ಬಿಜೆಪಿಯವರಿಗಿಂತ ಕುಮಾರಸ್ವಾಮಿ ಅವರೇ RSS ಬಗ್ಗೆ ಹೆಚ್ಚಿನ ಭಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ : ಕಾಂಗ್ರೆಸ್ ಟೀಕೆ

suddionenews
1 Min Read

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಮುನ್ನುಗ್ಗುತ್ತಿದೆ. ಈ ಮೈತ್ರಿಗೆ ಎರಡು ಪಕ್ಷದಲ್ಲೂ ವಿರೋಧವಿದೆ. ಆದರೂ ಮೈತ್ರಿ ಮುಂದುವರೆದಿದೆ. ಮೈತ್ರಿ ಮಾಡಿಕೊಂಡ ಮೇಲೆ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರ ಜೊತೆಗೆ ಒಡನಾಟ ಹೆಚ್ಚಾಗಿದೆ. ಮೊನ್ನೆ ಮೊನ್ನೆ ಕಲ್ಲಡ್ಕ ಪ್ರಭಾಕರ್ ಭೇಟಿ ಮಾಡಿದ್ದರು. ಪಾಸಿಟಿವ್ ಆಗಿ ಮಾತನಾಡಿದ್ದರು. ಇದೀಗ ಕಾಂಗ್ರೆಸ್ ಈ ವಿಚಾರವಾಗಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದೆ.

ಕುಮಾರಸ್ವಾಮಿಯವರು ಬಿಜೆಪಿಯವರಿಗಿಂತ ಹೆಚ್ಚು RSS ಭಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ, ಅವರು ಕೋಮುವಾದದ ಕಡೆಗೆ ಹೋಗುತ್ತಿರುವ ಸ್ಪೀಡ್ ನೋಡಿದರೆ ಕೆಲವೇ ದಿನಗಳಲ್ಲಿ ಬಿಜೆಪಿಗರನ್ನೇ ಓವರ್ ಟೇಕ್ ಮಾಡಿ ಬಿಜೆಪಿಯ ಅಧ್ಯಕ್ಷರಾದರೂ ಅಚ್ಚರಿ ಇಲ್ಲ. ಬಿಜೆಪಿಯವರ ಒಳಜಗಳ ಕುಮಾರಸ್ವಾಮಿಯವರಿಗೆ ವರದಾನವಾಗಲಿದೆ, ಬಿಜೆಪಿ ಹೈಕಮಾಂಡ್ ಕುಮಾರಸ್ವಾಮಿಯವರನ್ನು ರಾಜ್ಯ ಬಿಜೆಪಿಗೆ ಪ್ರತಿಷ್ಠಾಪಿಸಿದರೂ ಅತಿಶಯೋಕ್ತಿ ಇಲ್ಲ. ಎಚ್ಚರಾಗಿ @RAshokaBJP @BYVijayendra.

 

ಬಿಜೆಪಿಯಲ್ಲಿ ಸಮನ್ವಯತೆಯ ಕೊರತೆ ಇದೆ ಎನ್ನುವುದನ್ನು ಸ್ವತಃ ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. ಅಸಲಿಗೆ ಇದು ಸಮನ್ವಯತೆಯ ಕೊರತೆಯಲ್ಲ, ಅಂತರ್ಯುದ್ಧದ ಪ್ರಭಾವ. ಬಿಜೆಪಿಯಲ್ಲಿ ಹಲವರಿಗೆ @RAshokaBJP ಅವರನ್ನು ಒಪ್ಪಿಕೊಳ್ಳಲಾಗುತ್ತಿಲ್ಲ, ಇನ್ನೂ ಹಲವರಿಗೆ @BYVijayendra ಅವರನ್ನು ಸಹಿಸಲಾಗುತ್ತಿಲ್ಲ. ಇಷ್ಟು ದಿನ ವಿರೋಧ ಪಕ್ಷದ ನಾಯಕನಿರಲಿಲ್ಲ, ಈಗ ವಿರೋಧ ಪಕ್ಷದ ನಾಯಕನಿಗೆ ಬೆಂಬಲವೇ ಇಲ್ಲ. ಒಟ್ಟಿನಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *