ತುಮಕೂರು: ವೈದ್ಯೋ ನಾರಾಯಣ ಹರಿ ಅನ್ನೋ ಮಾತು ಇತ್ತು. ರೋಗಿಗಳಿಗೆ ವೈದ್ಯರೆ ದೇವರಾದಾಗ. ಆದ್ರೆ ಈಗ ಎಲ್ಲವೂ ಬಿಸಿನೆಸ್ ಆದಾಗಿನಿಂದ ಈ ಪದಕ್ಕೆ ಅಲ್ಲೋ ಇಲ್ಲೋ.. ಆಗಲೋ.. ಈಗಲೋ ಒಮ್ಮೆಮ್ಮೆ ಬೆಲೆ ಸಿಗುತ್ತೆ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ತುಮಕೂರಿನಲ್ಲಿ ನಡೆದ ಘಟನೆ.
ಆರು ವರ್ಷದ ಬಾಲಕ ಸಾಧಿಕ್ ಎಂಬಾತ ಆಟವಾಡುವಾಗ ಸಂಪ್ ನಲ್ಲಿ ಬಿದ್ದು ಬಿಟ್ಟಿದ್ದ. ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಕರೆದರು ಇಲ್ಲ.. ಕಷ್ಟಪಟ್ಟು ಆಸ್ಪತ್ರೆಗೆ ಕರೆದುಕೊಂಡು ಹೋದರೆ ಅಲ್ಲಿಯೂ ವೈದ್ಯರಿಲ್ಲ. ಚಿಕಿತ್ಸೆ ಸಿಗದೆ ಚಿಕ್ಕ ಮಗು ಬದುಕುವುದಾದರೂ ಹೇಗೆ. ಮಗುವನ್ನು ಕಳೆದುಕೊಂಡು ಕುಟುಂಬಸ್ಥರು ದುಃಖದಲ್ಲಿದ್ದರು. ಅಂತ್ಯಸಂಸ್ಕಾರ ಮಾಡುವ ಮುನ್ನ ಜೆಡಿಎಸ್ ಪಂಚರತ್ನ ಯಾತ್ರೆ ತುಮಕೂರು ತಲುಪಿತ್ತು. ಕುಮಾರಸ್ವಾಮಿ ಅವರು ತುಮಕೂರಿನಲ್ಲಿದ್ದರು.
ಹೇಳಿ ಕೇಳಿ ಬಡವರ ಕಷ್ಟಗಳಿಗೆ ಕುಮಾರಸ್ವಾಮಿ ಅವರು ವಿಪರೀತ ಕರಗುತ್ತಾರೆ. ಮೃತ ಬಾಲಕನ ಕುಟುಂಬಸ್ಥರು ಬಾಲಕನ ಮೃತದೇಹವನ್ನು ತೆಗೆದುಕೊಂಡು ಹೋಗಿ ಕುಮಾರಸ್ವಾಮಿ ಅವರ ಮುಂದಿಟ್ಟು ನಡೆದಿದ್ದೆಲ್ಲವನ್ನು ವಿವರಿಸಿದ್ದರು. ಇದನ್ನು ಕಂಡು ಕುಮಾರಸ್ವಾಮಿ ಮರುಗಿದರು. ಮೃತದೇಹದ ಮುಂದೆಯೇ ಈ ಅನಾಹುತಕ್ಕೆ ಕಾರಣರಾದ ವೈದ್ಯರು ಹಾಗೂ ಆಂಬ್ಯುಲೆನ್ಸ್ ಡ್ರೈವರ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಇದೀಗ ಸರ್ಕಾರ ಈ ಘಟನೆಗೆ ಸಂಬಂಧಿಸಿದಂತೆ ವೈದ್ಯ ರೋಹಿತ್ ಹಾಗೂ ಚಾಲಕ ಸೀನಪ್ಪನನ್ನು ಅಮಾನತುಗೊಳಿಸಿದ್ದಾರೆ. ಆಸ್ಪತ್ರೆಯಲ್ಲಿರುವ ಸಿಸಿಟಿವಿ ಕೂಡ ಕೆಲಸ ಮಾಡುತ್ತಿಲ್ಲ. ಕರ್ತವ್ಯ ಲೋಪದಡಿ ಅಮಾನತುಗೊಳಿಸಿದ್ದು, ಹದಿನೈದು ದಿನಗಳ ಒಳಗಾಗಿ ಉತ್ತರ ನೀಡುವಂತೆ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ.