ತುಮಕೂರು: ರಾಜ್ಯಸಭೆ ಚುನಾವಣೆ ಮುಗಿದ ಬೆನ್ನಲ್ಲೇ ತಿಥಿ ಕಾರ್ಡ್ ಗಳ ಹಾರಾಟ ಜೋರಾಗಿದೆ. ರಾಜ್ಯಸಭಾ ಚುನಾವಣೆಯಲ್ಲಿ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅಡ್ಡಮತದಾನ ಮಾಡಿದ್ದಾರೆ. ಶ್ರೀನಿವಾಸ್ ಬಿಜೆಪಿಗೆ ತಮ್ಮ ಮತ ನೀಡಿದ್ದಾರೆ. ಈ ಹಿನ್ನೆಲೆ ರೊಚ್ಚಿಗೆದ್ದ ಜೆಡಿಎಸ್ ಕಾರ್ಯಕರ್ತರು ಶ್ರೀನಿವಾಸ್ ಅವರ ತಿಥಿ ಕಾರ್ಡ್ ಹೊರಡಿಸಿದ್ದಾರೆ. ಪ್ರಚಂಡ ಭೈರವ ಎಂಬ ಪೇಜ್ ನಲ್ಲಿ ತಿಥಿ ಕಾರ್ಡ್ ಪೋಸ್ಟ್ ಮಾಡಲಾಗಿದೆ.
ಶಾಸಕ ಶ್ರೀನಿವಾಸ್ ಮತ್ತು ಕುಮಾರಸ್ವಾಮಿ ಬೆಂಬಲಿಗರ ನಡುವೆ ಇದೀಗ ತಿಥಿ ಕಾರ್ಡ್ ಯುದ್ಧ ಶುರುವಾಗಿದೆ. ನಿನ್ನೆ ಕುಮಾರಸ್ವಾಮಿ ಬೆಂಬಲಿಗರು ತಿಥಿ ಕಾರ್ಡ್ ಹೊರಡಿಸಿದ್ದರು. ಇಂದು ಶ್ರೀನಿವಾಸ್ ಅವರ ಬೆಂಬಲಿಗರು ತಿಥಿ ಕಾರ್ಡ್ ಹೊರಡಿಸಿದ್ದಾರೆ. ಎಸ್ ಆರ್ ಶ್ರೀನಿವಾಸ್ ಬೆಂಬಗಲಿಗರ ಪೇಜ್ ನಲ್ಲಿ ತಿಥಿ ಪೋಸ್ಟ್ ಹಾಕಲಾಗಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಶಾಸಕ ಶ್ರೀನಿವಾಸ್ ಬದುಕಿರುವಾಗಲೇ ಈ ರೀತಿ ತಿಥಿ ಕಾರ್ಡ್ ಮಾಡಿಸಿದ್ದಾರೆ. ಬೆಂಬಲಿಗರ ನಡುವಿನ ಗುದ್ದಾಟ ಇನ್ನು ಯಾವ ಮಟ್ಟಕ್ಕೆ ಹೋಗುತ್ತದೋ ಎಂಬುದನ್ನು ನೋಡಬೇಕಿದೆ.