ಕೆಜಿಎಫ್ ತಾತ ಎಂಬ ಖ್ಯಾತಿ ಪಡೆದಿದ್ದ ಕೃಷ್ಣ ಜಿ ರಾವ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. 72 ವರ್ಷ ವಯಸ್ಸಿನವರಾದ ಕೃಷ್ಣ ಜಿ ರಾವ್ ಅವರು ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಂಕರ್ ನಾಗ್ ಕಾಲದಿಂದಾನು ಚಿತ್ರರಂಗದಲ್ಲಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಆದ್ರೆ ಕೆಜಿಎಫ್ ಸರಣಿಯಲ್ಲಿ ಯಶ್ ಜೊತೆಗೆ ನಟಿಸಿದ್ದಾರೆ. ಈ ಸಿನಿಮಾದಲ್ಲಿಯೇ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ತಕ್ಷಣ ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ.
ಕಳೆದ ಎರಡು ದಿನದಿಂದ ಊಟ ಸೇವಿಸದ ಕಾರಣ ಸ್ವಲ್ಪ ಸುಸ್ತಾಗಿದ್ದರು. ಜೊತೆಗೆ ಉಸಿರಾಟದ ಸಮಸ್ಯೆ ಕಾಡಿದ್ದ ಕಾರಣ ಅವರನ್ನು ಐಸಿಯು ವಾರ್ಡ್ ನಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ.