ಬೆಂಗಳೂರು: ಜೆಡಿಎಸ್ ನಲ್ಲಿ ಯಾವಾಗಲೂ ಕುಟುಂಬ ರಾಜಕಾರಣವೇ ನಡೆಯುತ್ತೆ ಎಂಬ ಆರೋಪವಿದೆ. ಈ ಬಗ್ಗೆ ಕುಮಾರಸ್ವಾಮಿ ಯಾವಾಗಲೂ ಬೇಸರ ಹೊರ ಹಾಕುತ್ತಾರೆ. ಅದರಂತೆ ಇಂದು ಕೂಡ ಬೇಸರ ಹೊರ ಹಾಕಿದ್ದು, ಸಿದ್ದರಾಮಯ್ಯ ಅವರು ತಮ್ಮ ಮೊಮ್ಮಗನನ್ನು ರಾಜಕೀಯವಾಗಿ ತರುತ್ತೇನೆ ಎಂದಿದ್ದಾರೆ. ಇದಕ್ಕೆ ಯಾರು ಮಾತನಾಡಲ್ಲ ಎಂದಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಕಾರಣಕ್ಕೆ ಇಂದು ಆತ್ಮಾವಲೋಕನ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಗೌಡರದ್ದು ಕುಟುಂಬ ರಾಜಕಾರಣ ಎಂದು ಅಪಪ್ರಚಾರ ಮಾಡುತ್ತಾರೆ. ಎಲ್ಲದನ್ನು ನನ್ನ ತಲೆಗೆ ಕಟ್ಟಬೇಡಿ. ಗೌಡರ ಕುಟುಂಬ ಎಂಬ ಕಪ್ಪು ಚುಕ್ಕಿ ತರಬೇಡಿ. ಲೋಕಸಭಾ ಚುನಾವಣೆಯ ನಂತರ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಬೆಂಗಳೂರಿನ ಪರಿಸ್ಥಿತಿ ಏನಾಗಿದೆ. ಮಳೆಯಿಂದಾಗಿ ಎರಡು ಸಾವಾಗಿದೆ.
ಚುನಾವಣಾ ಸಮಯದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುತ್ತೀರಿ. ಬೆಂಗಳೂರಿನಲ್ಲಿ ಮಳೆಯಿಂದಾದ ಗುಂಡಿ ಮುಚ್ಚಲು ಎರಡು ಸಾವಿರ ಕೋಟಿ ತಗೆದುಕೊಳ್ಳುತ್ತಾರೆ. ಸಮಸ್ಯೆಗಳನ್ನು ಇಟ್ಟುಕೊಂಡು ಹೋರಾಟ ರೂಪಿಸಿ ಎಂದು ತಮ್ಮ ಕಾರ್ಯಕರ್ತರಿಗೆ ಸಲಹೆ ನೀಡಿದ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.





GIPHY App Key not set. Please check settings