ರಾಮನಗರ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಈ ನಡುವೆ ಮೂರು ಪಕ್ಷಗಳು ಚುನಾವಣೆಗೆ ಭರದ ಸಿದ್ಧತೆ ನಡೆಸುತ್ತಿವೆ. ಕಾಂಗ್ರೆಸ್ ಐಕ್ಯತಾ ಯಾತ್ರೆಯಲ್ಲಿ ಬ್ಯುಸಿಯಾಗಿದ್ರೆ, ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಬ್ಯುಸಿಯಾಗಿದೆ. ಈ ಮಧ್ಯೆ ಜೆಡಿಎಸ್ ನಿಂದ ಮುಖ್ಯಮಂತ್ರಿ ಆಗೋದು ನಾನೇ ಅಂತ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ತುಂಬಾ ನೊಂದಿದ್ದೇನೆ. ಪ್ರತಿಯೊಬ್ಬರನ್ನು ನಾನೂ ತುಂಬಾ ಪ್ರೀತಿಯಿಂದ ಕಾಣೋನು. ನನ್ನ ಜೀವನದಲ್ಲಿ ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ. ಆದರೆ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಬಿಜೆಪಿಗೆ ಅಧಿಕಾರ ಶಾಶ್ವತವಾ..?
ಬೊಮ್ಮಾಯಿ ಅವರಿಗೆ ಕೇಳುತ್ತೇನೆ. ಯಾವುದೋ ಒಂದು ರೀತಿಯಲ್ಲಿ ಅಧಿಕಾರ ಸಿಕ್ಕಿದೆ. ಅದನ್ನು ನ್ಯಾಯಯುತವಾಗಿ ನಡೆಸಿಕೊಂಡು ಹೋಗಬೇಕು. ಆದರೆ ಇಂದು ಈ ಪೀಡೆ ಯಾವಾಗ ತೊಲಗುತ್ತೋ ಎಂಬಂತೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಧಮ್ ಇದ್ದರೆ.. ತಾಕತ್ ಇದ್ದರೆ ಅಂತ ಭಾಷಣ ಮಾಡುತ್ತಾರಲ್ಲ, ಯಾವ ಧಮ್ಮು, ಯಾವ ತಾಕತ್ತು..? ಯಾರಿಗಾಗಿ ಧಮ್ಮು ತೋರಿಸುತ್ತಿದ್ದೀರಾ..? ಯಾರಿಗಾಗಿ ತಾಕತ್ತು ತೋರಿಸುತ್ತಾ ಇದ್ದೀರಾ..? ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಆಗೋದು ಕುಮಾರಸ್ವಾಮಿಯೇ. ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಬಿಟ್ಟು ಯಾವನೂ ಮುಖ್ಯಮಂತ್ರಿ ಆಗುವುದಕ್ಕೆ ಆಗಲ್ಲ ಎಂದು ಚಾಲೆಂಜ್ ಹಾಕಿದ್ದಾರೆ.