ಬೆಂಗಳೂರು: ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಕುಮಾರಸ್ವಾಮಿ ಅವರು ಇದೀಗ ರಾಜ್ಯ ರಾಜಕಾರಣಕ್ಕೆ ಮತ್ತೆ ಎಂಟ್ರಿ ಕೊಡಲಿದ್ದಾರೆ. 2028ರ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯಲಿದ್ದಾರೆ. ಈ ಸಂಬಂಧ ಸಂಕ್ರಾಂತಿ ಹಬ್ಬದ ದಿನವೇ ಘೋಷಣೆಯನ್ನ ಮಾಡಿದ್ದಾರೆ. ಶೀಘ್ರದಲ್ಲಿಯೇ ನಾನು ರಾಜ್ಯ ರಾಜಕೀಯಕ್ಕೆ ಬರುತ್ತೇನೆ. ನಾನು ರಾಜ್ಯ ರಾಜಕಾರಣದಿಂದ ದೂರ ಸರಿಯುವುದಿಲ್ಲ. ಯಾವ ಸಮಯಕ್ಕೆ ಬರಬೇಕು ಅಂತ ತೀರ್ಮಾನ ಮಾಡ್ತೀನಿ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನ್ನಾಡಿರುವ ಕುಮಾರಸ್ವಾಮಿ ಅವರು, ರಾಜ್ಯ ರಾಜಕಾರಣದಿಂದ ನಾನು ದೂರ ಸರಿತಿನಿ ಅಂತ ಯಾರಾದ್ರೂ ತಿಳಿದುಕೊಂಡಿದ್ರೆ, ದೂರ ಸರಿಯುವಂತಹ ಪ್ರಶ್ನೆಯೇ ಇಲ್ಲ. ರಾಜ್ಯ ರಾಜಕಾರಣದಲ್ಲೂ ಇರ್ತೀನಿ. ಕೇಂದ್ರದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಗಳು ಹುದ್ದೆ ಕೊಟ್ಟಿದ್ದಾರೆ ಆ ಎರಡು ಇಲಾಖೆಯಲ್ಲಿ ದೇಶದಲ್ಲಿ ಪ್ರಾಮಾಣಿಕವಾಗಿ ನನ್ನ ಕೈಲಿ ಆದ ಮಟ್ಟಿಗೆ ಆ ಎರಡು ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುವುದಕ್ಕೆ ಒಂದು ಫೌಂಡೇಶನ್ ಹಾಕಿದ್ದೀನಿ. ಆ ಕೆಲಸದಲ್ಲಿ ಯಶಸ್ಸನ್ನು ಕಾಣಬೇಕು ಎಂಬುದು ಒಂದು ಭಾಗ.
ರಾಜ್ಯ ರಾಜಕಾರಣಕ್ಕೆ ಬರಲೇಬೇಕಲ್ವಾ ಎಂಬ ಮಾತನ್ನ ಹೇಳಿದ್ದಾರೆ. ಕುಮಾರಸ್ವಾಮಿ ಅವರ ಮನಸ್ಸು ಯಾವಾಗಲೂ ರಾಜ್ಯ ರಾಜಕಾರಣದತ್ತಲೇ ಇರುವಂತದ್ದು. ಆದರೆ ಬದಲಾದ ರಾಜಕೀಯ ಸನ್ನಿವೇಶಕ್ಕೆ ಹೊಂದಿಕೊಂಡು ಕೇಂದ್ರಕ್ಕೆ ಹೋಗಬೇಕಾಯ್ತು. ವಿಧಾನಸಭೆ ಚುನಾವಣೆಯ ಸಂದರ್ಭಕ್ಕೆ ಮತ್ತೆ ಬರ್ತೇನೆ ಎಂಬ ಮಾತುಗಳನ್ನ ಹೇಳಿದ್ದಾರೆ. ಇನ್ನೊಂದು ಕಡೆ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಮೈತ್ರಿ ಗೊಂದಲದಲ್ಲಿದೆ. ಆ ಗೊಂದಲವನ್ನು ನಿವಾರಿಸುವುದಕ್ಕೆ ಬಿಜೆಪಿ ಹೈಕಮಾಂಡ್ ಕುಮಾರಸ್ವಾಮಿ ಅವರನ್ನೇ ಸೂಚಿಸಿದೆ. ಅದೆಲ್ಲವನ್ನು ಬಗೆಹರಿಸಿದ ಬಳಿಕ ರಾಜ್ಯ ರಾಜಕಾರಣದಲ್ಲಿ ಹಂಗೆ ಆಕ್ಟೀವ್ ಆಗಲಿದ್ದಾರೆ.

