in

ಮಾರ್ಚ್ 06 ರಂದು ವಕೀಲರಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ : ಸಿ.ಶಿವುಯಾದವ್

suddione whatsapp group join

ಚಿತ್ರದುರ್ಗ : ಹೋಳಿ ಹಬ್ಬ ಮತ್ತು ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್ 6 ನೇ ತಾರೀಖಿನಂದು  ರಾತ್ರಿ ಎಂಟು ಗಂಟೆಗೆ ನ್ಯಾಯಾಲಯದ ಮುಂಭಾಗ ಎರಡನೇ ಪ್ರದರ್ಶನವಾಗಿ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಸಿ.ಶಿವುಯಾದವ್ ತಿಳಿದಿದ್ದಾರೆ.

ಚಿತ್ರದ ಜಿಲ್ಲಾ ನ್ಯಾಯಾಲಯಕ್ಕೆ ನೂರು ವರ್ಷಗಳ ಇತಿಹಾಸವಿದೆ. ಲೋಕ ಅದಾಲತ್ ಮತ್ತು ರಾಜಿ ಸಂಧಾನಗಳ ಮೂಲಕ ಕೇಸುಗಳನ್ನು ಇತ್ಯರ್ಥಪಡಿಸಲು ಅನುಕೂಲವಾಗಲಿ ಎನ್ನುವ ಸಂದೇಶವನ್ನು ನಾಟಕದಲ್ಲಿ ಪ್ರದರ್ಶಿಸಲಾಗುವುದು.

ರಾಜಿಸಂಧಾನವನ್ನು ಕೆಲವೊಮ್ಮೆ ಎರಡು ಕಡೆಯವರು ಒಪ್ಪದಿದ್ದರೆ ಮುಂದೆ ಏನೆಲ್ಲಾ ಪರಿಣಾಮಗಳು ಎದುರಾಗುತ್ತವೆ ಎನ್ನುವ ಅಂಶವನ್ನಿಟ್ಟು ಕೊಂಡು ನಾಟಕದಲ್ಲಿ ಅಭಿನಯಿಸಲಾಗುತ್ತದೆ ಎಂದರು.

ಪ್ರಥಮ ಬಾರಿಗೆ ವಕೀಲರ ದಿನಾಚರಣೆ ಅಂಗವಾಗಿ ಪ್ರದರ್ಶನ ಮಾಡಲಾಗಿತ್ತು.  ನಾಟಕಕ್ಕೆ ವಕೀಲರುಗಳು ಅಭ್ಯಾಸದಲ್ಲಿ ತೊಡಗಿದ್ದೇವೆ. ಸದಾ ಒತ್ತಡದ ನಡುವೆ ಜೀವಿಸುವ ವಕೀಲರುಗಳಿಗೂ ಮನರಂಜನೆಯನ್ನು ನಾಟಕದ ಮೂಲಕ ನೀಡಬೇಕೆಂಬುದು ನಮ್ಮ ಉದ್ದೇಶ. ಅಂದು ಸಂಜೆ ಎಂಟು ಗಂಟೆಗೆ ಆರಂಭ ಗೊಳ್ಳುವ ನಾಟಕ ಬೆಳಗಿನ ಜಾವ ಮೂರು ಗಂಟೆಯವರೆಗೂ ಪ್ರದರ್ಶನವಾಗಬಹುದು ಎಂದರು.

ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತು ಗ್ರಾಮಾಂತರ ಭಾಗದ ಕುರುಕ್ಷೇತ್ರಕ್ಕೆ ಇರುವ ಒಲವಿಗೆ ಇದೀಗ ಎರಡನೇ ಪ್ರದರ್ಶನ ಮಾಡುತ್ತಿದ್ದೇವೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪ್ರೇಮಾವತಿ ಮನಗೊಳಿ, ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಪ್ರಭು, ಜಿಲ್ಲಾ ರಕ್ಷಣಾಧಿಕಾರಿ ಪರಶುರಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವಾಕರ್ ಇವರುಗಳು ಆಗಮಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What do you think?

-1 Points
Upvote Downvote

Written by suddionenews

Leave a Reply

Your email address will not be published.

GIPHY App Key not set. Please check settings

ರಾಜ್ಯ ಸರ್ಕಾರ ರೈತರ ಕಣ್ಣೀರು ಒರೆಸುವ ಕೆಲಸ ಮಾಡಿದೆ : ಸಚಿವ ಬಿ.ಸಿ.ಪಾಟೀಲ್

ಫಲಾನುಭವಿಗಳ ಸಮ್ಮೇಳನ : ವಸ್ತುಪ್ರದರ್ಶನ ಮಳಿಗೆಗಳಿಗೆ ಮುಗಿಬಿದ್ದ ಜನರು