ಬೆಂಗಳೂರು: ಸಿಎಂ ಆಗಿದ್ದಾಗ ರಾಸಲೀಲೆ ಮಾಡಿಕೊಂಡು ಕೂತು, ಈಗ ಜಿಲ್ಲೆ ಕಡೆ ಬರ್ತಿದ್ದಾರೆ ಎಂದು ಸಿ ಪಿ ಯೋಗೀಶ್ವರ್ ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಆಕ್ರೋಶ ಹೊರ ಹಾಕಿದ್ದರು. ಇದೀಗ ಯೋಗೀಶ್ವರ್ ಗೆ ಅಭಿವೃದ್ಧಿ ವಿಚಾರದಲ್ಲಿ ತಿರುಗೇಟು ನೀಡಿದ್ದಾರೆ ಕುಮಾರಸ್ವಾಮಿ.
ಈ ಬಗ್ಗೆ ಮಾತನಾಡಿದ ಅವರು, ಚನ್ನಪಟ್ಟಣ ಬಿಟ್ಟು ಓಡಿ ಹೋಗ್ತೀನಾ. ನಾನ್ ಕೆಲಸ ಮಾಡಿದ್ದೀನಾ ಇಲ್ಲ ಇವರು ಅಭಿವೃದ್ಧಿ ಮಾಡಿದ್ದಾರಾ…? ಆ ಬಸ್ ಸ್ಟಾಪ್ ನಲ್ಲಿ ನಮ್ದ ಕರ್ಮಕಾಂಡ..? ಎಂದು ಪ್ರಶ್ನಿಸಿದ್ದಾರೆ.
ಅಭಿವೃದ್ಧಿಗೆ 32 ಕೋಟಿ ಅಂತೇಳಿ ಪ್ರಾಧಿಕಾರ ತೀರ್ಮಾನ ಆಗಿತ್ತು. ಅವನ್ ಯಾವನೋ ಅಲ್ಲಿ ಗುಂಡಿ ತೆಗೆಸಿದ್ದಾನೆ. ಬರೀ ಮಣ್ಣು ತೆಗೆಸಿರೋದಕ್ಕೆ ನಾಲ್ಕು ಕೋಟಿ ಬಿಲ್ಲು ಮಾಡಿದ್ದಾನೆ. ಅಲ್ಲ ರೀ ಈ ಕರ್ಮಕಾಂಡಕ್ಕೆ ನಾನು ಹಣ ಕೊಡಿಸ್ಬೇಕಾ..?. ಹೋಗಿ ಆ ಖಾಸಗಿ ಬಸ್ ಸ್ಟಾಂಡ್ ನಲ್ಲಿ ಒಮ್ಮೆ ನೋಡಿ. ತಗಡು ಶೀಟ್ ಹೊಡೆಸಿ ಇಟ್ಟವ್ನೆ. ಇದು ಇವ್ನ ಕಾಲಘಟ್ಟದಲ್ಲಿ ಆದ ಅಭಿವೃದ್ಧಿ. ಅಂಬೇಡ್ಕರ್ ಭವನದಲ್ಲಿ ನೀರು ನಿಂತಿದೆ. ಈಗ ನಾನ್ ಅದನ್ನ ಕ್ಲೀನ್ ಮಾಡಿಸ್ಬೇಕು ಎಂದಿದ್ದಾರೆ.
ಇನ್ನು ಸಿಎಂ ಆಗಿದ್ದಾಗ ಬರಲಿಲ್ಲ, ಈಗ ಬರ್ತಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ್ದು, ನಾನು ಸಿಎಂ ಆಗಿದ್ದು ಚನ್ನಪಟ್ಟಣಕ್ಕಲ್ಲ. ರಾಜ್ಯಕ್ಕೆ. ರಾಜ್ಯದ ಸಮಸ್ಯೆ ಬಗೆಹರಿಸೋ ಜವಬ್ದಾರಿ ಇತ್ತು. ಇವ್ನಲ್ಲ ಸರ್ಟಿಫಿಕೇಟ್ ಕೊಡೋದು ನಂಗೆ ಆಯ್ಕೆ ಮಾಡಿರುವಂತೆ ಜನ ಕೊಡಬೇಕು. ನಾನೇನು ಕಣ್ಣೀರಾಕಿಕೊಂಡು ಹೋಗಿಲ್ಲ ಎಂದು ಸಿ ಪಿ ಯೋಗಿಶ್ವರ್ ಗೆ ತಿರುಗೇಟು ನೀಡಿದ್ದಾರೆ.