ದಾವಣಗೆರೆ (ಡಿ.14): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಾವಣಗೆರೆ ವಿಭಾಗ ವತಿಯಿಂದ ಕ.ರಾ.ರ.ಸಾ ಸಂಸ್ಥೆಯಲ್ಲಿ ಕಾರ್ಗೋ ಪಾರ್ಸಲ್ ಸೇವಾ ಕೇಂದ್ರವನ್ನು ಮಾ.02 ರಿಂದ ಪ್ರಾರಂಭಿಸಲಾಗಿರುತ್ತದೆ.

ಪ್ರಸ್ತುತ ಹೈಸ್ಕೂಲ್ ಮೈದಾನದಲ್ಲಿರುವ ಕೆ.ಎಸ್.ಆರ್.ಟಿ.ಸಿಯ ದಾವಣಗೆರೆ ತಾತ್ಕಾಲಿಕ ಬಸ್ ನಿಲ್ದಾಣದಿಂದ ಸರಕು ಸಾಮಗ್ರಿಗಳನ್ನು ಅತೀ ಕಡಿಮೆ ಕೈಗೆಟಕುವ ಸಾಗಾಣಿಕೆ ದರ, ತ್ವರಿತ ಹಾಗೂ ಬೆಲೆಬಾಳುವ ವಸ್ತುವಿಗೆ ಸುರಕ್ಷಿತ ವಿಮಾ ವ್ಯವಸ್ಥೆಯೊಂದಿಗೆ ಕಾರ್ಗೋ ಪಾರ್ಸಲ್ ಸೇವೆಯನ್ನು ಬಳಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕ.ರಾ.ರ.ಸಾ ನಿಗಮ ದಾವಣಗೆರೆ ಕಚೇರಿ, ವಿಭಾಗೀಯ ಸಂಚಾರ ಅಧಿಕಾರಿ ಮೊ.ಸಂ:7760990452, ಸಹಾಯಕ ಸಂಚಾರ ವ್ಯವಸ್ಥಾಪಕರು ಮೊ.ಸಂ: 7760990461, ಸಹಾಯಕ ಸಂಚಾರ ನಿರೀಕ್ಷಕರು ಮೊ.ಸಂ: 9945941875ನ್ನು ಸಂಪರ್ಕಿಸಬಹುದೆಂದು ಕ.ರಾ.ರ.ಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

