ಕೆಜಿಎಫ್ ಸಿನಿಮಾದಲ್ಲಿ ಒಂದೊಂದು ಪಾತ್ರವು ಎಲ್ಲರನ್ನು ಹಿಡಿದಿಟ್ಟಿತ್ತು. ಎಲ್ಲರು ನೆನಪಿನಲ್ಲಿ ಉಳಿದಿದ್ದರು. ಅದರಲ್ಲೂ ಕೆಜಿಎಫ್ ಒಳಗೆ ಕೆಲಸ ಮಾಡುತ್ತಿದ್ದ ತಾತ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು. ಕಡಿಮೆ ಸಮಯದಲ್ಲಿ ತಾತಾ ಕಾಣಿಸಿಕೊಂಡಿದ್ದರು, ಎಲ್ಲರ ನೆನಪೊಳಗೆ ಉಳಿದು ಬಿಟ್ಟಿದ್ದರು. ಆದರೆ ಇದೀಗ ತಾತಾ ಅನಾರೋಗ್ಯದ ಕಾರಣದಿಂದ ಸಾವನ್ನಪ್ಪಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೆಜಿಎಫ್ ತಾತಾ ಕೃಷ್ಣಾ ಜಿ ರಾವ್ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ಸಮಸ್ಯೆಯಿಂದಾಗಿ ತಾತಾನನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಕಳೆದ ಐದು ದಿನಗಳಿಂದ ವೈದ್ಯರು ಕೂಡ ಸಾಕಷ್ಟು ಪ್ರಯತ್ನಗಳನ್ನು ಮಾಡಿದರು. ಚಿಕಿತ್ಸೆ ಪರಿಣಾಮಕಾರಿಯಾಗಿ ನೀಡಲು ಯತ್ನಿಸಿದರು. ಆದರೂ ತಾತ ಬದುಕುಳಿಯಲಿಲ್ಲ. ಅವರ ಸಾವಿಗೆ ಚಿತ್ರರಂಗದವರು ಕಂಬನಿ ಮಿಡಿದಿದ್ದಾರೆ.