ ನೀವು ಒಬ್ಬ ಅಪರಾಧಿಯನ್ನು ರಕ್ಷಿಸುತ್ತಿದ್ದೀರಾ ಎಂಬ ಸತ್ಯ ಎಂದಿಗೂ ಬದಲಾಗುವುದಿಲ್ಲ. ಅಜಯ್ ಮಿಶ್ರಾ ಟೆನಿ ಅವರನ್ನು ವಜಾಗೊಳಿಸಲು ನಿರಾಕರಿಸಿರುವುದು ಅದರ ನೈತಿಕ ದಿವಾಳಿತನವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *