ಬೆಂಗಳೂರು: ಕಳೆದ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜೆಡಿಎಸ್ ಹಾಗೂ ದೇವೇಗೌಡರ ಬಗ್ಗೆ ಕಿಡಿಕಾರಿದ್ದರು. ಪ್ರಧಾನಿಯಾಗಿದ್ದವರು, ಮುಖ್ಯಮಂತ್ರಿಯಾಗಿದ್ದವರು, ಆದರೆ ರಾಜ್ಯಕ್ಕೆ ಏನು ಮಾಡಿಲ್ಲ ಎಂದಿದ್ದರು. ಜೊತೆಗೆ 35 ಕ್ಷೇತ್ರಗಳಿಗಷ್ಟೇ ಸೀಮಿತ ಅಂತ ಕೂಡ ಹೇಳಿದ್ದರು. ಇದೀಗ ಅಮಿತ್ ಶಾ ಅವರ ಮಾತಿಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ನಮ್ಮ ವಿರೋಧಿಗಳು ಹೇಳ್ತಾರೆ ಹಳೇ ಮೈಸೂರು ಭಾಗ ಬಿಟ್ಟರೆ ಉತ್ತರ ಕರ್ನಾಟಕದಲ್ಲಿ ಬರುವುದಿಲ್ಲ ಅಂತಾರೆ. ಆದರೆ ಆ ಭಾಗದಲ್ಲಿ ಕನಿಷ್ಟ 35 ಸೀಟು ಸ್ಥಾನ ಗೆಲ್ಲುವ ಪ್ರಯತ್ನ ಮಾಡುತ್ತೇವೆ. ನಾವೂ ನಮ್ಮ ವಿಚಾರವನ್ನು ಇಟ್ಟುಕೊಂಡೇ ಜನರ ಬಳಿಗೆ ಹೋಗುತ್ತೇವೆ. ಈ ಐದು ಕಾರ್ಯಕ್ರಮ ಮಾತ್ರ ಜನರ ಮುಂದೆ ಇಡುತ್ತೇವೆ. ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡುವುದಿಲ್ಲ. ಅಮಿತ್ ಶಾ ಅವರು ಬಂದು ನಮ್ಮ ಕುಟುಂಬ ಹಾಗೂ ಜೆಡಿಎಸ್ ಪಕ್ಷದ ಬಗ್ಗೆ ಟೀಕೆ ಮಾಡಿದ್ದಾರೆ.
ಸ್ವತಂತ್ರ ಸರ್ಕಾರ ತರುವುದು ನಮ್ಮ ಗುರಿ. ಜೆಡಿಎಸ್ ಪಕ್ಷವನ್ನು 35 ಸೀಟುಗಳಿಗೆ ಕಟ್ಟಿ ಹಾಕುತ್ತೇವೆ ಎಂದು ಹೇಳಿದ್ದಾರೆ. ಕೊನೆ ಪಕ್ಷ ನಾವೂ ಅಷ್ಟು ಸೀಟು ಗೆಲ್ಲುತ್ತೇವೆ ಎಂಬುದನ್ನು ಅಮಿತ್ ಶಾ ಅವರೇ ಹೇಳಿದ್ದಾರೆ. ಅವರಿಗೆ ನಾವೂ ಆಬಾರಿಯಾಗಿರುತ್ತೇನೆ. ಬಿಜೆಪಿ, ಕಾಂಗ್ರೆಸ್ ರೀತಿಯಲ್ಲಿ ನಾವೂ ದೊಡ್ಡಮಟ್ಟದ ಕಾರ್ಯತಂತ್ರ ರೂಪಿಸಿ ಹೋಗುತ್ತಿಲ್ಲ. ಪಂಚರತ್ನ ನಮ್ಮ ಕಾರ್ಯಕ್ರಮ ಮಾತ್ರ. ಅದನ್ನೇ ಜನರಿಗೆ ತಲುಪಿಸುತ್ತೇನೆ ಎಂದಿದ್ದಾರೆ.