Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ನಿನ್ನೆಯೆಲ್ಲಾ ಗೃಹಲಕ್ಷ್ಮೀ.. ಇಂದು ಕೃಷ್ಣ ಭೈರೇಗೌಡರ ಭೂ ವಿವಾದ : ಬಿಜೆಪಿಯ ಪ್ಲ್ಯಾನ್ ಏನು..?

---Advertisement---

ಬೆಂಗಳೂರು: ಬೆಳಗಾವಿಯ ಅಧಿವೇಶನದಲ್ಲಿ ಈ ಸಲ ಅತಿ ಹೆಚ್ಚು ಚರ್ಚೆಯಾಗ್ತಾ ಇರುವವರು ಸಚಿವರುಗಳೇ. ನಿನ್ನೆ ಸದನದಲ್ಲಜ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುರಿತಾದ ಚರ್ಚೆಗಳೇ ನಡೆದಿತ್ತು. ಗೃಹಲಕ್ಷ್ಮೀ ಯೋಜನೆ, ಹಣದ ಬಗ್ಗೆ ವಿರೋಧ ಪಕ್ಷದ ನಾಯಕರು ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಇಂದಿನ ಅಧಿವೇಶನದಲ್ಲಿ ಮತ್ತೊಬ್ಬ ಸಚಿವರ ಕುರಿತು ಸದ್ದು ಗದ್ದಲ ಮಾಡುವುದಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಂದ್ರೆ ಸಚಿವ ಕೃಷ್ಣ ಭೈರೇಗೌಡ ಅವರ ಭೂ ವಿವಾದ ಚರ್ಚೆಗೆ ಬರುವ ಸಾಧ್ಯತೆ ಇದೆ.

ಕೃಷ್ಣ ಭೈರೇಗೌಡ ಅವರ ಭೂವಿವಾದ ಮೇಲೆ ಇಂದು ಉಭಯ ಕಲಾಪದಲ್ಲಿ ವಿಷಯವನ್ನು ಕಲಕುವುದಕ್ಕೆ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ 21.16 ಎಕರೆ ಖರಾಬು ಜಮೀನು ಕಬಳಿಕೆ ಮಾಡಿದ ಆರೋಪ ಕೃಷ್ಣ ಭೈರೇಗೌಡ ಅವರ ಮೇಲೆ ಹೊರಿಸಲಾಗಿದೆ. ಛಲವಾದಿ ನಾರಾಯಣಸ್ವಾಮಿ, ರವಿಕುಮಾರ್, ತಮ್ಮೇಶ್ ಗೌಡ ಅವರು ಈಗಾಗಲೇ ಈ ಸಂಬಂಧ ದಾಖಲೆ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಉತ್ತರ ಕೊಡಲಿ ಎಂದು ಪಟ್ಟು ಹಿಡಿದಿದ್ದಾರೆ.

1978ರಲ್ಲಿ ಮಸಣದ ಜಾಗವನ್ನು ಖರಾಬು ಭೂಮಿ ಅಂತ ಇದ್ದಂತ ಜಾಗಕ್ಕೆ‌ಈಗ ಆರ್ಟಿಸಿ ತೆಗೆದು ನೋಡಿದರೆ ಕೃಷ್ಣ ಭೈರೇಗೌಡರ ಹೆಸರು ಬಂದಿದೆ. ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದಾರೆ. ಸ್ಮಶಾನದ ಜಾಗ ಇವರ ಹೆಸರಿಗೆ ಬರುವುದಕ್ಕೆ ಹೇಗೆ ಸಾಧ್ಯ. ಇದು ಸಂಪೂರ್ಣವಾಗಿ ಅಧಿಕಾರದ ದುರ್ಬಳಕೆಯೇ ಅಂತ ಸಾಲು ಸಾಲು ಆರೋಪಗಳನ್ನ ಬಿಜೆಪಿ ನಾಯಕರು ಮಾಡುತ್ತಾ ಇದ್ದಾರೆ. ಈ ಸಂಬಂಧ ಇಂದು ಕಲಾಪದಲ್ಲಿಯೂ ಈ ಬಗ್ಗೆ ಬಿಜೆಪಿ ನಾಯಕರು ಗದ್ದಲ ಎಬ್ಬಿಸುವ ಎಲ್ಲಾ ಸಾಧ್ಯತೆಯೂ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...